ಸೆಕ್ಸ್ ಮಾಡುವಾಗ ಹೃದಯಾಘಾತದಿಂದ ರೋಗಿ ಸಾವು; ನರ್ಸ್‌ಗೆ ಆಸ್ಪತ್ರೆ ಶಿಕ್ಷೆ ಕೊಟ್ಟಿದ್ದೇಕೆ?
ಡಯಾಲಿಸಿಸ್ ಚಿಕಿತ್ಸೆಗೆ ಆಸ್ಪತ್ರೆಗೆ ಬರುತ್ತಿದ್ದ ರೋಗಿಯ ಜೊತೆ ನರ್ಸ್ ಅಫೇರ್ ಇರಿಸಿಕೊಂಡಿದ್ದಳು. ಆದರೆ, ಆ ದಿನ ಇಬ್ಬರೂ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಸೆಕ್ಸ್ ಮಾಡುವಾಗ, ರೋಗಿ ಮೃತಪಟ್ಟಿದ್ದ. ಇದರ ಬೆನ್ನಲ್ಲಿಯೇ ಆಸ್ಪತ್ರೆಯ ಮಂಡಳಿ ನರ್ಸ್‌ಅನ್ನು ಕೆಲಸದಿಂದ ತೆಗೆದುಹಾಕಿದೆ.
ನವದೆಹಲಿ (ಜು.10): ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ರೋಗಿಯ ಜೊತೆ ಸೀಕ್ರೆಟ್ ಆಗಿ ಅಫೇರ್ ಇರಿಸಿಕೊಂಡಿದ್ದ ನರ್ಸ್‌ಗೆ ಈಗ ಅದುವೇ ಮುಳುವಾಗಿ ಪರಿಣಮಿಸಿದೆ. ಡಯಾಲಿಸಿಸ್ ಚಿಕಿತ್ಸೆಗಾಗಿ ಬರುತ್ತಿದ್ದ ಆತನ ಜೊತೆ ಸೆಕ್ಸ್‌ನಲ್ಲಿ ನರ್ಸ್ ಭಾಗಿಯಾಗುತ್ತಿದ್ದಳು. ಆದರೆ, ಆ ದಿನ ಗ್ರಹಚಾರ ಕೆಟ್ಟಿತ್ತು. ಸೆಕ್ಸ್ ಮಾಡುವಾಗಲೇ ಆತ ಸಾವು ಕಂಡಿದ್ದ. ತನ್ನ ಕಾರ್‌ನ ಹಿಂಬದಿಯ ಸೀಟ್‌ನಲ್ಲಿ ಕುಸಿದು ಬಿದ್ದಿದ್ದ ಆತನನ್ನು ಬದುಕಿಸಲು ಕೂಡ ಆಕೆ ಪ್ರಯತ್ನ ಪಡಲಿಲ್ಲ. ಕನಿಷ್ಠ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರೂ ಆತ ಬದುಕುತ್ತಿದ್ದ. ಆತ ಸೆಕ್ಸ್ ಮಾಡುವಾಗಲೇ ಹಾರ್ಟ್ ಅಟ್ಯಾಕ್‌ನಿಂದ ಸಾವು ಕಂಡಿದ್ದರೆ, 42 ವರ್ಷದ ನರ್ಸ್ ಪೆನ್‌ಲೋಪ್ ವಿಲಿಯಮ್ಸ್‌ರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ಇಡೀ ಘಟನೆ ನಡೆದಿರುವುದು ಇಂಗ್ಲೆಂಡ್ ವೇಲ್ಸ್‌ನಲ್ಲಿ. ಪೆನ್‌ಲೋಪ್ ವಿಲಿಯಮ್ಸ್, ಒಂದು ವರ್ಷಕ್ಕೂ ಹೆಚ್ಚು ಕಾಲ ರೋಗಿಯೊಂದಿಗೆ ಅಫೇರ್ ಹೊಂದಿದ್ದರು ಎನ್ನುವುದು ಆಸ್ಪತ್ರೆಗೆ ತಿಳಿದ ನಂತರ ಆಕೆಯನ್ನು ವಜಾ ಮಾಡಲಾಗಿದೆ. ಕಾರ್‌ನಲ್ಲಿ ಇಬ್ಬರೂ ಸೆಕ್ಸ್ ಮಾಡುತ್ತಿರುವಾಗಲೇ ರೋಗಿಗೆ ಹೃದಯಾಘಾತವಾಗಿತ್ತು.
ವರದಿಯ ಪ್ರಕಾರ, ರೋಗಿಯು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದ ಮತ್ತು ಕಳೆದ ವರ್ಷ ಜನವರಿಯಲ್ಲಿ ನರ್ಸ್ ಜೊತೆ ತಡರಾತ್ರಿ ಸೆಕ್ಸ್ ಮಾಡುವಾಗಲೇ ಹೃದಯಾಘಾತದಿಂದ ಸಾವು ಕಂಡಿದ್ದ. ತನ್ನ ಕಾರ್‌ನ ಹಿಂಬದಿಯ ಸೀಟ್‌ನಲ್ಲಿಯೇ ರೋಗಿ ಜೊತೆ ಸೆಕ್ಸ್‌ನಲ್ಲಿ ಭಾಗಿಯಾಗಿದ್ದ ವಿಲಿಯಮ್ಸ್, ಆತ ಕುಸಿದು ಬಿದ್ದಾಗ ಕನಿಷ್ಠ ಆಂಬ್ಯುಲೆನ್ಸ್‌ಗೆ ಕರೆ ಕೂಡ ಮಾಡಿರಲಿಲ್ಲ. ಕೊನೆಗೆ ಆತ ಹೃದಯಾಘಾತ ಹಾಗೂ ಕಿಡ್ನಿ ವೈಫಲ್ಯದಿಂದ ಸಾವು ಕಂಡಿದ್ದ.
ಈ ಪ್ರಕರಣವನ್ನು ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (NMC) ಫಿಟ್‌ನೆಸ್-ಟು-ಪ್ರಾಕ್ಟೀಸ್ ಸಮಿತಿಯ ತನಿಖೆ ನಡೆಸಿತ್ತು. ತನ್ನ ಸಹಪಾಠಿಗಳು ಆಂಬ್ಯಲೆನ್ಸ್‌ಗೆ ಕರೆ ಮಾಡುವಂತೆ ಹೇಳಿದ್ದ ಮಾತನ್ನೂ ಕೂಡ ವಿಲಿಯಮ್ಸ್ ಕೇಳಿರಲಿಲ್ಲ ಎನ್ನಲಾಗಿದೆ.ತನ್ನ ರೋಗದ ಕಾರಣದಿಂದಾಗಿಯೇ ವ್ಯಕ್ತಿ-ವಿಲಿಯಮ್ಸ್‌ಗೆ ಆಪ್ತನಾಗಿದ್ದ. ಇದೇ ಕೊನೆಗೆ ದೈಹಿಕ ಸಂಬಂಧದವರೆಗೆ ಬೆಳೆದಿತ್ತು.
ಆಸ್ಪತ್ರೆಯ ಸಿಬ್ಬಂದಿಗಳು ರೋಗಿಯನ್ನು ಪರಿಶೀಲಿಸಿದಾಗ ಆತ ಹೆಚ್ಚೂ ಕಡಿಮೆ ಬೆತ್ತಲೆಯಾಗಿದ್ದ ಹಾಗೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಹೇಳಲಾಗಿದೆ. ಹೃದಯಾಘಾತವಾಗಿ ಆತ ಕುಸಿದು ಬಿದ್ದ ಸಮಯದಲ್ಲಿ ತುರ್ತು ಚಿಕಿತ್ಸೆ ನೀಡುವ ವ್ಯಕ್ತಿಯನ್ನು ಕರೆಯುವ ಬದಲು ತನ್ನ ಸಹಪಾಠಿಗಳನ್ನು ಕರೆದಿದ್ದರು. ಈ ವೇಳೆ ಅವರು ಆಂಬ್ಯುಲೆನ್ಸ್‌ಗೆ ಕರೆ ಮಾಡುವಂತೆ ತಿಳಿಸಿದ್ದರು. ಈ ಹಂತದಲ್ಲಿ ಆಕೆ ಆಳುತ್ತಿದ್ದಳು ಹಾಗೂ ಯಾರೋ ಸತ್ತಿದ್ದಾರೆ ಎನ್ನುವಂತೆ ಸೀನ್ ಕ್ರಿಯೇಟ್ ಮಾಡಲು ಮುಂದಾಗಿದ್ದರು ಎಂದು ತನಿಖೆಯ ವರದಿ ಹೇಳಿದೆ.
ಆಸ್ತಿಗಾಗಿ ಬಿಹಾರದಲ್ಲಿ ಭೀಕರ ಕ್ರೌರ್ಯ, ಮಹಿಳೆಯ ಸ್ತನಗಳ ಕೊಯ್ದು, ಕಣ್ಣು ಕಿತ್ತು ಕೊಲೆ!
ಅಂದಾಜು ಆರು ತಿಂಗಳ ಕಾಲ ನಡೆದ ತನಿಖೆಯ ಬಳಿಕ ಇದರಲ್ಲಿ, ವಿಲಿಯಮ್ಸ್ ತಪ್ಪು ಎದ್ದು ಕಂಡಿದೆ. ಆತ ಹೃದಯಾಘಾತದಿಂದ ಸಾವು ಕಂಡಿದ್ದರೂ, ವಿಲಿಯಮ್ಸ್ ಅವರ ಪಾಲೂ ಕೂಡ ಅದರಲ್ಲಿ ಇದೆ ಎಂದಿರುವ ಸಮಿತಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.
ತನ್ನ ಕೊನೆಗಾಲದಲ್ಲಿ ಆಸರೆಯಾಗಿದ್ದ ಗೆಳತಿಗೆ 900 ಕೋಟಿ ಆಸ್ತಿ ಬಿಟ್ಟುಹೋದ ಇಟಲಿ ಮಾಜಿ ಪ್ರಧಾನಿ!