ಆಸ್ತಿಗಾಗಿ ಬಿಹಾರದಲ್ಲಿ ಭೀಕರ ಕ್ರೌರ್ಯ, ಮಹಿಳೆಯ ಸ್ತನಗಳ ಕೊಯ್ದು, ಕಣ್ಣು ಕಿತ್ತು ಕೊಲೆ!
ಬಿಹಾರದ ಗ್ರಾಮವೊಂದರಲ್ಲಿ ಆಸ್ತಿಗಾಗಿ ನಡೆದಿರುವ ಕೊಲೆ ಎಷ್ಟು ಭೀಕರವಾಗಿತ್ತೆಂದರೆ, ಗ್ರಾಮದ ಸ್ಥಳೀಯರು ಇಂಥ ಹೀನ ರೀತಿಯಲ್ಲಿ ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವವರೆಗೂ ಮಹಿಳೆಯ ಶವವನ್ನು ತೆಗೆಯೋದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಹೆಣ ಇಟ್ಟು ಪ್ರತಿಭಟನೆ ನಡೆಸಿದರು.
ನವದೆಹಲಿ (ಜು.10): ಬಿಹಾರದ ಖಗರಿಯಾ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಂಪೂರ್ಣವಾಗಿ ಛಿಧ್ರವಾಗಿರುವ ಆಕೆಯ ಶವ ಪತ್ತೆಯಾಗಿದ್ದು, ಸ್ಥಳೀಯರಿಂದ ಭಾರೀ ಪ್ರತಿಭಟನೆಗೆ ಕಾರಣಗಾಗಿದೆ. ಆಸ್ತಿ ಕಲಹಕ್ಕಾಗಿ ಪಸ್ರಹಾ ಗ್ರಾಮದ ಸುಲೇಖಾ ದೇವಿ ಅವರನ್ನು ನಾಲ್ವರು ವ್ಯಕ್ತಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆಕೆಯ ಶವ ಸಿಕ್ಕಿದಾಗ ಅದರಲ್ಲಿ ಕಣ್ಣುಗಳೇ ಇದ್ದರಲಿಲ್ಲ, ಆಕೆಯ ಎರಡೂ ಸ್ತನಗಳನ್ನು ಕತ್ತರಿಸಿ ಹಾಕಕಾಗಿತ್ತು. ನಾಲಿಗೆಯನ್ನು ಕತ್ತರಿಸಿ ಹಾಕಲಾಗಿದ್ದರೆ, ಆಕೆಯ ಖಾಸಗಿ ಭಾಗಗಳಲ್ಲೂ ಚೂರಿಯಿಂದ ಕೊಯ್ದು ವಿರೂಪ ಮಾಡಿದ್ದಾರೆ. ಬಳಿಕ ಆಕೆಯನ್ನ ಹರಿತವಾದ ಆಯುಧದರಿಂದ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರ ವಿರುದ್ಧ ಚಿತ್ರಹಿಂಸೆ ಹಾಗೂ ಕೊಲೆಯ ಪ್ರಕರಣ ದಾಖಲು ಮಾಡಲಾಗಿದೆ. ಸುಲೇಖಾ ದೇವಿ ತಮ್ಮ ಹೊಲದಲ್ಲಿ ಭತ್ತದ ನಾಟಿ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
2014ರ ಏಪ್ರಿಲ್ 25 ರಂದು ಸುಲೇಖಾ ದೇವಿ ಅವರ ಪತಿ ಬಬ್ಲು ಸಿಂಗ್ ಮತ್ತು ಅವರ ಸೋದರ ಮಾವನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಹಾಗಾಗಿ ಇದು ಅವರ ಕುಟುಂಬಕ್ಕೆ ಮೊದಲ ದುರಂತವಲ್ಲ. ಪತಿ ಹತ್ಯೆ ಪ್ರಕರಣದ ಆರೋಪಿ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಅಪರಾಧದ ಹಿಂದಿನ ಉದ್ದೇಶವು ಜಮೀನು ವಿವಾದ ಎಂದು ಶಂಕಿಸಲಾಗಿದೆ, ಆದರೂ ನಿಖರವಾದ ಕಾರಣವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಸ್ಥಳದಿಂದ ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಡಿಪಿಒ ಮನೋಜ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಘಟನೆಯ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ದೇಶ ಕಾಯೋ ಯೋಧನ ಪತ್ನಿಗೆ ಮನೆಯಲ್ಲಿ ರಕ್ಷಣೆ ಸಿಗಲಿಲ್ಲ: ಒಂದೇ ಹಗ್ಗಕ್ಕೆ ನೇಣಿಗೆ ಶರಣಾದ ತಾಯಿ-ಮಗಳು
ಭೀಕರವಾಗಿ ನಡೆದಿರುವ ಈ ಕೊಲೆಗೆ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಸಂತ್ರಸ್ತೆಯ ಸಂಬಂಧಿಕರೊಂದಿಗೆ ಸ್ಥಳೀಯ ನಿವಾಸಿಗಳು ಪಸ್ರಾಹ ಪೊಲೀಸ್ ಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಸ್ಥಳಕ್ಕೆ ಎಸ್‌ಡಿಪಿಒ ಆಗಮಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಸಂಬಂಧಿಕರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕತ್ತು ಸೀಳಿ ಬರ್ಬರ ಹತ್ಯೆ, ಕೋಳಿ ಸಾಗಾಣಿಕೆ ಮಾಡುತ್ತಿದ್ದ ಯುವಕನ ಕೊಲೆಯ ಸುತ್ತ ಹಲವು ಅನುಮಾನ
ಕುಟುಂಬದವರು, ಪಕ್ಕದ ಮನೆಯವರಾದ ಮಹೇಂದ್ರ ಸಿಂಗ್, ರೌಲೂ ಸಿಂಗ್, ರಾಜ್‌ದೇವ್ ಸಿಂಗ್, ಫೌಲುಂಗಿ ಸಿಂಗ್ ಮತ್ತು ಶ್ಯಾಮ್ ಕುಮಾರ್ ಸಿಂಗ್ ವಿರುದ್ಧ ಅನುಮಾನವ್ಯಕ್ತಪಡಿಸಿದ್ದಾರೆ.