‘ನಾವು ದಾಳಿ ಮಾಡಿದ್ದು 1 ದಿನದ ಮಟ್ಟಿಗೆ ಮಾತ್ರ. ವಿಷಯವು ಮುಕ್ತಾಯಗೊಂಡಿದೆ ಎಂದು ಪರಿಗಣಿಸಬಹುದು’ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ. ‘ಆದಾಗ್ಯೂ, ಇಸ್ರೇಲಿ ಆಡಳಿತವು ಮತ್ತೊಂದು ತಪ್ಪು ಮಾಡಿದರೆ, ಇರಾನ್‌ನ ಪ್ರತಿಕ್ರಿಯೆಯು ಗಣನೀಯವಾಗಿ ಹೆಚ್ಚು ತೀವ್ರವಾಗಿರುತ್ತದೆ’ ಎಂದೂ ಎಚ್ಚರಿಸಿದ ಇರಾನ್‌  

ಟೆಲ್‌ ಅವಿವ್‌/ತೆಹ್ರಾನ್‌(ಏ.16): ತನ್ನ ಮೇಲೆ ಇರಾನ್‌ ದಾಳಿ ಮಾಡಿದ್ದಕ್ಕೆ ಕೆಂಡಾಮಂಡಲ ಆಗಿರುವ ಇಸ್ರೇಲ್‌, ಸೂಕ್ತ ಸಮಯ ನೋಡಿಕೊಂಡು ಹಾಗೂ ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ತಿರುಗೇಟು ನೀಡಲಿದೆ ಎಂದು ಗುಡುಗಿದೆ. ಅಲ್ಲದೆ, ಇರಾನ್‌ ಮೇಲೆ ನಿರ್ಬಂಧ ಹೇರಬೇಕು ಎಂದೂ ವಿಶ್ವಸಂಸ್ಥೆಗೆ ಆಗ್ರಹಿಸಿದೆ.

ಇದರ ನಡುವೆ ಇರಾನ್‌ ಪ್ರತಿಕ್ರಿಯಿಸಿ, ‘ನಾವು ದಾಳಿ ಮಾಡಿದ್ದು 1 ದಿನದ ಮಟ್ಟಿಗೆ ಮಾತ್ರ. ವಿಷಯವು ಮುಕ್ತಾಯಗೊಂಡಿದೆ ಎಂದು ಪರಿಗಣಿಸಬಹುದು’ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ. ‘ಆದಾಗ್ಯೂ, ಇಸ್ರೇಲಿ ಆಡಳಿತವು ಮತ್ತೊಂದು ತಪ್ಪು ಮಾಡಿದರೆ, ಇರಾನ್‌ನ ಪ್ರತಿಕ್ರಿಯೆಯು ಗಣನೀಯವಾಗಿ ಹೆಚ್ಚು ತೀವ್ರವಾಗಿರುತ್ತದೆ’ ಎಂದೂ ಎಚ್ಚರಿಸಿದೆ.

ಭಾರತಕ್ಕೆ ರಾಜತಾಂತ್ರಿಕ ಗೆಲುವು, ಇರಾನ್ ವಶಪಡಿಸಿದ ಹಡಗಿನಲ್ಲಿದ್ದ 17 ಭಾರತೀಯರ ಭೇಟಿಗೆ ಅವಕಾಶ!

ಆದರೆ ಇರಾನ್‌ ತಣ್ಣಗಾದ ನಂತರ ಇಸ್ರೇಲ್‌ ಮಿತ್ರ ದೇಶ ಅಮೆರಿಕವೂ ತಣ್ಣಗಾಗಿದೆ. ‘ಇರಾನ್ ವಿರುದ್ಧ ಯಾವುದೇ ಪ್ರತೀಕಾರದ ಕ್ರಮಗಳಿಗೆ ವಾಷಿಂಗ್ಟನ್ ತನ್ನ ಮಿಲಿಟರಿ ಬೆಂಬಲವನ್ನು ನೀಡುವುದಿಲ್ಲ’ ಎಂದು ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿದ್ದಾರೆ. ಇದರ ನಡುವೆ ಇಸ್ರೇಲ್‌ನತ್ತ ತೂರಿ ಬಂದ ಇರಾನ್‌ನ 80 ಕ್ಷಿಪಣಿಗಳನ್ನು ಹೊಡೆದಿದ್ದು ತಾನು ಎಂದು ಅಮೆರಿಕ ಹೇಳಿಕೊಂಡಿದೆ.

ಸಿರಿಯಾದಲ್ಲಿನ ಇಸ್ರೇಲಿ ಸೇನಾಧಿಕಾರಿಗಳನ್ನು ಇತ್ತೀಚೆಗೆ ಇಸ್ರೇಲ್‌ ವಾಯುದಾಳಿ ನಡೆಸಿ ಸಾಯಿಸಿತ್ತು. ಅದಕ್ಕೆ ಪ್ರತೀಕಾರವಾಗಿ ಭಾನುವಾರ ಇಸ್ರೇಲ್‌ ಮೇಲೆ ಇರಾನ್‌ 300 ಕ್ಷಿಪಣಿಗಳಿಂದ ದಾಳಿ ಮಾಡಿತ್ತು. ಆದರೆ ಗುರಿ ಸಾಧನೆ ಆದ ಕಾರಣ ದಾಳಿ ನಿಲ್ಲಿಸಿದ್ದೇವೆ ಎಂದು ಸಾರಿತ್ತು.