ಸತ್ತ ಎಂದು ಘೋಷಿಸಿದ್ದ ಮುಂಬೈ ದಾಳಿ ಉಗ್ರನಿಗೆ 15 ವರ್ಷ ಜೈಲು ಶಿಕ್ಷೆ ನೀಡಿದ ಪಾಕ್!
ಕೆಲ ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ಸ್ವತಃ ತಾನೇ ಘೋಷಣೆ ಮಾಡಿದ್ದ ವ್ಯಕ್ತಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾನಾಯಲ 15 ವರ್ಷಕ್ಕಿಂತ ಹೆಚ್ಚಿನ ಕಾಲದ ಶಿಕ್ಷೆ ವಿಧಿಸಿದೆ. 2008ರ ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಸಾಜಿದ್ ಮಜೀದ್ ಮಿರ್‌ಗೆ ಪಾಕ್ ನ್ಯಾಯಾಲಯ ಶನಿವಾರ ಶಿಕ್ಷೆ ಘೋಷಣೆ ಮಾಡಿದೆ.
ಲಾಹೋರ್ (ಜೂನ್ 25): ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ (Financial Action Task Force) ಗ್ರೇ ಲಿಸ್ಟ್‌ನಿಂದ (Greay List) ಹೊರಬರುವ ಪ್ರಯತ್ನದಲ್ಲಿರುವ ಪಾಕಿಸ್ತಾನ (Pakistan ), ಈಗಾಗಲೇ ಸತ್ತಿದ್ದಾನೆ ಎಂದು ಅಧಿಕೃತ ಘೋಷಣೆ ಮಾಡಿದ್ದ ಉಗ್ರನಿಗೆ 15 ವರ್ಷಕ್ಕಿಂತ ಹೆಚ್ಚಿನ ವರ್ಷದ ಜೈಲು ಶಿಕ್ಷೆ ವಿಧಿಸಿದೆ..!
ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ (most wanted terrorist) ಹಾಗೂ 2008ರ ಮುಂಬೈ ದಾಳಿಯ ಪ್ರಮುಖ ಹ್ಯಾಂಡ್ಲರ್ ಆಗಿದ್ದ ಸಾಜಿದ್ ಮಜೀದ್ ಮಿರ್‌ಗೆ ( Sajid Majeed Mir) ದೇಶದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಿದೆ. ಅಚ್ಚರಿ ಏನೆಂದರೆ, ಇದೇ ಸಾಜಿದ್ ಮಜೀದ್ ಮಿರ್ ಸತ್ತಿದ್ದಾನೆ ಎಂದು ಪಾಕಿಸ್ತಾನ ಕೆಲ ವರ್ಷಗಳ ಹಿಂದೆ ಅಧಿಕೃತವಾಗಿ ಘೋಷಣೆ ಮಾಡಿತ್ತು.
ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಗ್ರೇ ಲಿಸ್ಟ್‌ನಿಂದ ಹೊರಬರುವ ಪ್ರಯತ್ನದಲ್ಲಿ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಪಂಜಾಬ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ (CTD), ಇಂತಹ ಪ್ರಕರಣಗಳಲ್ಲಿ ಶಂಕಿತರ ಅಪರಾಧಿಗಳನ್ನು ಮಾಧ್ಯಮಗಳಿಗೆ ಆಗಾಗ್ಗೆ ಪ್ರಕಟಿಸುತ್ತದೆ, ಮಿರ್‌ನ ಶಿಕ್ಷೆಯನ್ನು ತಿಳಿಸಲಿಲ್ಲ.
ಪಾಕಿಸ್ತಾನದ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ-ಹಣಕಾಸಿನ ಸುಧಾರಣೆಗಳ ಅನುಷ್ಠಾನವನ್ನು ಪರಿಶೀಲಿಸಲು ಇಸ್ಲಾಮಾಬಾದ್ ಪ್ಯಾರಿಸ್ ಮೂಲದ ಜಾಗತಿಕ ಭಯೋತ್ಪಾದಕ ಹಣಕಾಸು ನಿಗಾ ಸಂಸ್ಥೆ ಎಫ್‌ಎಟಿಎಫ್ (FATF) ಅಧಿಕಾರಿಗಳು ಆನ್-ಸೈಟ್ ಭೇಟಿಗೆ ತಯಾರಿ ನಡೆಸುತ್ತಿರುವಂತೆಯೇ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ಈ ಅಧಿಕಾರಿಗಳು ನೀಡುವ ಸಕಾರಾತ್ಮಕ ವರದಿಯು ಪಾಕಿಸ್ತಾವನ್ನು ಗ್ರೇ ಲಿಸ್ಟ್‌ನಿಂದ ಹೊರಬರಲು ಸಹಾಯ ಮಾಡಬಹುದು.
ಈ ತಿಂಗಳ ಆರಂಭದಲ್ಲಿ ಲಾಹೋರ್‌ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಕರಣದಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮಿರ್‌ಗೆ 15 ಮತ್ತು ಒಂದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಎಲ್ಇಟಿ ಮತ್ತು ಜಮಾತ್-ಉದ್-ದವಾ (ಜೆಯುಡಿ) ಮುಖಂಡರ ಭಯೋತ್ಪಾದಕ ಹಣಕಾಸು ಪ್ರಕರಣಗಳು ಕುರಿತಾದ ಪರ ವಕೀಲ ತಿಳಿಸಿದ್ದಾರೆ. ಇದಲ್ಲದೆ, ಹೆಚ್ಚಿನ ಭದ್ರತೆಯ ಜೈಲಿನಲ್ಲಿ ಇದು ಇನ್-ಕ್ಯಾಮೆರಾ ವಿಚಾರಣೆ ಆಗಿರುವ ಕಾರಣ ಮಾಧ್ಯಮಗಳಿಗೆ ಅವಕಾಶ ನೀಡಲಿಲ್ಲ.
ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾದಾಗಿನಿಂದ ಮಿರ್ ಲಾಹೋರ್‌ನ ಕೋಟ್ ಲಖ್ಪತ್ ಜೈಲಿನಲ್ಲಿದ್ದಾನೆ ಎಂದು ವಕೀಲರು ಹೇಳಿದರು. ನ್ಯಾಯಾಲಯವು ಅಪರಾಧಿಗೆ 400,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದೆ ಎಂದು ಅವರು ಹೇಳಿದರು.
ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಸಾಜಿದ್ ಮಜೀದ್ ಮಿರ್ ಸತ್ತಿದ್ದಾನೆ ಎಂದು ಘೋಷಣೆ ಮಾಡಿತ್ತು. ಆದರೆ, ಭಾರತ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ಒಪ್ಪಿರಲಿಲ್ಲ. ಪಾಕಿಸ್ತಾನ ಇದಕ್ಕೆ ದಾಖಲೆ ನೀಡಬೇಕು ಎಂದು ಆಗ್ರಹಿಸಿದ್ದವು. ಕಳೆದ ವರ್ಷದ ಎಫ್ಎಟಿಎಫ್ ಕ್ರಿಯಾ ಯೋಜನೆಯ ಕೊನೆಯಲ್ಲಿ ಪಾಕಿಸ್ತಾನದ ಮೌಲ್ಯಮಾಪನದ ಪ್ರಗತಿಯಲ್ಲಿ ಇದೇ ವಿಚಾರವನ್ನು ಪ್ರಮುಖವಾಗಿ ಸೇರಿಸಲಾಗಿತ್ತು. ಇದು ಕೊನೆಯಲ್ಲಿ ಸಾಜಿದ್ ಮಜೀದ್ ಮಿರ್ ಬಂಧನಕ್ಕೆ ಕಾರಣವಾಗಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದರು.
Mumbai attack ಉಗ್ರ ಅಜ್ಮಲ್ ಕಸಬ್ ಪಾಕಿಸ್ತಾನಿ, ಸತ್ಯ ಬಹಿರಂಗ ಪಡಿಸಿದ ಪಾಕ್ ಗೃಹ ಸಚಿವ ಶೇಕ್ ರಶೀದ್!
ಸಾಜಿದ್ ಮಜೀದ್ ಮಿರ್ ಮಾಡಿರುವ ಅಪರಾಧ ಅವರ ವಿಚಾರಣೆ ಹಾಗೂ ಶಿಕ್ಷೆ ನೀಡಿರುವುದನ್ನೇ ಸಾಧನೆಗಳು ಎನ್ನವ ರೀತಿಯಲ್ಲಿ ಬಿಂಬಿಸಿ ಎಫ್ಎಟಿಎಫ್ ಕ್ರಿಯಾ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ತೋರಿಸಲು ಪಾಕಿಸ್ತಾನದ ಅಧಿಕಾರಿಗಳು ಸಿದ್ದತೆ ನಡೆಸಿದೆ ಎಂದು ಪತ್ರಿಕೆ ಹೇಳಿದೆ. ಪಾಕಿಸ್ತಾನವು ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದೆ ಎಂದು FATF ಸದಸ್ಯರಿಗೆ ಮನವರಿಕೆ ಮಾಡಲು ಇದು ನಿಜವಾಗಿಯೂ ಸಹಾಯ ಮಾಡಲಿದೆ ಎಂದು ಪತ್ರಿಕೆ ಬರೆದಿದೆ.
ಭಾರತದಲ್ಲಿ ದಾಳಿಗೆ ದಾವೂದ್ ‘ವಿಶೇಷ ಟೀಂ’, ಹಿಂಸಾಚಾರಕ್ಕೆ ಯತ್ನ!
44 ವರ್ಷದ ಮಿರ್, ಅಮೆರಿಕದ ಎಫ್‌ಬಿಐನ ಮೋಸ್ಟ್‌ಸ ವಾಂಟೆಡ್ ಟೆರರಿಸ್ಟ್ ಕೂಡ ಎನಿಸಿದ್ದ. ಮುಂಬೈ ದಾಳಿಯಲ್ಲಿ ಇವನ ಪಾತ್ರವನ್ನು ಒಪ್ಪಿಕೊಂಡಿದ್ದ ಅಮೆರಿಕ, ಈತನನ್ನು ಹುಡುಕಿಕೊಟ್ಟವರಿಗೆ 5 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಹೇಳಿತ್ತು. 26/11 ಮುಂಬೈ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಜನರ ಸಾವಿಗೆ ಕಾರಣವಾಗಿದ್ದ ಸಾಜಿದ್ ಮಜೀದ್ ಮಿರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಕೂಡ ಎನಿಸಿದ್ದರು. ಮುಂಬೈ ದಾಳಿ ಉದ್ದೇಶದದಲ್ಲಿ 2005ರಲ್ಲಿ ನಕಲಿ ಹೆಸರು ಹಾಗೂ ಪಾಸ್‌ಪೋರ್ಟ್‌ನೊಂದಿಗೆ ಸಾಜಿದ್ ಮಜೀದ್ ಮಿರ್ ಭಾರತಕ್ಕೆ ಭೇಟಿ ನೀಡಿದ್ದ.