ನವದೆಹಲಿ(ಝೂ.19): ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ, 12 ಸುಖೋಯ್‌ ಹಾಗೂ 21 ಮಿಗ್‌-29 ಯುದ್ಧವಿಮಾನಗಳನ್ನು ಖರೀದಿಸಲು ಭಾರತೀಯ ವಾಯುಪಡೆ ನಿರ್ಧರಿಸಿದೆ.

"

ಈ ಯುದ್ಧ ವಿಮಾನಗಳನ್ನು ತ್ವರಿತವಾಗಿ ಖರೀದಿಸುವ ಸಂಬಂಧ ವಾಯುಪಡೆಯು ಸರ್ಕಾರಕ್ಕೆ ತನ್ನ ಪ್ರಸ್ತಾವನೆ ಸಲ್ಲಿಸಿದೆ. 5 ಸಾವಿರ ಕೋಟಿ ರು. ವೆಚ್ಚದ ಈ ಖರೀದಿ ಪ್ರಕ್ರಿಯೆ ರಕ್ಷಣಾ ಸಚಿವಾಲಯವು ಕುರಿತು ಮುಂದಿನ ವಾರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಚೀನಾದಿಂದ ದೈತ್ಯ ಉಪಕರಣ, ಸಾವಿರಾರು ಯೋಧರ ರವಾನೆ: ಚೀನಿಯರು ಕಾಲಿಟ್ಟರೆ ದಾಳಿಗೆ ಕೇಂದ್ರ ಸೂಚನೆ

ರಷ್ಯಾದಿಂದ ಮಿಗ್‌-29 ಯುದ್ಧವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಇವು ಈಗಿರುವ ಮಿಗ್‌-29 ಯುದ್ಧವಿಮಾನಕ್ಕಿಂತ ಸುಧಾರಿತ ದರ್ಜೆಯದ್ದಾಗಿವೆ. ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ನಂತರದ ಅತಿ ದೊಡ್ಡ ಯುದ್ಧವಿಮಾನ ಖರೀದಿ ವ್ಯವಹಾರವಾಗಲಿದೆ.

ಇನ್ನು ಚೀನಾ ಕಳ್ಳಾಟ ಸಹಿಸೋದಿಲ್ಲ-ಭಾರತ

‘ನಮ್ಮ ಯೋಧರು ಗಡಿಯಿಂದ ಹಿಂದೆ ಸರಿಯುವುದಿಲ್ಲ. ನಮ್ಮ ದೇಶಕ್ಕೆ ಸೇರಿದ ಸಾರ್ವಭೌಮ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಚೀನಾ ಬಹಳ ವರ್ಷಗಳಿಂದ ಈ ಪ್ರದೇಶಗಳಲ್ಲಿ ಒಳನುಸುಳುವುದು, ನಂತರ ಈ ಭೂಭಾಗವೇ ತನ್ನದು ಎಂದು ಸುಳ್ಳು ಹೇಳುವುದು, ಭಾರತ ತಿರುಗೇಟು ನೀಡಿದಾಗ ಭಾರತವೇ ತನ್ನ ಗಡಿಯೊಳಗೆ ನುಸುಳಿದೆ ಎಂದು ಬಣ್ಣ ಕಟ್ಟಿಹೇಳುವುದು ಹೀಗೆ ಕಳ್ಳಾಟ ಆಡುತ್ತಲೇ ಬಂದಿದೆ. ಇನ್ನುಮುಂದೆ ಈ ಆಟ ನಡೆಯುವುದಿಲ್ಲ. ಚೀನಾದ ಸೇನೆ ತಕ್ಕ ಬೆಲೆ ತೆರುವಂತೆ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವೆ ಲಡಾಖ್‌ ಬಿಕ್ಕಟ್ಟಿನ ಬೆನ್ನಲ್ಲೇ, ಇಂಡೋ- ಏಷ್ಯಾ ಪೆಸಿಫಿಕ್‌ ವಲಯಕ್ಕೆ ಅಮೆರಿಕ ತನ್ನ ಬಳಿ ಇರುವ 11 ಅಣ್ವಸ್ತ್ರ ಯುದ್ಧನೌಕೆಗಳ ಪೈಕಿ ಮೂರನ್ನು ರವಾನಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದು ಚೀನಾಕ್ಕೆ ಪರೋಕ್ಷ ಸಂದೇಶ ರವಾನಿಸುವ ಅಮೆರಿಕದ ಯತ್ನ ಇರಬಹುದು ಎಂಬ ಊಹಾಪೋಹಗಳ ಬೆನ್ನಲ್ಲೇ, ಈ ನಿಯೋಜನೆ ಯಾವುದೇ ಜಾಗತಿಕ ಅಥವಾ ರಾಜಕೀಯ ಘಟನೆಗಳಿಗೆ ಪ್ರತಿಕ್ರಿಯೆ ಅಲ್ಲ ಎಂದು ಅಮೆರಿಕದ ನೌಕಾಪಡೆ ಸ್ಪಷ್ಟನೆ ನೀಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ಭಾರಿ ಬಹುಮತದ ಆಯ್ಕೆ

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ನೌಕಾಪಡೆಯ ವಕ್ತಾರ ಕ.ರಿಯಾನ್‌ ಮಾಮ್ಸನ್‌, ಇದು ಯಾವುದೇ ಘಟನೆ ಅಥವಾ ಅಮೆರಿಕದ ಸನ್ನದ್ಧ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ಅಲ್ಲ. ಇದು ಇಂಡೋ- ಪೆಸಿಫಿಕ್‌ ವಲಯದಲ್ಲಿ ಭದ್ರತೆ, ಸ್ಥಿರತೆ ಕಾಪಾಡುವ ಯತ್ನದ ಒಂದು ಭಾಗವಷ್ಟೇ. ಈ ವಲಯದಲ್ಲಿ ದೈನಂದಿನ ಆಧಾರದಲ್ಲಿ ಅಮೆರಿಕದ ನೌಕಾಪಡೆ ಪಹರೆ ಮೂಲಕ ತನ್ನ ಮಿತ್ರ ದೇಶಗಳು ಮತ್ತು ಪಾಲುದಾರರಿಗೆ ಬೆಂಬಲ ನೀಡುವ ಯತ್ನ ಮಾಡುತ್ತದೆ ಎಂದು ಹೇಳಿದ್ದಾರೆ.ಇಂಡೋ ಪೆಸಿಫಿಕ್‌ ವಲಯದಲ್ಲಿ ಅಮೆರಿಕವು ಯುಎಸ್‌ಎಸ್‌ ರೊನಾಲ್ಡ್‌ ರೆಗಾನ್‌, ಯುಎಸ್‌ಎಸ್‌ ಥಿಯೋಡೋರ್‌ ರೂಸ್‌ವೆಲ್ಟ್‌ ಮತ್ತು ಯುಎಸ್‌ಎಸ್‌ ನಿಮಿಟ್‌್ಜ ನೌಕೆಗಳನ್ನು ಜೂ.15ರಿಂದ ನಿಯೋಜಿಸಿದೆ. ಈ ಪ್ರತಿ ಯುದ್ಧನೌಕೆಯಲ್ಲೂ ತಲಾ 60 ಯುದ್ಧ ವಿಮಾನಗಳಿವೆ.