ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ನನ್ನ ಸಮಯವನ್ನು ನನ್ನ ಮಗಳಿಗೆ ಮೀಸಲಿಡಲಿದ್ದೇನೆ ಮತ್ತು ಹೊಸ ವರ್ಷದಲ್ಲಿ ಕೆಲಸಕ್ಕೆ ಲಭ್ಯವಿರುತ್ತೇನೆ ಎಂದು ಭಾರತೀಯ ಮೂಲದ ಮಹಿಳೆ ಪೋಸ್ಟ್ ಮಾಡಿದ್ದಾರೆ.

ಫೇಸ್‌ಬುಕ್‌ (Facebook), ವಾಟ್ಸಾಪ್‌ (WhatsApp) ಹಾಗೂ ಇನ್ಸ್ಟಾಗ್ರಾಮ್‌ (Instagram) ಒಡೆತನದ ಮೆಟಾ (Meta) ಸಂಸ್ಥೆ ಇತ್ತೀಚೆಗೆ 11,000 ಉದ್ಯೋಗಿಗಳನ್ನು ವಜಾಗೊಳಿಸಿದ (Layoff) ಬಗ್ಗೆ ಘೋಷಣೆ ಮಾಡಿದೆ. ಈ ಸಾವಿರಾರು ಉದ್ಯೋಗಿಗಳ ಪೈಕಿ ಮಾತೃತ್ವ ರಜೆಯಲ್ಲಿರುವ ಭಾರತೀಯ (Indian) ಮೂಲದ ಸಂವಹನ ವ್ಯವಸ್ಥಾಪಕರೂ ಇದ್ದಾರೆ ಎಂದು ತಿಳಿದುಬಂದಿದೆ. ತನ್ನ ಮೂರು ತಿಂಗಳ ಮಗಳಿಗೆ ಹಾಲುಣಿಸಲು ಮುಂಜಾನೆ 3 ಗಂಟೆಗೆ ಎಚ್ಚರಗೊಂಡಿದ್ದೆ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ. ನಂತರ, ಬೆಳಗ್ಗೆ 5:35 ಕ್ಕೆ ನಾನು ಸಹ ವಜಾಗೊಂಡವರ ಪೈಕಿ ಸೇರಿದ್ದೇನೆ ಎಂದು ನನಗೆ ಇಮೇಲ್ ಬಂದಿತು. ನನ್ನ ಹೃದಯ ಮುಳುಗಿ ಹೋಯಿತು ಎಂದು ಭಾರತೀಯ ಮೂಲದ ಮಹಿಳೆ, ಅನ್ನೆಕಾ ಪಟೇಲ್ (Anneka Patel) ಅವರು ಲಿಂಕ್ಡ್‌ಇನ್ (LinkedIn) ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅನ್ನೆಕಾ ಪಟೇಲ್‌ ಅವರ ಲಿಂಕ್ಟ್‌ಇನ್‌ ಪೋಸ್ಟ್‌ನ ಮತ್ತಷ್ಟು ವಿವರ ಹೀಗಿದೆ ನೋಡಿ.. 

ಮೆಟಾ ಕಂಪನಿಯು ಹೆಚ್ಚು ಸಂಖ್ಯೆಯಲ್ಲಿ ಕಡಿತ ಮಾಡಬಹುದೆಂದು ತಾನು ಕೇಳಿದ್ದೆ. ಹೀಗಾಗಿ ತನ್ನ ಇ-ಮೇಲ್‌ ಅನ್ನು ಪರಿಶೀಲಿಸುತ್ತಿದ್ದೆ ಎಂದೂ ಮಹಿಳೆ ಹೇಳಿದ್ದಾರೆ. ಹಾಗಾದರೆ, ಮುಂದೇನು? ಅದನ್ನು ಉತ್ತರಿಸಲು ಕಠಿಣವಾಗಿದೆ. ನನ್ನ ಹೆರಿಗೆ ರಜೆ ಫೆಬ್ರವರಿಯಲ್ಲಿ ಕೊನೆಗೊಳ್ಳಲಿದೆ ಮತ್ತು ಮಾತೃತ್ವದ ಈ ಮೊದಲ ಕೆಲವು ತಿಂಗಳುಗಳು ನನ್ನ ಜೀವನದ ಅತ್ಯಂತ ಸವಾಲಿನ ಕೆಲವು ತಿಂಗಳುಗಳಾಗಿದ್ದರೂ, ನಾನು ಜಗತ್ತಿಗಾಗಿ ಅವುಗಳನ್ನು ಟ್ರೇಡ್‌ ಮಾಡುತ್ತಿರಲಿಲ್ಲ ಎಂದೂ ಆಕೆ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮುಂಬರುವ ಕಷ್ಟಕರ ಸಮಯಕ್ಕೆ ಸಿದ್ಧರಾಗಿ: ಟ್ವಿಟ್ಟರ್‌ ಸಿಬ್ಬಂದಿಗೆ ಇ - ಮೇಲ್ ಕಳಿಸಿದ Elon Musk..!

ಟ್ವಿಟ್ಟರ್‌ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳ ನಂತರ ಮೆಟಾದಲ್ಲಿ ಉದ್ಯೋಗ ಕಡಿತವಾಗಿದೆ. ಹಠಾತ್ ಆನ್‌ಲೈನ್ ಟ್ರಾಫಿಕ್ ಹೆಚ್ಚಳವು ಜನರ ನಡವಳಿಕೆಯಲ್ಲಿ ಶಾಶ್ವತ ಬದಲಾವಣೆಯಾಗಿದೆ ಎಂದು ನಿರ್ಣಯಿಸಿ ಕೋವಿಡ್ ಸಾಂಕ್ರಾಮಿಕದಾದ್ಯಂತ ಮೆಟಾ ಹೆಚ್ಚು ನೇಮಕ ಮಾಡಿಕೊಂಡಿತ್ತು. ಈ ವೇಳೆ ಅನ್ನೆಕಾ ಪಟೇಲ್ ಅವರು ಸಹ ಮೇ 2020 ರಲ್ಲಿ ಕೆಲಸ ಪಡೆದಿದ್ದರು. 2 ವರ್ಷಗಳಲ್ಲಿ ಸಿಬ್ಬಂದಿ ಸಂಖ್ಯೆ ಸುಮಾರು 90,000 ಕ್ಕೆ ದ್ವಿಗುಣಗೊಂಡಿತ್ತು ಎಂದೂ ತಿಳಿದುಬಂದಿದೆ..

ಈ ಮಧ್ಯೆ, ಭಾರತೀಯ ಮೂಲದ ಅನ್ನೆಕಾ ಪಟೇಲ್‌ ಅವರು ಮೆಟಾ ಸಂಸ್ಥೆಯಲ್ಲಿ ಕೆಲಸ ಮಾಡುವ ಬಯಕೆಯೊಂದಿಗೆ ಲಂಡನ್‌ನಿಂದ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದಾಗಿಯೂ ಹೇಳಿದರು. ಆದರೀಗ ಕೆಲಸ ಕಳೆದುಕೊಂಡ ನಂತರ, ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ನನ್ನ ಸಮಯವನ್ನು ನನ್ನ ಮಗಳಿಗೆ ಮೀಸಲಿಡಲಿದ್ದೇನೆ ಮತ್ತು ಹೊಸ ವರ್ಷದಲ್ಲಿ ಕೆಲಸಕ್ಕೆ ಲಭ್ಯವಿರುತ್ತೇನೆ ಎಂದೂ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಟ್ವಿಟ್ಟರ್‌ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!

ಇದೇ ರೀತಿ, ಇನ್ನೊಬ್ಬ ಉದ್ಯೋಗಿ, ಹಿಮಾಂಶು ವಿ, ಅವರು ತಾನು ಹೊಸ ಮೆಟಾ ಕೆಲಸಕ್ಕಾಗಿ ಭಾರತದಿಂದ ಈಗಷ್ಟೇ ಕೆನಡಾಕ್ಕೆ ತೆರಳಿದ್ದೇನೆ ಎಂದು ಹೇಳಿದ್ದಾರೆ. ನಾನು ಮೆಟಾವನ್ನು ಸೇರಲು ಕೆನಡಾಕ್ಕೆ ಸ್ಥಳಾಂತರಗೊಂಡಿದ್ದೇನೆ ಮತ್ತು ಸೇರಿದ ಎರಡು ದಿನಗಳ ನಂತರ, ನನ್ನ ಪ್ರಯಾಣವು ಕೊನೆಗೊಂಡಿತು. ಏಕೆಂದರೆ, ನಾನು ಮೆಟಾದ ದೊಡ್ಡ ಮಟ್ಟದ ಲೇಆಫ್‌ನಿಂದ ನನ್ನ ಕೆಲಸವೂ ಹೋಯಿತು. ಇದೀಗ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಹೃದಯವು ಸಂತಾಪ ಹೇಳುತ್ತದೆ’’ ಎಂದೂ ಅವರು ಲಿಂಕ್ಡ್‌ಇನ್‌ನಲ್ಲಿ ಹೇಳಿದ್ದಾರೆ. 

ಮೆಟಾ ಸಿಬ್ಬಂದಿಯನ್ನು ಶೇಕಡಾ 13 ರಷ್ಟು ಕಡಿತಗೊಳಿಸಿದರೆ, ಮತ್ತೊಂದು ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ ಸಂಸ್ಥೆ ಹೊಸ ಮಾಲೀಕ ಎಲೋನ್ ಮಸ್ಕ್ ಅಡಿಯಲ್ಲಿ ತನ್ನ ಉದ್ಯೋಗಿಗಳನ್ನು ಅರ್ಧದಷ್ಟು ಕಡಿತಗೊಳಿಸಿದೆ.

ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌ ಅಧಿಕೃತ!

ಬೈಜೂಸ್ ಮತ್ತು ಸ್ನ್ಯಾಪ್‌ಚ್ಯಾಟ್‌ ಸಹ ಕಳೆದ ಎರಡು ತಿಂಗಳಲ್ಲಿ ಭಾರಿ ಪ್ರಮಾಣದ ಸಿಬ್ಬಂದಿಯ ವಜಾವನ್ನು ಘೋಷಿಸಿವೆ.