ಜಗತ್ತಿನ ಪ್ರಮುಖ ವಿಡಿಯೋ ಶೇರಿಂಗ್‌ ಸಾಮಾಜಿಕ ಜಾಲತಾಣದವಾದ ಯೂಟ್ಯೂಬ್‌ನ ಸಿಇಒ ಆಗಿ ಭಾರತೀಯ ಮೂಲದ ಅಮೆರಿಕನ್‌ ನೀಲ್‌ ಮೋಹನ್‌ ಆಯ್ಕೆಯಾಗಿದ್ದಾರೆ.

ನ್ಯೂಯಾರ್ಕ್: ಜಗತ್ತಿನ ಪ್ರಮುಖ ವಿಡಿಯೋ ಶೇರಿಂಗ್‌ ಸಾಮಾಜಿಕ ಜಾಲತಾಣದವಾದ ಯೂಟ್ಯೂಬ್‌ನ ಸಿಇಒ ಆಗಿ ಭಾರತೀಯ ಮೂಲದ ಅಮೆರಿಕನ್‌ ನೀಲ್‌ ಮೋಹನ್‌ ಆಯ್ಕೆಯಾಗಿದ್ದಾರೆ. ಕಳೆದ 9 ವರ್ಷಗಳಿಂದ ಈ ಜಾಲತಾಣದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸುಸಾನ್‌ ವೂಚಿಟ್ಸ್‌ಕಿ (Susan Wuchitsky)ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ ಅವರೊಂದಿಗೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನೀಲ್‌ ಆಯ್ಕೆಯಾಗಿದ್ದಾರೆ. ಸ್ಥಾನ ತೊರೆದಿರುವ ಸುಸಾನ್‌, ಇನ್ನು ಮುಂದೆ ಕುಟುಂಬ, ಆರೋಗ್ಯ ಮತ್ತು ಖಾಸಗಿ ಯೋಜನೆಗಳತ್ತ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ. ಸುಸಾಸ್‌ 2014ರಲ್ಲಿ ಯೂಟ್ಯೂಬ್‌ ಸಿಇಒ ಆಗಿ ನೇಮಕಗೊಂಡಿದ್ದರು.

ಬಿಬಿಎ ಡ್ರಾಪ್ ಔಟ್ ಆದ್ರೂ ಚಹಾ ಮಾರಿ ಕೋಟ್ಯಧಿಪತಿಯಾದ ಭಾರತೀಯ ವಿದ್ಯಾರ್ಥಿ!
ಬದುಕು ಯಾವ ಕ್ಷಣ ಹೇಗೆ ಬೇಕಾದರೂ ತಿರುವು ಪಡೆಯಬಲ್ಲದು. ಇದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಸಿಗುತ್ತವೆ. ವಿದ್ಯೆ ತಲೆಗೆ ಹತ್ತದ ವ್ಯಕ್ತಿ ಕೂಡ ಕೋಟ್ಯಂತರ ರೂ. ಮೌಲ್ಯದ ಸಂಪತ್ತಿನ ಒಡೆಯನಾದ ಕಥೆಗಳು ಬೇಕಾದಷ್ಟಿವೆ. ಶೈಕ್ಷಣಿಕ ಬದುಕಿನಲ್ಲಿ ಮುಗ್ಗರಿಸಿದೆ ಎಂಬ ಒಂದು ಸಣ್ಣ ಕಾರಣಕ್ಕೆ ಬದುಕನ್ನೇ ಕೊನೆಗಾಣಿಸಿಕೊಂಡವರ ಕಥೆಗಳು ನಿತ್ಯ ಮಾಧ್ಯಮಗಳಲ್ಲಿ ನೋಡಿರುತ್ತೇವೆ, ಓದಿರುತ್ತೇವೆ. ಆದರೆ, ವಿದೇಶದಲ್ಲಿ ಬಿಬಿಎ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಯೊಬ್ಬ ಚಹಾ ಅಂಗಡಿ ತೆರೆದು ಕೋಟ್ಯಂತರ ರೂ. ಸಂಪಾದಿಸಿದ್ದಾನೆ. ಈತನ ಯಶೋಗಾಥೆ ಯುಪೀಳಿಗೆಗೆ ಸ್ಫೂರ್ತಿದಾಯಕ. ಅಂದಹಾಗೇ ಯಶಸ್ವಿ ಸ್ವ ಉದ್ಯಮಿಯಾದ ಭಾರತೀಯ ಮೂಲದ ಈ ಡ್ರಾಪ್ ಔಟ್ ವಿದ್ಯಾರ್ಥಿ ಹೆಸರು ಸಂಜಿತ್ ಕೊಂಡ. ಇವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ 'ಚಹಾ ಅಂಗಡಿ' ತೆರೆದು ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಈ ಉದ್ಯಮಕ್ಕೆ ಕೈ ಹಾಕುವ ಮುನ್ನ ಸಂಜಿತ್, ಆಸ್ಟ್ರೇಲಿಯಾದ ಲಾ ಟ್ರೋಬ್ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಬ್ಯಾಚುಲರ್ಸ್ ಡಿಗ್ರಿ ಪುರ್ಣಗೊಳಿಸಲು ವಿಫಲರಾಗಿದ್ದರು. 

Mikey Hothi: ಕ್ಯಾಲಿರ್ಫೋನಿಯಾ ಮೊದಲ ಸಿಖ್ ಮೇಯರ್‌ ಆಗಿ ಭಾರತೀಯ ಮಿಕಿ ಹೋಥಿ ನೇಮಕ

ಬಿಬಿಎ ಪೂರ್ಣಗೊಳಿಸಲು ಸಾಧ್ಯವಾಗದ ಸಂಜಿತ್ ಕೊಂಡ ಆ ಬಳಿಕ ಮೆಲ್ಬೋರ್ನ್ ನಲ್ಲಿ 'ಡ್ರಾಪ್ ಔಟ್ ಚಾಯ್ ವಾಲಾ' (Dropout Chaiwala) ಎಂಬ ಚಹಾ ಅಂಗಡಿ ತೆರೆದರು. ಕಾಫಿ (Coffee) ಪ್ರಿಯ ಮೇಲ್ಬೋರ್ನ್ ನಲ್ಲಿ (Melbourne) ಚಹಾ ಅಂಗಡಿ ತೆರೆಯೋದು ಸಂಜಿತ್ ಪಾಲಿಗೆ ಸುಲಭದ ಕೆಲಸವಾಗಿರಲಿಲ್ಲ. 'ಬಾಲ್ಯದಿಂದಲೂ ನನಗೆ ಚಹ (Tea) ಅಂದ್ರೆ ಇಷ್ಟ. ಇದೇ ಕಾರಣಕ್ಕೆ 'ಡ್ರಾಪ್ ಔಟ್ ಚಾಯ್ ವಾಲಾ' ಎಂಬ ಐಡಿಯಾ ನನಗೆ ಮೆಚ್ಚುಗೆಯಾಯಿತು ಎಂದು ಸಂಜಿತ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಜಿತ್ ನೆರವಿಗೆ ಬಂದವರು ಅಲ್ಲಿರುವ ಅನಿವಾಸಿ ಭಾರತೀಯ. ಆ ಹೂಡಿಕೆದಾರನ (Investor) ನೆರವಿನೊಂದಿಗೆ ಸಂಜಿತ್ ಚಹಾ ಮಾರುವ ಉದ್ಯಮಕ್ಕೆ (Business) ಕೈ ಹಾಕಿದರು. 'ಡ್ರಾಪ್ ಔಟ್ ಚಾಯ್ ವಾಲಾ' ಎಂಬ ಹೆಸರಿನ ಅಂಗಡಿ ತೆರೆದ ಸಂಜಿತ್, ಚಹಾದ ಜೊತೆಗೆ ಸಮೋಸ್ ಕೂಡ ಮಾರಲು ಪ್ರಾರಂಭಿಸಿದರು.ಇದು ಮೇಲ್ಬೋರ್ನ್ ನಲ್ಲಿರುವ ಭಾರತೀಯರಿಗೆ ಮಾತ್ರವಲ್ಲ, ಅಲ್ಲಿನ ಮೂಲ ನಿವಾಸಿಗಳಿಗೂ ಇಷ್ಟವಾಯಿತು. ಪರಿಣಾಮ 'ಡ್ರಾಪ್ ಔಟ್ ಚಾಯ್ ವಾಲಾ' ಮೇಲ್ಬೋರ್ನ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ಜೊತೆಗೆ ಗ್ರಾಹಕರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಲು ಪ್ರಾರಂಭಿಸಿತು. 

ಮಗಳಿಗೆ ಹಾಲುಣಿಸಲು ಎದ್ದೆ; Meta ಕೆಲಸ ಕಳೆದುಕೊಂಡ ಮೇಲ್ ನೋಡಿದೆ: ಭಾರತೀಯ ಮೂಲದ ಮಹಿಳೆ ಭಾವುಕ ಪೋಸ್ಟ್‌