Asianet Suvarna News Asianet Suvarna News

ಇರಾನ್-ಅಮೆರಿಕಕ್ಕೆ ಭಾರತದ ಸಂದೇಶ: ಹೀಗೆ ಮನವಿ ಮಾಡಿದ್ದೇ ವಿಶೇಷ!

ಅಮೆರಿಕ-ಇರಾನ್ ನಡುವೆ ಶುರುವಾಗಿದೆ ಯುದ್ಧ ಭೀತಿ| ಅಮೆರಿಕದ  ಏರ್ ಸ್ಟ್ರೈಕ್’ನಲ್ಲಿ ಇರಾನ್’ನ ಉನ್ನತ ಸೇನಾಧಿಕಾರಿ ಸಾವು| ಬಾಗ್ದಾದ್ ಏರ್ ಸಟ್ರೈಕ್’ನಲ್ಲಿ ಹತರಾದ ಕಮಾಂಡರ್ ಖಾಸೀಮ್ ಸೋಲೆಮನಿ| ಅಮೆರಿಕ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ ಇರಾನ್| ಯುದ್ಧಕ್ಕೆ ನಾವೂ ಸಿದ್ಧ ಎಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್| ಸಂಯಮದಿಂದ ಎರಡೂ ದೇಶಗಳಿಗೆ ಭಾರತದ ಸಂದೇಶ| ಶಾಂತಿ ಸ್ಥಾಪನೆಗೆ ಸಾಧ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದ ಭಾರತ|

India Calls For Restraint After General Qasem Soleimani Killed In US Strike
Author
Bengaluru, First Published Jan 3, 2020, 7:42 PM IST
  • Facebook
  • Twitter
  • Whatsapp

ನವದೆಹಲಿ(ಜ.03): ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ಏರ್ ಸ್ಟ್ರೈಕ್’ನಲ್ಲಿ ಇರಾನ್ ಸೇನೆಯ ಉನ್ನತ ಅಧಿಕಾರಿ ಸಾವನ್ನಪ್ಪಿದ್ದು, ಇರಾನ್-ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕದ ವಾಯುದಾಳಿಯಲ್ಲಿ ಇರಾನ್ ರೆವಲ್ಯೂಶನರಿ ಗಾರ್ಡ್’ನ ಖಾಸೀಂ ಸೋಲೆಮನಿ ಸಾವನ್ನಪ್ಪಿದ್ದು, ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಹವಣಿಸುತ್ತಿದೆ.

ಇರಾನ್ ಟಾಪ್ ಕಮಾಂಡರ್ ಹತ್ಯೆ: ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಟ್ರಂಪ್-ರೋಹಾನಿ!

ಈ ಮಧ್ಯೆ ಅಮೆರಿಕ-ಇರಾನ್’ಗೆ ಸಂಯಮದ ಸಂದೇಶ ಕಳುಹಿಸಿರುವ ಭಾರತ, ಎರಡೂ ದೇಶಗಳ ಯಾವುದೇ ನಕಾರಾತ್ಮಕ ನಡೆ ಮಧ್ಯಪ್ರಾಚ್ಯವನ್ನು ಮತ್ತೆ ಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಯುದ್ಧೋನ್ಮಾದದಲ್ಲಿ ಯಾವುದೇ ನಕಾರಾತ್ಮಕ ನಿರ್ಣಯಗಳನ್ನು ಕೈಗೊಳ್ಳದಂತೆ ಎರಡೂ ದೇಶಗಳಿಗೆ ಭಾರತ ಮನವಿ ಮಾಡಿದ್ದು, ಶಾಂತಿ ಸ್ಥಾಪನೆಗೆ ಸಾಧ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದೆ.

ಭಾರೀ ಬೆಲೆ ತೆರಬೇಕಾಗುತ್ತದೆ: ಹೊಸ ವರ್ಷಕ್ಕೆ ಟ್ರಂಪ್ ವಾರ್ನ್ ಮಾಡಿದ್ಯಾರಿಗೆ?

ಇರಾಕ್ ರಾಜಧಾನಿ ಬಾಗ್ದಾದ್’ನಲ್ಲಿ ಅಮೆರಿಕ ನಡೆಸಿದ ಏರ್ ಸ್ಟ್ರೈಕ್’ನಲ್ಲಿ ಇರಾನ್ ಸೇನೆಯ ಉನ್ನತ ಕಮಾಂಡರ್ ಖಾಸೀಮ್ ಸೋಲೆಮನಿ ಸಾವನ್ನಪ್ಪಿದ್ದು, ಇರಾನ್-ಅಮೆರಿಕ ನಡುವೆ ಯುದ್ಧ ಭೀತಿ ಸೃಷ್ಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios