ಜಾರ್ಜಿಯಾ(ಡಿ.12): ದಕ್ಷಿಣ ಜಾರ್ಜಿಯಾ ದ್ವೀಪಕ್ಕೆ ಬೃಹತ್‌ ಹಿಮಗಡ್ಡೆಯೊಂದು ಅಪ್ಪಳಿಸುವ ಭೀತಿ ಎದುರಾಗಿದೆ. ದೆಹಲಿಗಿಂತಲೂ ಎರಡು ಪಟ್ಟು ದೊಡ್ಡದಾದ, 160 ಕಿ.ಮೀ. ಉದ್ದ ಹಾಗೂ 48 ಕಿ.ಮೀ. ಅಗಲವಾದ ಹಿಮಗಡ್ಡೆ ಅಟ್ಲಾಂಟಿಕ್‌ ಖಂಡದಿಂದ ಬೇರ್ಪಟ್ಟು ದಕ್ಷಿಣ ಜಾರ್ಜಿಯಾ ದ್ವೀಪದತ್ತ ಜಾರುತ್ತಿದೆ.

ಇದು ಸಣ್ಣ ತುಣುಕು, ಕೊರೋನಾದಿಂದ ದೊಡ್ಡ ಅಪಾಯವಿದೆ: 'ಬಾವಲಿ ಮಹಿಳೆ’ಯ ಎಚ್ಚರಿಕೆ

ಒಂದು ವೇಳೆ ವಿಶ್ವದ ಅತಿದೊಡ್ಡ ಹಿಮಗಡ್ಡೆ ದಕ್ಷಿಣ ಜಾರ್ಜಿಯಾಕ್ಕೆ ಅಪ್ಪಳಿಸಿದರೆ ಸಾವಿರಾರು ಪೆಂಗ್ವಿನ್‌ಗಳು ಹಾಗೂ ಸೀಲ್‌ಗಳ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಈ ಹಿಮಗಡ್ಡೆ 2017ರಲ್ಲಿ ಅಟ್ಲಾಂಟಿಕ್‌ನಿಂದ ಬೇರ್ಪಟ್ಟಿತ್ತು. ಸದ್ಯ ಈ ಹಿಮಗಡ್ಡೆ ದಕ್ಷಿಣ ಜಾರ್ಜಿಯಾದ ಕರಾವಳಿಯಿಂದ 210 ಕಿ.ಮೀ. ದೂರದಲ್ಲಿದೆ. ಆದರೆ, ಹಿಮಗಡ್ಡೆ ಇದೇ ರೀತಿ ಚಲಿಸುತ್ತಿದ್ದರೆ ಇನ್ನು ಕೆಲವೇ ವಾರಗಳಲ್ಲಿ ದಕ್ಷಿಣ ಜಾರ್ಜಿಯಾಕ್ಕೆ ಅಪ್ಪಳಿಸಲಿದೆ. ಒಂದು ವೇಳೆ ದಡಕ್ಕೆ ಅಪ್ಪಳಿಸಿದ ಬಳಿಕ ಹಿಮಗಡ್ಡೆ ಹಿಂದೆ ಸರಿಯದೇ ಅಲ್ಲೇ ನಿಂತುಕೊಂಡರೆ 10 ವರ್ಷಗಳ ಕಾಲ ನಿಂತಲ್ಲೇ ಇರಲಿದೆ.

ಆಯತಾಕಾರದ ಐಸ್: ನೋಡಲು ತುಂಬಾ ನೈಸ್!

ಇದರಿಂದ ಪೆಂಗ್ವಿನ್‌ ಹಾಗೂ ಸೀಲ್‌ಗಳಿಗೆ ಆಹಾರದ ಸಮಸ್ಯೆ ಎದುರಾಗಲಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.