ಬೆಂಗಳೂರು, (ಮಾ.03): ಬೆಂಗಳೂರಿನ ಕಂಪನಿಯೊದರಲ್ಲಿ ಉದ್ಯೋಗದಲ್ಲಿರುವ ಟೆಕ್ಕಿ ಕೊರೋನಾ ವೈರಸ್‍ಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಆ ಟೆಕ್ಕಿ ಇದ್ದ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಕೊರೋನಾ ಸೋಂಕಿತ ಟೆಕ್ಕಿ ದುಬೈನಿಂದ ಆಗಮಿಸಿ  ಮಾರತಳ್ಳಿಯ  ಪಿಜಿಯೊಂದರಲ್ಲಿ ನೆಲೆಸಿದ್ದ. ಇದೀಗ ತೆಲಂಗಾಣ ಮೂಲದ ಟೆಕ್ಕಿ ಉಳಿದುಕೊಂಡಿದ್ದ ಪಿಜಿಯ ರೂಮ್‌ಮೇಟ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಕೊರೋನಾ ಸೋಂಕಿತ ಟೆಕ್ಕಿ ಇದ್ದ ಪಿಜಿ ರೂಂ ಮೇಟ್ ಗೂ ಅನಾರೋಗ್ಯ

ಆತ ನೆಲೆಸಿದ್ದ ರೂಮ್ ನಲ್ಲಿಯೇ ಇದ್ದ ವ್ಯಕ್ತಿಯ ರಕ್ತದ ಮಾದರಿ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಆತನಿಗೆ ಚಿಕಿತ್ಸೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಇಂಟೆಲ್ ಕಂಪನಿಗೆ ರಜೆ ಘೋಷಣೆ
ಹೌದು....ಕೊರೋನಾ ಶಂಕಿತ ಟೆಕ್ಕಿ ಬೆಂಗಳೂರಿನ ಇಂಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂಟೆಲ್ ಕಂಪನಿ ತನ್ನ ಉದ್ಯೋಗಿಗಳಿಗೆ ರಜೆ ನೀಡಿದೆ. ಈ  ಬಗ್ಗೆ ಇಂಟೆಲ್, ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದೆ.

2 ದಿನ ಬೆಂಗ್ಳೂರಲ್ಲೇ ಇದ್ದ ಕೊರೋನಾ ಸೋಂಕಿತ ವ್ಯಕ್ತಿ..!

ಅಷ್ಟೇ ಅಲ್ಲದೇ ಕೊರೋನಾ ವೈರಸ್ ಪೀಡಿತ ಚೀನಾ ಮತ್ತು ಇತರ ದೇಶಗಳಿಗೆ ವ್ಯವಹಾರ ಸಂಬಂಧಿತ ಪ್ರಯಾಣವನ್ನು ಈ ಕೂಡಲೇ ಮೊಟಕುಗೊಳಿಸುಂತೆ ಇಂಟೆಲ್ ಕಂಪನಿ ತಮ್ಮ ನೌಕರರಿಗೆ ತಿಳಿಸಿದೆ.

ಕೊರೋನಾ ಶಂಕಿತ ಟೆಕ್ಕಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದು, ಟೆಕ್ಕಿ ಬಂದ ಕ್ಯಾಬ್‌ಗೆ ತೀವ್ರ ಶೋಧ ನಡೆದಿದೆ. ಅಷ್ಟೇ ಅಲ್ಲದೇ ಎರಡು ದಿನಗಳ ಕಾಲ ಟೆಕ್ಕಿ ಸಂಪರ್ಕದಲ್ಲಿದ್ದ ಎಲ್ಲಾ ಜನರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲರ ಮೇಲೆಯೂ 14 ದಿನಗಳ ಕಾಲ ನಿಗಾ ಇಡಲಾಗಿದೆ.