ಮದುವೆಯಾಗಿ ಪೋಷಕರನ್ನು ನೋಡಲು ತವರಿಗೆ ತೆರಳಿದ ಪತ್ನಿ ಸಾಮಾಜಿಕ ಜಾಲತಾಣ ನೋಡಿ ಬೆಚ್ಚಿ ಬಿದ್ದ ಗಂಡ 19 ಮಂದಿಗೆ ವಂಚಿಸಿದ ಚಾಲಾಕಿ ಪತ್ನಿಯ ರೋಚಕ ಸ್ಟೋರಿ ಇಲ್ಲಿದೆ

ಚೀನಾ(ಜೂ.01): ಮದುವೆ ಅನ್ನೋ ಹೆಸರಿನಲ್ಲಿ ಅದೆಷ್ಟೋ ಮೋಸ, ವಂಚನೆಗಳು ನಡೆಯುತ್ತಿದೆ. ಅದೆಷ್ಟೇ ಎಚ್ಚರಿಕೆಯಿಂದ ಇದ್ದರೂ ಪ್ರಕರಣಗಳು ನಡೆಯುತ್ತಲೇ ಇದೆ. ಒಂದಲ್ಲ, ಎರಡಲ್ಲ 19 ಮಂದಿ ಮದುವೆಯಾಗಿ ಬರೋಬ್ಬರಿ 2.28 ಕೋಟಿ ರೂಪಾಯಿ ವಂಚಿಸಿದ ಘಟನೆ ನಡೆದಿದೆ. 

ಭರ್ಜರಿ' ವರದಕ್ಷಿಣೆ ತೆಗೆದುಕೊಂಡ ಮದುವೆ ಮುಗಿದಿದ್ದು 17 ನಿಮಿಷದಲ್ಲಿ!...

ಈ ಘಟನೆ ನಡೆದಿರುವುದು ಚೀನಾದಲ್ಲಿ. ಮಂಗೋಲಿಯಾ ಭಾಗದ ಬಯನ್ನರ್ ಪ್ರದೇಶದ 35 ವರ್ಷದ ವ್ಯಕ್ತಿ ಬ್ರೋಕರ್ ಮೂಲಕ ಗಂಸೂ ವಲಯದ ಹುಡುಗಿಯೊಬ್ಬಳನ್ನು ಸೂಚಿಸಿದ್ದಾರೆ. 16.9 ಲಕ್ಷ ರೂಪಾಯಿ ವಧುದಕ್ಷಿಣೆ ನೀಡಿ ಬಯನ್ನರ್ ಆ ಹುಡುಗಿಯ ಮದುವೆಯಾಗಿದ್ದಾನೆ

2021ರ ಜನವರಿಯಲ್ಲಿ ಮದುವೆ ನಡೆದಿದೆ. ಮಾರ್ಚ್ ತಿಂಗಳ ವೇಳೆ ಪೋಷಕರ ನೋಡಬೇಕು ಎಂದು ತವರಿಗೆ ಹೋಗಿದ್ದಾಳೆ. ಇತ್ತ ತಿಂಗಳಾದರೂ ಒಂದೂಂದು ಸಬೂಬು ನೀಡುತ್ತಾ ಪತ್ನಿ ಬರಲೇ ಇಲ್ಲ. ಇತ್ತ ಪತಿ ಸಾಮಾಜಿಕ ಜಾಲಾತಾಣ ನೋಡುತ್ತಿರುವ ವೇಳೆ ತನ್ನದೇ ಪತ್ನಿಯ ಹೋಲುತ್ತಿರುವ ಮಹಿಳೆಯ ಮದುವೆ ವಿಡಿಯೋ ನೋಡಿದ್ದಾರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಕೂಲಂಕುಷವಾಗಿ ನೋಡಿದಾಗ ಆ ವಿಡಿಯೋದಲ್ಲಿರುವುದು ತನ್ನ ಪತ್ನಿ ಎಂದು ಖಚಿತವಾಗಿದೆ. ಆದರೆ ಬೇರೋಬ್ಬ ವ್ಯಕ್ತಿ ಜೊತೆ ಮದುವೆ ವಿಡಿಯೋ ಪತಿಯ ನಿದ್ದೆಗೆಡಿಸಿದೆ. ಹೀಗಿ ಸಾಮಾಜಿಕ ಜಾಲತಾಣ ಪರಿಶೀಲಿಸಿದಾಗ ಈ ರೀತಿಯ ಕೆಲ ವಿಡಿಯೋಗಳು ಪತ್ತೆಯಾಗಿದೆ.

ಈ ಕುರಿತು ಪತ್ನಿಗೆ ಫೋನ್ ಮೂಲಕ ವಿಚಾರಿಸಲು ಯತ್ನಿಸಿದರೆ ಫೋನ್ ಕೂಡ ಸ್ವಿಚ್ ಆಫ್. ಒಂದೆರೆಡು ದಿನ ಕಾದ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಈ ವಂಚಕಿಯ ಪುರಾಣ ಬಯಲಾಗಿದೆ. 

ಮದುವೆಯಾಗಲು ಹುಡುಗಿ ಸಿಗದ ವ್ಯಕ್ತಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಮಹಿಳೆ ಹಾಗೂ ಬ್ರೋಕರ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಈ ರೀತಿ 19 ಮಂದಿಯನ್ನು ವಂಚಕಿ ಮದುವೆಯಾಗಿದ್ದಾರೆ. ಇಷ್ಟೇ ಅಲ್ಲ 2.28 ಕೋಟಿ ರೂಪಾಯಿ ವಂಚಿಸಿರುವುದು ಬಯಲಾಗಿದೆ. 2019ರಿಂದ ಈ ರೀತಿ ಮೋಸ ಮಾಡುತ್ತಿರುವುದು ತನಿಖೆಯಿಂದ ಬಯಲಾಗಿದೆ.