Asianet Suvarna News Asianet Suvarna News

ಅಮೆರಿಕದಲ್ಲಿ ಹಿಂದೂಗಳ ಮೇಲಿನ ದಾಳಿ ಹೆಚ್ಚಳ: ಕನ್ನಡಿಗ ಸಂಸದ ಕಳವಳ

ಹಿಂದೂಗಳ ಮೇಲೆ ದಾಳಿಗಳು ಹೆಚ್ಚಳವಾಗುತ್ತಿದೆ. ಆನ್ಲೈನ್ ಗಳಲ್ಲಿ ಅವರ ವಿರುದ್ಧ ತಪ್ಪು ಮಾಹಿತಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮ ಇತರರ ಮೇಲೆ ದಾಳಿ ಮಾಡುವ ಧರ್ಮವಲ್ಲ, ಆದರೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು: ಅಮೆರಿಕ ಸಂಸದ ಥಾನೇದರ್ 

Increase in attacks on Hindus in America Says Indian American MP Shri Thanedar grg
Author
First Published Apr 17, 2024, 9:55 AM IST

ವಾಷಿಂಗ್ಟನ್(ಏ.17):  ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್‌ ಕಳವಳ ವ್ಯಕ್ತಪಡಿಸಿದ್ದಾರೆ. ‘ಇದು ಸಂಘಟಿತ ಹಿಂದೂ ವಿರೋಧಿ ದಾಳಿಯ ಆರಂಭ. ಈ ದ್ವೇಷದ ವಿರುದ್ಧದ ಸದಸ್ಯರೆಲ್ಲರೂ ಒಂದಾಗಬೇಕು’ ಎಂದು ಕರೆ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅಮೆರಿಕ ಸಂಸದ ಥಾನೇದರ್ ‘ಹಿಂದೂಗಳ ಮೇಲೆ ದಾಳಿಗಳು ಹೆಚ್ಚಳವಾಗುತ್ತಿದೆ. ಆನ್ಲೈನ್ ಗಳಲ್ಲಿ ಅವರ ವಿರುದ್ಧ ತಪ್ಪು ಮಾಹಿತಿಗಳನ್ನು ನೀಡುವ ಕೆಲಸ ನಡೆಯುತ್ತಿದೆ. ಹಿಂದೂ ಧರ್ಮ ಇತರರ ಮೇಲೆ ದಾಳಿ ಮಾಡುವ ಧರ್ಮವಲ್ಲ, ಆದರೆ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು’ ಎಂದಿದ್ದಾರೆ.

ಸೂಕ್ತ ಸಮಯದಲ್ಲಿ ಇರಾನ್‌ಗೆ ಉತ್ತರ: ಇಸ್ರೇಲ್‌

ಇತ್ತೀಚಿಗೆ ಥಾನೇದರ್ ಸೇರಿದಂತೆ ಇತರ ನಾಲ್ವರು ಭಾರತೀಯ ಅಮೆರಿಕನ್ ಜನಪ್ರತಿನಿಧಿಗಳು ಹಿಂದೂ ದೇವಾಲಯ ಮತ್ತು ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ತನಿಖೆಗೆ ಆಗ್ರಹಿಸಿ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.

Follow Us:
Download App:
  • android
  • ios