ಪಾಕಿಸ್ತಾನ ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಮುನ್ನಡೆದ ಇಮ್ರಾನ್  ವಿಶ್ವಾಸ ಮತಯಾಚನೆ ಮಾಡದೆ ಅಸೆಂಬ್ಲಿ ವಿಸರ್ಜನೆ, 90 ದಿನದಲ್ಲಿ ಎಲೆಕ್ಷನ್ ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು, ವಿಪಕ್ಷಗಳಿಂದ ಧರಣಿ ಆರಂಭ

ಇಸ್ಲಾಮಾಬಾದ್(ಏ.03): ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು(Pakistan political Crisis) ಇಂದು ಹೊಸ ತಿರುವು ಪಡೆದುಕೊಂಡಿದೆ. 3 ತಿಂಗಳ ಕಾಲಕ್ಕೆ ಸರ್ಕಾರ ಸೇಫ್ ಮಾಡಿಕೊಂಡಿದ್ದಾರೆ, ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ, ಚುನಾವಣೆಗೆ ತಯಾರಿ ಮಾಡಿಕೊಳ್ಳಲಿದ್ದಾರೆ ಅನ್ನೋ ಮಾತುಗಳಿಗೆ ಪಾಕಿಸ್ತಾನ ಸರ್ಕಾರದ ಸಂಪುಟ ಕಾರ್ಯದರ್ಶಿ ಬ್ರೇಕ್ ಹಾಕಿದ್ದಾರೆ. ಅಸೆಂಬ್ಲಿ ವಿಸರ್ಜನೆಯೊಂದಿಗೆ ಇಮ್ರಾನ್ ಖಾನ್(Imran Khan) ಪ್ರಧಾನಿ ಪಟ್ಟ ಕಳಚಿದೆ ಎಂದು ಕ್ಯಾಬಿನೆಟ್ ಸೆಕ್ರೆಟರಿ ಹೇಳಿದ್ದಾರೆ.

ವಿಶ್ವಾಸ ಮತ ಯಾಚನೆಯಲ್ಲಿ ಪಾಕಿಸ್ತಾನ ಪ್ರಧಾನಿ(Pak Prime Minister) ಇಮ್ರಾನ್ ಖಾನ್‌ಗೆ ಸೋಲಾಗಲಿದೆ. ರಾಜೀನಾಮೆ ನೀಡಲಿದ್ದಾರ ಅನ್ನೋ ಲೆಕ್ಕಾಚಾರವನ್ನು ಇಮ್ರಾನ್ ತಲೆಕೆಳಗೆ ಮಾಡಿದ್ದಾರೆ. ವಿಶ್ವಾಸ ಮತ ಯಾಚನೆ ಮಾಡದೆ ನೇರವಾಗಿ ಅಸೆಂಬ್ಲಿ ವಿಸರ್ಜಿಸಿದ್ದಾರೆ. ಇಮ್ರಾನ್ ಸೂಚನೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಆದರೆ ಚುನಾವಣೆ ನಡೆಯುವರೆಗೆ ಇಮ್ರಾನ್ ಪ್ರಧಾನಿಯಾಗಿ ಮುಂದುವರಿಯವುದಿಲ್ಲ ಎಂದು ಕ್ಯಾಬಿನೆಟ್ ಸಕ್ರೆಟರಿ ಖಾಸಿಮ್ ಸುರಿ ಹೇಳಿದ್ದಾರೆ.

Pakistan ರಾಷ್ಟ್ರೀಯ ಅಸ್ಲೆಂಬ್ಲಿ ವಿಸರ್ಜನೆ, ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಪಾಕ್ ಸುಪ್ರೀಂ ಕೋರ್ಟ್!

90 ದಿನಗಳ ಒಳಗಡೆ ಚುನಾವಣೆ ನಡೆಯಲಿದೆ. ಅಲ್ಲೀವರಗೆ ಪಾಕಿಸ್ತಾನ ಅಧಿಕಾರಿಗಳು ಆಡಳಿತ ನೋಡಿಕೊಳ್ಳಲಿದ್ದಾರೆ ಎಂದು ಖಾಸಿಮ್ ಸುರಿ ಸುತ್ತೋಲೆಯಲ್ಲಿ ಹೇಳಿದ್ದಾರೆ. ಈ ಮೂಲಕ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಮುಂದಾದ ಇಮ್ರಾನ್ ಖಾನ್‌ಗೆ ಹಿನ್ನಡೆಯಾಗಿದೆ. 

ಇದರ ನಡುವೆ ಪಾಕಿಸ್ತಾನದ ವಿಪಕ್ಷಗಳು ಇಮ್ರಾನ್ ಖಾನ್ ಅಸಂವಿಧಾನಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಆರೋಪಿಸಿದೆ. ವಿಶ್ವಾಸ ಮತ ಯಾಚನೆ ಮಾಡುವರೆಗೂ ಅಸೆಂಬ್ಲಿಯಲ್ಲೇ ಧರಣಿ ನಡೆಸುವುದಾಗಿ ಎಚ್ಚರಿಸಿದೆ. ಇಷ್ಟೇ ಅಲ್ಲ ವಿಪಕ್ಷಗಳು ಪಿಎಂಎಲ್ ಎನ್ ನಾಯಕ ಶೆಹಬಾಜ್ ಷರೀಫ್ ನಮ್ಮ ಪ್ರಧಾನಿ ಎಂದು ಘೋಷಿಸಿದೆ. 193 ಸದಸ್ಯರ ಬೆಂಬಲ ಹೊಂದಿರುವ ಷರಿಫ್ ನಮ್ಮ ಪ್ರಧಾನಿ ಎಂದಿದೆ. ಇಷ್ಟೇ ಅಲ್ಲ ಆಯಾಜ್ ಸಾಧಿಕನ್ನು ಸ್ಪೀಕರ್ ಆಗಿ ನೇಮಕ ಮಾಡಿದೆ. ಈ ಮೂಲಕ ಇಮ್ರಾನ್ ಮೇಲಿನ ಅವಿಶ್ವಾಸ ನಿರ್ಣಯವನ್ನು ಮತ್ತೆ ಮಂಡಿಸಲು ತಯಾರಿ ನಡೆಸಲಾಗುತ್ತಿದೆ.

Pakistan ಗೂಗ್ಲಿ ಎಸೆದ ಇಮ್ರಾನ್ ಖಾನ್? ಮನವಿ ಮಾಡಿದ ಅರ್ಧಗಂಟೆಯಲ್ಲೇ ಪಾಕ್ ಶಾಸನಸಭೆ ವಿಸರ್ಜನೆ!

ಇತ್ತ ವಿಪಕ್ಷಗಳು ಇಮ್ರಾನ್ ನಡೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಶ್ವಾಸ ಮತ ಯಾಚನೆ ಮಾಡದೆ ಅಸೆಂಬ್ಲಿ ವಿಸರ್ಜನೆ ಸಂವಿಧಾನ ಬಾಹಿರ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಕದ ತಟ್ಟಿದೆ. ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಇತ್ತ ಪಾಕಿಸ್ತಾನ ರಾಜಕೀಯ ಬಿಕ್ಕಿಟ್ಟಿನಲ್ಲಿ ಸೇನೆ ಪಾತ್ರವಿದೆ ಅನ್ನೋ ಆರೋಪವನ್ನು ಸೇನೆ ತಳ್ಳಿ ಹಾಕಿದೆ. ಪಾಕಿಸ್ತಾನದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ಪಾಕಿಸ್ತಾನ ಸೇನೆಗೂ ಸಂಬಂಧವಿಲ್ಲ. ಇದರಲ್ಲಿ ಸೇನೆ ಪಾತ್ರವಿಲ್ಲ ಎಂದು ಪಾಕಿಸ್ತಾನ ಸೇನಾ ಪಬ್ಲಿಕ್ ರಿಲೇಶನ್‌ಶಿಪ್ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನ ಇತಿಹಾಸದಲ್ಲಿ ಇದುವರೆಗೂ ಯಾವ ಪ್ರಧಾನಿ ಸಂಪೂರ್ಣ ಅವಧಿಗೆ ಆಡಳಿತ ನಡೆಸಿಲ್ಲ. ಹಲವು ಅಡೆತಡೆಗಳು ಸಾಗಿ ಬಂದ ಇಮ್ರಾನ್ ಖಾನ್ ಸರ್ಕಾರ 5 ವರ್ಷ ಪೂರ್ಣಗೊಳಿಸಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇಮ್ರಾನ್ ಸರ್ಕಾರ ಕೂಡ ಪಾಕಿಸ್ತಾನ ರಾಜಕೀಯ ಬಿಕ್ಕಟ್ಟಿಗೆ ಉದುರಿ ಬಿದ್ದಿದೆ.