‘ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಈ ಹಿಂದೆ 15 ಬಾರಿ ಹೇಳಿದ ನಂತರ, ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ.

ನ್ಯೂಯಾರ್ಕ್ : ‘ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಈ ಹಿಂದೆ 15 ಬಾರಿ ಹೇಳಿದ ನಂತರ, ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ.

ನ್ಯಾಟೋ ಶೃಂಗಕ್ಕೆ ಆಗಮಿಸಿದ್ದ ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿ. ‘ಎಲ್ಲಕ್ಕಿಂತ ಮುಖ್ಯವಾದದ್ದು ಭಾರತ ಮತ್ತು ಪಾಕಿಸ್ತಾನ. ನಾನು ವ್ಯಾಪಾರದ ಕುರಿತು ಸರಣಿ ಫೋನ್ ಕರೆ ಮಾಡಿ ಎರಡೂ ದೇಶಗಳ ಕದನ ಕೊನೆಗೊಳಿಸಿದೆ. ನೀವು ಪರಸ್ಪರ ಯುದ್ಧ ಮುಂದುವರಿಸಿದರೆ ನಾನು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲ್ಲ ಎಂದೆ’ ಎಂದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ‘ಒಬ್ಬ ಉತ್ತಮ ಸ್ನೇಹಿತ’ ಎಂದು ಹೊಗಳಿದ ಡೊನಾಲ್ಡ್ ಟ್ರಂಪ್, ಅವರನ್ನು ‘ಒಬ್ಬ ಮಹಾನ್ ಸಂಭಾವಿತ ವ್ಯಕ್ತಿ’ ಮತ್ತು ‘ಒಬ್ಬ ಮಹಾನ್ ವ್ಯಕ್ತಿ’ ಎಂದು ಕರೆದರು.

ಮಧ್ಯಪ್ರಾಚ್ಯ ದೇಶಗಳಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳ ಸುತ್ತ ತೆರವಿಗೆ ಅಮೆರಿಕ ಮುಂದಾಗಿದೆ.

ವಾಷಿಂಗ್ಟನ್‌: ಇರಾನ್‌ನ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಕಡೆಯಿಂದ ಭಾರೀ ಪ್ರತಿದಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ದೇಶಗಳಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳ ಸುತ್ತ ತೆರವಿಗೆ ಅಮೆರಿಕ ಮುಂದಾಗಿದೆ.

ಈಗಾಗಲೇ ಸಿರಿಯಾ, ಕತಾರ್‌, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ಮಾಡಿದೆ. ಇದರಿಂದ ಜಾಗೃತವಾಗಿರುವ ದೊಡ್ಡಣ್ಣ ಮುನ್ನೆಚ್ಚರಿಕಾ ಕ್ರಮವಾಗಿ, ಅನ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಬಹ್ರೈನ್‌, ಕುವೈತ್‌, ಯುಎಇ, ಸೌದಿ ಅರೇಬಿಯಾ, ಜೋರ್ಡನ್‌, ಈಜಿಪ್ಟ್‌ನಲ್ಲಿರುವ ತನ್ನೆಲ್ಲಾ ಸೇನಾ ನೆಲಗಳ ಸುತ್ತಲಿನ 1. ಕಿ.ಮೀ. ಪ್ರದೇಶವನ್ನು ತುರ್ತಾಗಿ ತೆರವು ಮಾಡುವಂತೆ ಸೂಚಿಸಿದೆ. ಜತೆಗೆ, ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಗಳನ್ನೂ ಸಕ್ರಿಯಗೊಳಿಸಿದೆ.

ಒಟ್ಟು 51 ದೇಶಗಳಲ್ಲಿ ಅಮೆರಿಕದ 128 ಸೇನಾ ನೆಲೆಗಳಿವೆ. ಕುವೈತ್‌, ಇರಾಕ್‌ನಲ್ಲಿ 3, ಯುಎಇ, ಈಜಿಪ್ಟ್‌ ಮತ್ತು ಸೌದಿ ಅರೇಬಿಯಾದಲ್ಲಿ 2, ಕತಾರ್‌, ಸಿರಿಯಾ, ಜೋರ್ಡನ್‌ ಮತ್ತು ಬಹ್ರೈನ್‌ನಲ್ಲಿ 1 ಅಮೆರಿಕದ ನೆಲೆಗಳಿವೆ.