ಮಧುರೈ(ಮೇ.24): ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳೆಗೆ ತೂರು ಅನ್ನೋ ಗಾದೆ ಮಾತ್ತು ಎಲ್ಲರಿಗೂ ಗೊತ್ತೆ ಇದೆ. ಸದ್ಯ ಈ ಮಾತು ಬಹಳ ಸೂಕ್ತ ಎನಿಸುತ್ತಿದೆ. ಕಾರಣ ಕೊರೋನಾ ನಿಯಂತ್ರಣಕ್ಕೆ ಕಠಿಣ ನಿಯಮ, ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ನಿಯಮದ ನಡುವೆ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಕಾರಣ ಈ ಕಠಿಣ ನಿಯಮಗಳು ಭೂಮಿ ಮೇಲೆ ತಾನೆ? ಆಗಸದಲ್ಲಿ ನಿಯಮಗಳನ್ನು  ಕೇಳುವವರ‍್ಯಾರು? ಎಂದು ನವಜೋಡಿ 2 ಗಂಟೆ ಪ್ರಯಾಣದ ಸಂಪೂರ್ಣ ವಿಮಾನ ಬುಕ್ ಮಾಡಿ ಆಗಸದಲ್ಲಿ ಮದುವೆಯಾಗಿದೆ. ಆದರೆ ಕೆಳಗಿಳಿದಾಗ ತನಿಖೆ ಎದುರಿಸಬೇಕಾಗಿ ಬಂದಿದೆ.

ಅಕ್ಕ-ತಂಗಿಯರ ಮದುವೆಯಾಗಿದ್ದ ವರನಿಗೆ ಇದೀಗ ಪೊಲೀಸ್ ಆತಿಥ್ಯ!.

ಲಾಕ್‌ಡೌನ್ ಕಾರಣ ಮದುವೆಗೆ ಗರಿಷ್ಠ 20 ಮಂದಿ ಮಾತ್ರ ಅವಕಾಶ. ಸಭೆ ಸಮಾರಂಭ, ಪಾರ್ಟಿ ಎಲ್ಲವೂ ದೂರದ ಮಾತು. ಇದರ ನಡುವೆ ಮದುವೆಯಾಗಲು ಮಧುರೈ ನವಜೋಡಿ ಹೊಸ ಪ್ಲಾನ್ ಮಾಡಿತ್ತು. ಮಧುರೈನಿಂದ ಬೆಂಗಳೂರಿಗೆ ಸ್ಪೈಸ್‌ಜೆಟ್ ವಿಮಾನ ಬುಕ್ ಮಾಡಿದೆ. ಕೇವಲ ಇಬರಿಬ್ಬರಿಗಲ್ಲ. ಸಂಪೂರ್ಣ ವಿಮಾನವನ್ನೇ ಬುಕ್ ಮಾಡಿದೆ.

 

'ಭರ್ಜರಿ' ವರದಕ್ಷಿಣೆ ತೆಗೆದುಕೊಂಡ ಮದುವೆ ಮುಗಿದಿದ್ದು 17 ನಿಮಿಷದಲ್ಲಿ!.

ಕುಟುಬಸ್ಥರು, ಆಪ್ತರ ಬಳಗ ನೇರವಾಗಿ ಮಧುರೈನಿಂದ ವಿಮಾನ ಹತ್ತಿದ್ದಾರೆ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಸ್ಪೈಸ್‌ಜೆಟ್ ವಿಮಾನ ಸಣ್ಣ ಕಲ್ಯಾಣ ಮಂಟಪವಾಗಿ ಬದಲಾಗಿದೆ. ಅಲ್ಲೀವರೆಗೂ ವಿಮಾನದ ಸಿಬ್ಬಂಧಿಗಳಿಗೂ ಇದೊಂದು ಪ್ಲಾನ್ ಮದುವೆ ಅನ್ನೋದೇ ಗೊತ್ತಿರಲಿಲ್ಲ. 2 ಗಂಟೆ ಪ್ರಯಾಣದಲ್ಲಿ ಮದುವೆ ಕಾರ್ಯಗಳು ಭರ್ಜರಿಯಾಗಿ ನಡೆದಿದೆ.

 

ವಿಮಾನದಲ್ಲಿ ಮದುವೆಯಾಗಿರುವುದು ತಪ್ಪಲ್ಲ. ಆದರೆ ಕೊರೋನಾ ನಿಯಮ ಪಾಲಿಸಿಲ್ಲ. ತಾಳಿ ಕಟ್ಟುವ ವೇಳೆ ವಧು-ವರರು ಸೇರಿದಂತೆ ಯಾರೂ ಕೂಡ ಮಾಸ್ಕ್ ಧರಿಸಿಲ್ಲ. ಈ ಮದುವೆ ಸಾಮಾಜಿಕ ಜಾಲತಾಣದಲ್ಲೂ ಭರ್ಜರಿ ಸದ್ದು ಮಾಡಿದೆ. ಆಗಸದಲ್ಲಿ ಮದುವೆಯಾಗಿ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಕರಣದ ತನಿಖೆಗೆ ಆದೇಶ ಹೊರಬಂದಿದೆ.

ಅವನು ಹೆಂಡತಿಯಿಂದ ತಾಳಿ ಕಟ್ಟಿಸಿಕೊಂಡ! ಆಮೇಲೇನಾಯ್ತು?

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ವಿಮಾನದಲ್ಲಿನ ಮದುವೆ ತನಿಖೆ ಆರಂಭಿಸಿದೆ. ಸ್ಪೈಸ್‌ಜೆಟ್ ವಿಮಾನ ಪೈಲೆಟ್, ಸಿಬ್ಬಂಧಿಗಳ ವಿಚಾರಣೆ ನಡೆಸಲಾಗಿದೆ. ಈ ವೇಳೆ ಮಾಸ್ಕ್ ಧರಿಸುವಂತೆ ಪದೇ ಪದೇ ವಿನಂತಿಸಿದರೂ ಯಾರೂ ಕೂಡ ನಿಯಮ ಪಾಲಿಸಿಲ್ಲ ಎಂದು ಸಿಬ್ಬಂಧಿಗಳು ಹೇಳಿದ್ದಾರೆ.