Asianet Suvarna News Asianet Suvarna News

ಆಯತಾಕಾರದ ಐಸ್: ನೋಡಲು ತುಂಬಾ ನೈಸ್!

ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲೊಂದು ವಿಸ್ಮಯಕಾರಿ ಮಂಜುಗಡ್ಡೆ! ನಾಸಾ ವಿಜ್ಞಾನಿಗಳಿಗೆ ಸೆರೆ ಸಿಕ್ಕ ಆಯತಾಕಾರದಲ್ಲಿರುವ ಮಂಜುಗಡ್ಡೆ! ಬೃಹತ್ ಲಾರ್ಸೆನ್ ಸಿ ಮಂಜುಗಡ್ಡೆಯ ಒಡೆದ ಭಾಗ! ಸಮುದ್ರದಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿರುವ ಆಯತಾಕಾರದ ಮಂಜುಗಡ್ಡೆ
     

Rectangular Shaped Iceberg Is Floating In Antarctica
Author
Bengaluru, First Published Oct 24, 2018, 2:01 PM IST

ವಾಷಿಂಗ್ಟನ್(ಅ.24): ‘ಖುದರತ್ ಕಾ ಕರೀಷ್ಮಾ’..ಅಂತಾರಲ್ಲಾ ಇದೇ ಇರಬೇಕು ನೋಡಿ. ಸಂಪೂರ್ಣವಾಗಿ ಮಂಜುಗಡ್ಡೆಗಳಿಂದ ಆವೃತ್ತವಾಗಿರುವ ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ದೊರೆಯುತ್ತವೆ.

ಅದರಂತೆ ನಾಸಾದ ಸಂಶೋಧನಾ ವಿಮಾನವೊಂದಕ್ಕೆ ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಆಯತಾಕಾರದ ಮಂಜುಗಡ್ಡೆಯೊಂದು ಸೆರೆ ಸಿಕ್ಕಿದೆ. ಸಮುದ್ರದಲ್ಲಿ ಏಕಾಂಗಿಯಾಗಿ ತೇಲುತ್ತಿದ್ದ ಈ ಆಯತಾಕಾರದ ಮಂಜಗಡ್ಡೆಯನ್ನು ನಾಸಾ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.

ಲಾರ್ಸೆನ್ C ಎಂಬ ಬೃಹತ್ ಮಂಜುಗಡ್ಡೆಯಿಂದ ಒಡೆದು ಬೇರ್ಪಟ್ಟಿರುವ ಈ ಮಂಜುಗಡ್ಡೆಯ ಭಾಗ ನಿರ್ದಿಷ್ಟವಾಗಿ ಆಯತಾಕಾರದಲ್ಲಿರುವುದು ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಅಂಟಾರ್ಟಿಕ್ ಧ್ರುವ ಪ್ರದೇಶದಲ್ಲಿ ಹಲವು ಬೃಹತ್ ಮಂಜುಗಡ್ಡೆಗಳಿದ್ದು, ಅದರಲ್ಲಿ ಲಾರ್ಸೆನ್ A 1995 ರಲ್ಲಿ, ಲಾರ್ಸೆನ್ B 2002 ರಲ್ಲಿ ಒಡೆದು ಹೋಳಾಗಿವೆ. ಇದೀಗ ಲಾರ್ಸೆನ್ C ಕೂಡ ಹೋಳಾಗುವ ಹಂತ ತಲುಪಿದ್ದು, ಅದರ ಒಂದು ಭಾಗವೇ ಈ ಆಯತಾಕಾರದ ಮಂಜುಗಡ್ಡೆ ಎನ್ನಲಾಗಿದೆ.

ಲಾರ್ಸೆನ್  ಸಿ ಮಂಜುಗಡ್ಡೆ ಬರೋಬ್ಬರಿ 2,780  ಚ.ಕಿ.ಮೀ ವಿಸ್ತಾರವಾಗಿದ್ದು, ಮೇರಿಲ್ಯಾಂಡ್ ಗಿಂತ ದೊಡ್ಡದಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಈ ಮಂಜುಗಡ್ಡೆಯೂ ಕರಗುತ್ತಿದ್ದು, ಚೂರುಗಳ ರೂಪದಲ್ಲಿ ಒಡೆದು ಹೋಳಾಗುತ್ತಿದೆ ಎನ್ನಲಾಗಿದೆ. 

Follow Us:
Download App:
  • android
  • ios