ಇದೇನಿದು ಆಶ್ಚರ್ಯ... 10 ವರ್ಷದ ಹಿಂದೆ ಕಳೆದುಹೋಗಿತ್ತು ಐಪೋನ್, ಸಿಕ್ಕಿದ್ದು ಟಾಯ್ಲೆಟ್ ನಲ್ಲಿ!
ಟಾಯ್ಲೆಟ್ ಪೈಪ್ ನಿಂದ ಹೊರಬರ್ತಿತ್ತು ವಿಚಿತ್ರವಾದ ಶಬ್ದ
ಪೈಪ್ ಗಳನ್ನೆಲ್ಲಾ ತೆಗೆದು ನೋಡಿದಾಗ ಸಿಕ್ಕಿದ್ದು ಐಫೋನ್
10 ವರ್ಷ ಹಿಂದೆ ಕಳೆದುಹೋಗಿದ್ದ ಐಪೋನ್ ಪೈಪ್ ನಲ್ಲಿ ಪತ್ತೆ
ಬೆಂಗಳೂರು (ಫೆ. 27): ಬರೋಬ್ಬರಿ 10 ವರ್ಷದ ಹಿಂದೆ ಮಹಿಳೆಯೊಬ್ಬಳು ಕಳೆದುಕೊಂಡಿದ್ದ ಐಫೋನ್ ಅನ್ನು ಟಾಯ್ಲೆಟ್ ನಲ್ಲಿ ಪತ್ತೆಯಾಗಿದೆ. ಪತಿ ಹಾಗೂ ಪತ್ನಿ ಬಾಥ್ ರೂಮ್ ನಲ್ಲಿ ವಿಚಿತ್ರವಾದ ಶಬ್ದ ಪ್ರತಿ ಬಾರಿಯೂ ಕೇಳಿ ಬರುತ್ತದೆ ಎನ್ನುವುದರಿಂದ ಆರಂಭವಾದ ಇವರ ಶೋಧ ಕಾರ್ಯ ಕೊನೆಗೆ ಐಫೋನ್ ಪತ್ತೆಯಾಗುವುದರೊಂದಿಗೆ ಮುಕ್ತಾಯವಾಗಿದೆ. ಇಂಥದ್ದೊಂದು ಘಟನೆ ನಡೆದಿರುವುದು ಅಮೆರಿಕದ (US) ಮೇರಿಲ್ಯಾಂಡ್ ನಲ್ಲಿ (Maryland).
ಬೆಕಿ ಬೆಕ್ ಮನ್ (Becki Beckmann) ಎನ್ನುವ ಮಹಿಳೆ ಹಲವು ವರ್ಷಗಳಿಂದ ಮೇರಿ ಲ್ಯಾಂಡ್ ನಲ್ಲಿ ವಾಸವಾಗಿದ್ದು, ಐಫೋನ್ (iPhone) ಸಿಕ್ಕ ಕಥೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 2012ರ ಹ್ಯಾಲೋವಿನ್ (Halloween night) ಸಂಭ್ರಮದ ರಾತ್ರಿಯಂದು ತನ್ನ ನೆಚ್ಚಿನ ಐಫೋನ್ ಅನ್ನು ಈಕೆ ಕಳೆದುಕೊಂಡಿದ್ದರು. ಯಾರಾದರೂ ಕದ್ದಿರಬಹುದು ಎನ್ನುವ ಯೋಚನೆಯೇ ಅವರಿಗೆ ಬಂದಿರಲಿಲ್ಲ. ಯಾಕೆಂದರೆ, ಅವರು ಆ ಸಮಯದಲ್ಲೆಲ್ಲೂ ಸಾರ್ವಜನಿಕ ಸ್ಥಳಗಳಿಗೆ ಹೋಗಿರಲಿಲ್ಲ. ತಮ್ಮ ಐಫೋನ್ ಅಚ್ಚರಿಯಾಗಿ ಕಣ್ಮರೆಯಾದಾಗ ಬೆಕಿ ಬೆಕ್ ಮನ್ ಸಖತ್ ಅಚ್ಚರಿ ಪಟ್ಟಿದ್ದರು.
ಆದರೆ, ಈ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ಅವರು, ಮತ್ತೊಂದು ಐ-ಫೋನ್ ಖರೀದಿ ಮಾಡಿ ಹಳೆಯದನ್ನು ಮರೆತು ಹೋಗಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ತಮ್ಮ ಫೋನ್ ಕಣ್ಮರೆಯಾಗಿದ್ದು ಹೇಗೆ ಎನ್ನುವ ಕುತೂಹಲ ಅವರಲ್ಲಿತ್ತು ಎಂದು ಬರೆದುಕೊಂಡಿದ್ದಾರೆ. ಕಳೆದ ವಾರ ಅವರು ಹಾಗೂ ಅವರ ಪತಿ ಶೌಚಾಲಯದಲ್ಲಿ ಟಾಯ್ಲೆಟ್ ಅನ್ನು (toilet) ಫ್ಲಶ್ ಮಾಡಿದಾಗ ಅಲ್ಲಿಂದ "ಬಡಿಯುವ" ಶಬ್ದವನ್ನು ಕೇಳಲು ಆರಂಭಿಸಿದ್ದರು. ಟಾಯ್ಲೆಟ್ ಹಳೆಯದಾಗಿದೆ ಹಾಗೂ ಇದು ಕಟ್ಟಿರುವ ರೀತಿಯೂ ಅಷ್ಟೇ ಕೆಟ್ಟದಾಗಿರುವ ಕಾರಣಕ್ಕೆ ಇಂಥ ಶಬ್ದ ಬರುತ್ತಿರಬಹುದು ಎಂದು ಅಂದಾಜಿಸಿದ್ದರು. ಆದರೆ, ಶಬ್ದ ಕಡಿಮೆಯಾಗದೇ ಇದ್ದಾಗ ಇಡೀ, ಟಾಯ್ಲೆಟ್ ಸಂಪರ್ಕವನ್ನು ಪರೀಶೀಲನೆ ಮಾಡುವುದಾಗಿ ಅವರ ಪತಿ ಇಳಿದಿದ್ದರು.
Russia Ukraine Crisis: ಸಾಕು ನಾಯಿ ಬಿಟ್ಟು ಬರಲು ಒಪ್ಪುತ್ತಿಲ್ಲ ಭಾರತೀಯ ವಿದ್ಯಾರ್ಥಿ
ಆದರೆ, ರಿಪೇರಿ ಕೆಲಸ ಆರಂಭವಾದ ಕೆಲ ಹೊತ್ತಿಗೆ ಬೆಕಿ ಅವರ ಪತಿ, ಐಫೋನ್ ಅನ್ನು ಕಂಡಿದ್ದು ಮಾತ್ರವಲ್ಲದೆ ಪತ್ನಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಟಾಯ್ಲೆಟ್ ಪೈಪ್ ನ ಆಳದಲ್ಲಿ 10 ವರ್ಷದ ಹಿಂದೆ ಕಳೆದುಹೋಗಿದ್ದ ಅವರ ಐ-ಫೋನ್ ಸಿಕ್ಕಿತ್ತು. ಫೋನ್ ನ ಹಿಂಭಾಗದ ಕೇಸಿಂಗ್ ಓಪನ್ ಆಗಿದ್ದರೆ, ಉಳಿದಂತೆ ಫೋನ್ ಸಂಪೂರ್ಣವಾಗಿ ಸುಸ್ಥಿತಿಯಲ್ಲಿತ್ತು. ಇಂಥದ್ದೊಂದು ಸಂಗತಿ ಆಗಿರಬಹುದು ಎನ್ನುವ ನಿರೀಕ್ಷೆಗಿಂತ ದೂರದ ಸಂಗತಿ ಇದಾಗಿದೆ ಎಂದು ಬೆಕಿ ಬರೆದುಕೊಂಡಿದ್ದಾರೆ.
ಬೆಕಿ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆ ಫೇಸ್ ಬುಕ್ ನಲ್ಲಿ ಇದು ವೈರಲ್ ಆಗಿದೆ. ಬಹುತೇಕ ಮಂದಿ ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಐಪೋನ್ ಟಾಯ್ಲೆಟ್ ನ ಪೈಪ್ ನಲ್ಲಿ ಸಿಕ್ಕಿ ಹಾಕಿಕೊಂಡರೆ, ಅದು ಬ್ಲಾಕ್ ಆಗಬೇಕಿತ್ತು. ಇಂಥ ಯಾವುದೇ ಸಮಸ್ಯೆ ಇಷ್ಟು ವರ್ಷ ಕಾಣಿಸಿಕೊಳ್ಳಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಗನಿಗೆ ವಿಚಿತ್ರ ಚಾಲೆಂಜ್ ಹಾಕಿದ ಅಮ್ಮ, ಸವಾಲು ಗೆದ್ದ ಮಗನಿಗೆ 1.35 ಲಕ್ಷ ರೂ!
10 ವರ್ಷಗಳ ಕಾಲ ಐಫೋನ್ ಟಾಯ್ಲೆಟ್ ನಲ್ಲಿ ಸಿಕ್ಕಿ ಹಾಕಿಕೊಂಡಿರಲಿಲ್ಲ, ಅದು ಶಬ್ದ ಮಾಡುವವರೆಗೂ ನಿಮಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ ಎಂದು ಒಬ್ಬ ಬರೆದಿದ್ದರೇ, ಟಾಯ್ಲೆಟ್ ನಲ್ಲಿ ಸಂಪರ್ಕದಲ್ಲಿ ಸಮಸ್ಯೆ ಆಗಿಲ್ಲವೇ? ನನ್ನ ಮನೆ ಟೌನ್ ಹೌಸ್ ನಲ್ಲಿದೆ. ಸಣ್ಣ ಬಟ್ಟೆಯನ್ನು ನನ್ನ ಮಗು ಟಾಯ್ಲೆಟ್ ಪೈಪ್ ನಲ್ಲಿ ಹಾಕಿತ್ತು. ಇದರಿಂದಾಗಿ ಇಡೀ ಅಕ್ಕಪಕ್ಕದವರ ಮಲಮೂತ್ರಗಳು ನಮ್ಮ ಮನೆಯಲ್ಲಿ ಬ್ಲಾಕ್ ಆಗಿತ್ತು ಎಂದು ಬರೆದುಕೊಂಡಿದ್ದಾರೆ. "ನನ್ನ ಮೊಬೈಲ್ ನ ಗ್ಲಾಸ್ ಸ್ಕ್ರೀನ್ ನಾನು ಸರಿಯಾಗಿ ನೋಡಿದರೇ ಬ್ರೇಕ್ ಬೀಳುತ್ತದೆ. ಆದರೆ, ಟಾಯ್ಲೆಟ್ ನಲ್ಲಿ ನೀವು ಅಷ್ಟು ಬಾರಿ ಮಲ-ಮೂತ್ರ ಮಾಡಿದ್ದರೂ ನಿಮ್ಮ ಮೊಬೈಲ್ ಸ್ಕ್ರೀನ್ ಅಷ್ಟು ಫರ್ಫೆಕ್ಟ್ ಆಗಿರುವುದು ಹೇಗೆ?" ಎಂದು ತಮಾಷೆ ಮಾಡಿದ್ದಾರೆ.