Asianet Suvarna News Asianet Suvarna News

Russia Ukraine Crisis: ಸಾಕು ನಾಯಿ ಬಿಟ್ಟು ಬರಲು ಒಪ್ಪುತ್ತಿಲ್ಲ ಭಾರತೀಯ ವಿದ್ಯಾರ್ಥಿ

ಯುದ್ಧಪೀಡಿತ ಉಕ್ರೇನ್ ನಲ್ಲಿ ಹದಗೆಟ್ಟ ಪರಿಸ್ಥಿತಿ

ಸಾಕು ನಾಯಿ ಇಲ್ಲದೆ ಉಕ್ರೇನ್ ಅನ್ನು ತೊರೆಯುವುದಿಲ್ಲ ಎಂದ ಭಾರತೀಯ ವಿದ್ಯಾರ್ಥಿ

ಕೈವ್ ನಲ್ಲಿ ಭಾರತೀಯ ರಾಯಭಾರ ಕಚೇರಿಯೂ ಸಹಾಯ ಮಾಡುತ್ತಿಲ್ಲ ಎಂದು ದೂರು

Russia Ukraine Crisis Indian Student Refuses To Leave Ukraine Without Pet Dog san
Author
Bengaluru, First Published Feb 27, 2022, 6:53 PM IST | Last Updated Feb 27, 2022, 7:36 PM IST

ನವದೆಹಲಿ (ಫೆ. 27): ಯುದ್ಧಪೀಡಿತ ಉಕ್ರೇನ್ ನಿಂದ (War Torn Ukraine)ಬದುಕಿ ಬಂದರೆ ಸಾಕು ಎನ್ನುವ ಆಸೆಯಲ್ಲಿ ಸಾಕಷ್ಟು ಜನ ಈಗಾಗಲೇ ಅಕ್ಕಪಕ್ಕದ ದೇಶಗಳಿಗೆ ಹೋಗುತ್ತಿದ್ದಾರೆ. ಆದರೆ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಯೊಬ್ಬ ( Indian Studen) ನನ್ನೊಂದಿಗೆ ಸಾಕು ನಾಯಿಯನ್ನು ರಕ್ಷಣೆ ಮಾಡುತ್ತೀರಿ ಎಂದಾದಲ್ಲಿ ಮಾತ್ರವೇ ನಾನು ಉಕ್ರೇನ್ ನಿಂದ ಹೊರಬರುತ್ತೇನೆ ಎಂದಿದ್ದಾನೆ. ಈ ಕುರಿತಂತೆ ರಾಜಧಾನಿ ಕೈವ್ ನಲ್ಲಿರುವ (Kiyv) ಭಾರತೀಯ ರಾಯಭಾರ ಕಚೇರಿಗೂ (Indian embassy) ಮಾಹಿತಿ ನೀಡಿದ್ದು, ಯಾವುದೇ ಸಹಾಯ ಈವರೆಗೂ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಪೂರ್ವ ಉಕ್ರೇನ್ ನಲ್ಲಿರುವ ಖಾರ್ಕೀವ್ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ರಿಷಭ್ ಕೌಶಿಕ್ (Rishabh Kaushik), ತನ್ನೊಂದಿಗೆ ಸಾಕು ನಾಯಿಯನ್ನು ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲಾ ಕಾಗದ ಪತ್ರಗಳನ್ನು ಸಿದ್ಧ ಮಾಡುತ್ತಿದ್ದಾರೆ. ಸಾಕು ನಾಯಿಯನ್ನು ನನ್ನೊಂದಿಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಬೇಕಾದಂತ  ಕಾಗದಪತ್ರಗಳು ಹಾಗೂ ಕ್ಲಿಯರೆನ್ಸ್ ಗಳು ಬೇಕಾಗಿವೆ. ಹಾಗಿದ್ದಲ್ಲಿ ಮಾತ್ರವೇ ಯುದ್ಧಪೀಡಿತ ಉಕ್ರೇನ್ ನಿಂದ ಏರ್ ಲಿಫ್ಟ್ ಆಗಲು ಸಾಧ್ಯ. ಅದರೆ, ಇಲ್ಲಿನ ಅಧಿಕಾರಿಗಳು ದಾಖಲೆಗಳ ಮೇಲೆ ದಾಖಲೆಗಳನ್ನು ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಅವರು ನನ್ನ ವಿಮಾನದ ಟಿಕೆಟ್ ಕೇಳುತ್ತಿದ್ದಾರೆ. ಉಕ್ರೇನಿಯನ್ ವಾಯುಪ್ರದೇಶವನ್ನು ನಿರ್ಬಂಧಿಸಿರುವಾಗ ನಾನು ವಿಮಾನ ಟಿಕೆಟ್ ಅನ್ನು ಹೇಗೆ ಹೊಂದಲು ಸಾಧ್ಯ" ಎಂದು ರಿಷಭ್ ಪ್ರಶ್ನೆ ಮಾಡಿದ್ದಾರೆ. ರಿಷಭ್ ಕೌಶಿಕ್ ಅವರು ದೆಹಲಿಯಲ್ಲಿರುವ ಭಾರತೀಯ ಸರ್ಕಾರದ ಅನಿಮಲ್ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆ (ಎಕ್ಯೂಸಿಎಸ್) ಮತ್ತು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾಗಿ ಅವರು ವಿಡಿಯೋವೊಂದನ್ನು ಕೂಡ ಅಪ್ ಲೋಡ್ ಮಾಡಿದ್ದಾರೆ. ಅವರು ತಮ್ಮ ಪರಿಸ್ಥಿತಿಯ ಬಗ್ಗೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿರುವ ಒಬ್ಬರಿಗೆ ಕರೆ ಮಾಡಿದ್ದೆ. ಆದರೆ, ಇನ್ನೊಂದು ತುದಿಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ನನನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಹೊರತಾಗಿ ಯಾವುದೇ ಸಹಾಯವನ್ನು ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

Russia Ukraine Crisis: ಈವರೆಗೂ ಉಕ್ರೇನ್ ದೇಶ ತೊರೆದ 3.68 ಲಕ್ಷ ಜನ!
"ಕಾನೂನುಗಳ ಪ್ರಕಾರ ಭಾರತ ಸರ್ಕಾರವು ನನಗೆ ಅಗತ್ಯವಿರುವ ಎನ್ಓಸಿ (ನಿರಾಕ್ಷೇಪಣಾ ಪ್ರಮಾಣಪತ್ರ) (NOC)ನೀಡಿದ್ದರೆ ನಾನು ಇದೀಗ ಭಾರತದಲ್ಲಿರುತ್ತಿದ್ದೆ" ಎಂದು ಹೇಳಿದರು. ರಷ್ಯಾದ ಪಡೆಗಳು (Russia Army) ಫಿರಂಗಿ ಗುಂಡಿನ ಮತ್ತು ಕ್ರೂಸ್ ಕ್ಷಿಪಣಿಗಳಿಂದ ನಗರದ ಮೇಲೆ ದಾಳಿ ನಡೆಸುತ್ತಿರುವಾಗ ರಿಷಭ್  ಕೌಶಿಕ್  ರಾಜಧಾನಿ ಕೈವ್‌ನಲ್ಲಿರುವ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ. ಸೈರನ್ ಗಳು, ಗುಂಡು ಹಾಗೂ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಹೆಚ್ಚಿನ ಜನರು ಬಂಕರ್ ನಲ್ಲಿ ಅಡಗಿಕೊಂಡಿದ್ದಾರೆ. ಅದಲ್ಲದೆ, ಇಡೀ ಉಕ್ರೇನ್ ನಲ್ಲಿ ಶೀತದ ವಾತಾವರಣ ಇದ್ದು, ಬೆಚ್ಚಗಿನ ವಾತಾವರಣ ಬೇಕಾದಲ್ಲಿ ಬಂಕರ್ ನಿಂದ ಮೇಲೆ ಬರುವುದು ಅಗತ್ಯವಾಗಿದೆ.

PM Modi Meeting ಯುಪಿ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ಕಳೆದ ಫೆಬ್ರವರಿಯಲ್ಲಿ ಪ್ರಾಣಿಗಳ ರಕ್ಷಣೆಯ ಕಾರ್ಯದ ವೇಳೆ ಸಾಕು ನಾಯಿ ಸಿಕ್ಕಿತ್ತು. ಅದಕ್ಕೆ ರಿಷಭ್ ಮಾಲಿಬು ಎಂದು ಹೆಸರನ್ನೂ ಇಟ್ಟಿದ್ದಾರೆ. ಫೆಬ್ರವರಿ 27 ರಂದು ನನ್ನ ವಿಮಾನವಿತ್ತು. ಆದರೆ, ನಾನು ಇಲ್ಲಿಯೇ ಸಿಲುಕಿಕೊಂಡಿದ್ದೇನೆ ಎಂದು ರಿಷಭ್ ಹೇಳಿದ್ದಾರೆ. ವೀಡಿಯೊ ಫ್ರೇಮ್‌ನಲ್ಲಿ ನಾಯಿಮರಿಯನ್ನು ಪರಿಚಯಿಸಿದ ಅವರು, ನಿರಂತರ ಬಾಂಬ್ ಸ್ಫೋಟದ ಶಬ್ದಗಳಿಂದಾಗಿ ಪ್ರಾಣಿಯು ಒತ್ತಡಕ್ಕೊಳಗಾಗುತ್ತದೆ ಮತ್ತು ಹೆಚ್ಚಾಗಿ ಅಳುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. "ನಿಮಗೆ ಸಾಧ್ಯವಾದರೆ, ದಯವಿಟ್ಟು ನಮಗೆ ಸಹಾಯ ಮಾಡಿ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ನಮಗೆ ಸಹಾಯ ಮಾಡುತ್ತಿಲ್ಲ. ನಮಗೆ ಯಾರಿಂದಲೂ ಮಾಹಿತಿ ಸಿಗುತ್ತಿಲ್ಲ" ಎಂದು ಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios