40 ಪುಟ್ಟ ಮಕ್ಕಳ ಶಿರಚ್ಛೇದ ಮಾಡಿದ ಹಮಾಸ್‌ ಉಗ್ರರು, ಶವ ಕಂಡು ಕಣ್ಣೀರಿಟ್ಟ ಇಸ್ರೇಲ್‌ ಯೋಧರು!


ಹಮಾಸ್‌ ಉಗ್ರರು ದಾಳಿ ಮಾಡಿದ್ದ ಗಾಜಾಪಟ್ಟಿಯ ಸನಿಹದ ಸಣ್ಣ ಹಳ್ಳಿಗೆ ಮಂಗಳವಾರ ಇಸ್ರೇಲ್‌ ಸೈನಿಕರು ಪ್ರವೇಶಿಸಿದ್ದಾರೆ. ಈ ವೇಳೆ 40 ಮಕ್ಕಳ ಶವ ಪತ್ತೆಯಾಗಿದ್ದು, ಹೆಚ್ಚಿನ ಮಕ್ಕಳ ಶಿರಚ್ಛೇದ ಮಾಡಲಾಗಿದೆ ಎಂದು ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ.
 

in Hamas attacked village Israel soldiers found  At least 40 babies some beheaded san

ನವದೆಹಲಿ (ಅ.11): ಹಮಾಸ್‌ ಉಗ್ರರ ಭೀಬತ್ಸ ಕೃತ್ಯವನ್ನು ಇಸ್ರೇಲ್‌ ಸೈನಿಕರು ಮಾಧ್ಯಮಗಳ ಎದುರೇ ತೋರಿಸಿದ್ದಾರೆ. ಕಳೆದ ಶನಿವಾರ ಗಾಜಾದ ಗಡಿ ಬೇಲಿ ತೆಗೆದು ಇಸ್ರೇಲ್‌ನತ್ತ ನುಗ್ಗಿದ್ದ ಹಮಾಸ್‌ ಉಗ್ರರು ಗಡಿಯ ಪುಟ್ಟ ಹಳ್ಳಿಗೆ ನುಗ್ಗಿದ್ದಾರೆ. ಈ ವೇಳೆ 40ಕ್ಕೂ ಅಧಿಕ ಮಕ್ಕಳ ಶವ ಪತ್ತೆಯಾಗಿದೆ. ಈ ವೇಳೇ ಸಾಕಷ್ಟು ಮಕ್ಕಳ ಶಿರಚ್ಛೇದ ಮಾಡಲಾಗಿದೆ ಎಂದು ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿದೆ. ಸ್ಥಳೀಯ ಇಸ್ರೇಲಿ ಮಾಧ್ಯಮ i24News ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳ  ಸೈನಿಕರು ಶನಿವಾರ ಮುಂಜಾನೆ ಹಮಾಸ್ ಭಯೋತ್ಪಾದಕರು ದಾಳಿ ಮಾಡಿದ ಪ್ರದೇಶಗಳಲ್ಲಿ ಒಂದಾದ ಕಫ್ರ್‌ ಅಜಾಗೆ ತೆರಳಿದ್ದರು. ಅಲ್ಲಿ ಸುಮಾರು 40 ಶಿಶುಗಳ ಶವಗಳನ್ನು ಅವರು ಪತ್ತೆ ಮಾಡಿದ್ದಾರೆ. ಈ ವೇಳೆ ಹೆಚ್ಚಿನ ಮಕ್ಕಳ ಶಿರಚ್ಛೇದ ಮಾಡಲಾಗಿದೆ. ಇದು ಹಮಾಸ್‌ ಉಗ್ರರ ಕ್ರೂರತೆಗೆ ಸಾಕ್ಷಿಯಾಗಿದೆ ಎಂದು ಇಸ್ರೇಲ್‌ ಹೇಳಿದೆ. ಈ ಪ್ರದೇಶದಲ್ಲಿ ಸಿಕ್ಕ ಶವಗಳನ್ನು ಹೊರತೆಗೆಯುವ ಸಮಯದಲ್ಲಿ, 40ಕ್ಕೂ ಅಧಿಕ ಮಕ್ಕಳ ಶವಗಳು ಪತ್ತೆಯಾಗಿವೆ. ಅವರ ಮೂಳೆಗಳನ್ನು ಬಳಸಿಕೊಂಡು, ದೇಹವನ್ನು ಗುರುತಿಸಲಿದ್ದೇವೆ ಎಂದು ಇಸ್ರೇಲ್‌ ಸೈನಿಕರ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಖಂಡಿತಾ ಇದು ಯುದ್ಧವಲ್ಲ. ಇದು ಯುದ್ಧಭೂಮಿಯೂ ಅಲ್ಲ. ಇಲ್ಲಿ ನೀವು ಶಿಶಿಗಳು, ತಾಯಿ, ತಂದೆ, ಅವರ ಬೆಡ್‌ರೂಮ್‌ಗಳಲ್ಲಿ, ಬಾಂಬ್‌ ಶೆಲ್ಟರ್‌ಗಳಲ್ಲಿ ಭಯೋತ್ಪಾದಕವರು ಎಷ್ಟು ಅಮಾನುಷವಾಗಿ ಕೊಂದಿದ್ದಾರೆ ಅನ್ನೋದನ್ನು ನೋಡುತ್ತಿದ್ದೀರಿ' ಎಂದು ಐಡಿಎಫ್‌ನ ಮೇಜರ್‌ ಜನರಲ್‌ ಇಟಾಯ್ ವೆರುವ್ ಹೇಳಿದ್ದನ್ನು ಇಸ್ರೇಲ್‌ ಮಾಧ್ಯಮ ವರದಿ ಮಾಡಿದೆ. ಇದನ್ನು ಹೇಳುವ ವೇಳೆ ಅವರು ಭಾವುಕರೂ ಆಗಿದ್ದರು. ಇದು ಬರೀ ಯುದ್ಧಪರಾಧವಲ್ಲ, ಇದು ಹತ್ಯಾಕಾಂಡ ಎಂದು ಅವರು ಕರೆದಿದ್ದಾರೆ.

ಶನಿವಾರ ಬೆಳಗ್ಗೆ, ಇಸ್ರೇಲ್‌ನಲ್ಲಿ ಪ್ರಜೆಗಳು ಮಲಗಿದ್ದ ಸಮಯದಲ್ಲಿ ರಾಕೆಟ್‌ ದಾಳಿ ಮಾಡಿದ್ದ ಹಮಾಸ್‌ ಉಗ್ರರು, ಗಾಜಾಪಟ್ಟಿಯ ಸನಿಹದಲ್ಲಿ ಗಡಿಯ ಬೇಲಿಗಳನ್ನು ಮುರಿದು ಉಗ್ರ ಕೃತ್ಯ ನಡೆಸಿದ್ದರು. ಇಸ್ರೇಲಿ ಜನರನ್ನು ಬೀದಿಯಲ್ಲಿ ಎಳೆದಿದ್ದು ಮಾತ್ರವಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರ್‌ಗಳನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದರು. ಅದಲ್ಲದೆ, ಸಾಕಷ್ಟು ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಪುರುಷರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 700 ಕ್ಕೂ ಹೆಚ್ಚು ಇಸ್ರೇಲಿಗಳು ಒಂದೇ ದಿನದಲ್ಲಿ ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಪಟ್ಟರು - ಇಸ್ರೇಲ್‌ನ ಇತಿಹಾಸದಲ್ಲಿ ಒಂದೇ ದಿನದಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿತ್ತು.

ಇಸ್ರೇಲಿ ಸೇನೆಯು ಗಾಜಾ ಗಡಿಯಿಂದ ಕಾಲು ಮೈಲಿಗಿಂತ ಕಡಿಮೆ ಇರುವ ಕಿಬ್ಬುತ್ಜ್ ಕ್ಫರ್ ಅಜಾಕ್ಕೆ ದೇಶದ ಹಾಗೂ ವಿದೇಶದ ಮಾಧ್ಯಮಗಳಿಗೆ ಭೇಟಿ ನೀಡಲು ಅನುಮತಿ ನೀಡಿತ್ತು. ಅದರ ಬೆನ್ನಲ್ಲಿಯೇ ಹಮಾಸ್‌ ಉಗ್ರರ ಪಾತಕ ಕೃತ್ಯಗಳು ಜಗತ್ತಿನ ಮುಂದೆ ಬಂದಿವೆ. ನಗರದಲ್ಲಿ ಇಸ್ರೇಲ್‌ ಪ್ರಜೆಗಳನ್ನು ಕೊಲೆ ಮಾಡಿ ಅವರ ದೇಹಗಳನ್ನು ರಸ್ತೆಯಲ್ಲಿ ಎಸೆತಲಾಗಿದೆ. ಕಾರ್‌ಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳ ಮೇಲೂ ದಾಳಿ ನಡೆಸಿದ್ದಾರೆ.

'ನನ್ನ ಶತಕ ಗಾಜಾದ ನನ್ನ ಅಣ್ಣ-ತಂಗಿಯರಿಗೆ ಅರ್ಪಣೆ': ಪಾಕ್ ಕ್ರಿಕೆಟಿಗ ರಿಜ್ವಾನ್

ಇದಲ್ಲದೆ ಸ್ಥಳೀಯ ಮಾಧ್ಯಮಗಳು ಹಮಾಸ್‌ ಮಾಡಿದ ಈ ಕೃತ್ಯವನ್ನು 2ನೇ ಮಹಾಯುದ್ಧದ ಸಂದರ್ಭದಲ್ಲಿ ತಮ್ಮ ಮೇಲೆ ನಾಜಿ ಸೈನಿಕರು ಮಾಡಿದ್ದ ಮಾನವಕುಲದ ಅತಿದೊಡ್ಡ ಹತ್ಯಾಕಾಂಡಕ್ಕೆ ಹೋಲಿಸಿದ್ದಾರೆ. ಅಂದಾಜು 200 ಶವಗಳು ಈ ನಗರದಿಂದಲೇ ಹೊರತೆಗೆಯಲಾಗಿದೆ.

ತಾಯ್ನಾಡಿಗೆ ಸಂಕಷ್ಟ ಕಾಲ: ತವರಿಗೆ ಮರಳಿದ ಸಾವಿರಾರು ಇಸ್ರೇಲಿಗರು

Latest Videos
Follow Us:
Download App:
  • android
  • ios