Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಪತಿಯಿಂದ ಪತ್ನಿ ಬಾತ್ ರೂಮ್‌ನಲ್ಲಿ ಲಾಕ್...!

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಜನರು ಆತಂಕಗೊಂಡಿದ್ದಾರೆ. ಎಷ್ಟರ ಮಟ್ಟಿಗೆ ಜನ ಭಯ ಪಟ್ಟಿದ್ದಾರೆ ಅಂದ್ರೆ ಚೀನಾದಿಂದ ಪತ್ನಿಗೆ ಕೊರೋನಾ ವೈರಸ್ ತಗುಲಿರಬಹುದೆಂದು ಆಕೆಯನ್ನ ಪತಿ ಬಾತ್ ರೂಮ್ ನಲ್ಲಿ ಲಾಕ್ ಮಾಡಿ ಕೂಡಿಹಾಕಿದ್ದಾನೆ. 

Husband locks his wife in bathroom over she had corona virus at Lithuanian
Author
Bengaluru, First Published Mar 3, 2020, 8:56 PM IST

ವಿಲ್ನಿಯಸ್, (ಮಾ.03): ಎಂಥಾ ಕಾಲ ಬಂತು ನೋಡಿ.. ಮನೆಯಿಂದ ಹೊರ ಬರಂಗಿಲ್ಲ. ಕೆಲಸಕ್ಕೆ ಹೋಗೋವಂತಿಲ್ಲ. ಅಷ್ಟೇ ಅಲ್ಲ ಬೇರೆಯವರೊಂದಿಗೆ ಮಾತನಾಡುವುದಕ್ಕೂ ಭಯ ಆಗುತ್ತಿದೆ. ಅದಕ್ಕೆ ಕಾರಣ ಡೆಡ್ಲಿ ಕೊರೋನಾ.

ಹೌದು...ಚೀನಾದಲ್ಲಿ ಹುಟ್ಟಿಕೊಂಡಿರುವ ಈ ಮಾಹಾಮಾರಿ ಕೊರೋನಾ ವೈರಸ್, ಇಡೀ ಪ್ರಪಂಚವನ್ನ ಬೆಚ್ಚಿಬೀಳುವಂತೆ ಮಾಡಿದೆ. ಈಗಾಗಲೇ ಚೀನಾದಲ್ಲಿ ಕೊರೊನಾ ವೈರಸ್ 3 ಸಾವಿರಕ್ಕೂ ಹೆಚ್ಚು ಮಂದಿಯನ್ನ ಬಲಿ ಪಡೆದಿದೆ. 

ಬೆಂಗ್ಳೂರಲ್ಲಿ ಕೊರೋನಾ ವೈರಸ್: ರೋಗ ಬರದಂತೆ ಹಿಂಗ್ ಮಾಡಿದ್ರೆ ಬೆಸ್ಟ್

ಇದೇ ಭಯದಿಂದ ಪತಿಯೊಬ್ಬ ಚೀನಾದಿಂದ ಬಂದ ತನ್ನ ಪತ್ನಿಯನ್ನ ಬಾತ್‌ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದ ಘಟನೆ ಯೂರೋಪ್‍ನ ಲಿಥುವೇನಿಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಪತ್ನಿ ಚೀನಾದ ಮಹಿಳೆಯೊಬ್ಬರನ್ನು ಭೇಟಿಯಾಗಿ ಇಟಲಿಯಿಂದ ಆಗಮಿಸಿದ್ದಳು. ಹೀಗಾಗಿ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂಬ ಅನುಮಾನದಿಂದ ಆಕೆಯನ್ನು ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದಾನೆ.

ಪತ್ನಿ ಎಷ್ಟು ಚೀರಾಡಿದ್ರೂ ಪತಿ ಮಾತ್ರ ಲಾಕ್ ತೆಗೆದಿಲ್ಲ. ಕೊನೆಗೆ ಆಕೆ ಬಾತ್ ರೂಮಿನಿಂದಲೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ಕೊಟ್ಟಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಕೂಡಲೇ ಹೇಳಿದ್ದ ಅಡ್ರೇಸ್ ಗೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.

ಬೆಂಗಳೂರು: ಟೆಕ್ಕಿಗೆ ಕೊರೊನಾ ವೈರಸ್, ಕಂಪನಿಗೆ ರಜೆ ಘೋಷಣೆ

ಕೊರೊನಾ ವೈರಸ್ ಸೋಂಕನ್ನು ಹೇಗೆ ತಪ್ಪಿಸಬೇಕು ಎಂಬ ಬಗ್ಗೆ ವೈದ್ಯರೊಂದಿಗೆ ಫೋನ್‍ನಲ್ಲಿಯೇ ಸಲಹೆ ಪಡೆದುಕೊಂಡು ನಂತರ ಚೀನಾದಿಂದ ಬಂದ ಪತ್ನಿಯನ್ನ ಬಾತ್‍ರೂಮಿನಲ್ಲಿ ಕೂಡಿಹಾಕಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಮಹಿಳೆ ದೂರು ನೀಡಿಲ್ಲದಿರುವುದರಿಂದ ಆಕೆಯ ಪತಿಯನ್ನ ಬಂಧಿಸಿಲ್ಲ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇನ್ನು ಗಂಡ ಅನುಮಾನಗೊಂಡಿರುವ ಹಿನ್ನೆಲೆಯಲ್ಲಿ ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೋನಾ ವೈರಸ್ ಇಲ್ಲ ಎಂಬುದು ತಿಳಿದುಬಂದಿದೆ. 

ಒಟ್ಟಿನಲ್ಲಿ ಕೊರೋನಾ ಮಾಹಾಮಾರಿ ಜನರಲ್ಲಿ ಎಷ್ಟರ ಮಟ್ಟಿಗೆ ಭಯ ಹುಟ್ಟಿಸಿದೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. 

Follow Us:
Download App:
  • android
  • ios