ತೋಶಾಖಾನ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವುದು, ಲಾಹೋರ್ ಕ್ಷೇತ್ರದಲ್ಲಿ ಇಮ್ರಾನ್‌ರ ಪಿಟಿಐ ಪಕ್ಷದ ಸೂಚಕ, ಅನುಮೋದಕ ಇಲ್ಲದಿರುವುದು, ನಾಮಪತ್ರಕ್ಕೆ ಪಿಎಂಎನ್‌ಎಲ್ ಪಕ್ಷ ಸೇರಿ ಹಲವರಿಂದ ಆಕ್ಷೇಪಗಳು ಬಂದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಲಾಹೋರ್ (ಡಿಸೆಂಬರ್ 31, 2023): ಮುಂಬರುವ ಸಂಸತ್ ಚುನಾವಣೆ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ಮಂತ್ರಿ ಇಮ್ರಾನ್ ಖಾನ್ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಹೀಗಾಗಿ ಅಧಿಕಾರಕ್ಕೆ ಮರಳುವ ಇಮ್ರಾನ್ ಖಾನ್ ಆಶಯಕ್ಕೆ ಭಾರೀ ಪೆಟ್ಟು ಬಿದ್ದಿದೆ.
ತೋಶಾಖಾನ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವುದು, ಲಾಹೋರ್ ಕ್ಷೇತ್ರದಲ್ಲಿ ಇಮ್ರಾನ್‌ರ ಪಿಟಿಐ ಪಕ್ಷದ ಸೂಚಕ, ಅನುಮೋದಕ ಇಲ್ಲದಿರುವುದು, ನಾಮಪತ್ರಕ್ಕೆ ಪಿಎಂಎನ್‌ಎಲ್ ಪಕ್ಷ ಸೇರಿ ಹಲವರಿಂದ ಆಕ್ಷೇಪಗಳು ಬಂದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಇಮ್ರಾನ್ ಜೊತೆಗೆ ಅವರ ಆಪ್ತ ಶಾ ಮಹ್ಮೂದ್ ಖುರೇಶಿ ಹಾಗೂ ಹಮ್ಮದ್ ಅಝರ್ ಅವರ ನಾಮಪತ್ರವನ್ನು ಪಾಕಿಸ್ತಾನ ಚುನಾವಣಾ ಆಯೋಗ ತಿರಸ್ಕರಿಸಿದೆ.
ಇದನ್ನು ಓದಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಹಸ್ತಾಂತರದ ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ
ಇಮ್ರಾನ್ ಖಾನ್ ಪಕ್ಷಕ್ಕೆ ಗೋಹರ್ ಹೊಸ ಸಾರಥಿ
ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಗೋಹರ್ ಅಲಿ ಖಾನ್ ಅವರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಈ ಆಯ್ಕೆ ಮಾಡಲಾಗಿದೆ.
1996ರಲ್ಲಿ ಇಮ್ರಾನ್ ಖಾನ್ ಪಿಟಿಐ ಪಕ್ಷವನ್ನು ಸ್ಥಾಪಿಸಿದಾಗಿನಿಂದ ಇದೇ ಮೊದಲ ಬಾರಿಗೆ ಪಕ್ಷಕ್ಕೆ ಇಮ್ರಾನ್ ಖಾನ್ ಹೊರತು ಬೇರೊಬ್ಬ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇಮ್ರಾನ್ ಖಾನ್, ತೋಶಖಾನಾ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ಬಳಿಕ ಅಕ್ಟೋಬರ್ 5 ರಂದು ಅವರನ್ನು ಬಂಧಿಸಲಾಗಿತ್ತು.
ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ: ಮೊದಲ ಹಿಂದೂ ಮಹಿಳಾ ಶಾಸಕಿಯಾಗ್ತಾರಾ ಸವೀರಾ ಪ್ರಕಾಶ್?
