ಹರ್ಡಲ್ಸ್‌ ಜಂಪ್‌ ಮಾಡುವ ಶ್ವಾನ ಕ್ರಿಸ್‌ಮಸ್‌ ಪಾರ್ಟಿಗೆ ಮತ್ತಷ್ಟು ರಂಗು ತಂದ ಸಾಕು ನಾಯಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮೆಕ್ಸಿಕೋ(ಡಿ.2): ನಾಯಿ ಮನುಷ್ಯರ ಬೆಸ್ಟ್‌... ಇನ್ನು ಇವುಗಳೊಂದಿಗೆ ನೀವು ಆಟವಾಡಲು ಬಯಸಿದರೆ ನಿಮ್ಮ ಖುಷಿಗೆ ಅಂತ್ಯವೇ ಇಲ್ಲವಾಗುವುದು. ಅಷ್ಟೊಂದು ಖುಷಿಯಾಗಿ ನಿಮಗೆ ಶ್ವಾನಗಳು ಮನೋರಂಜನೆ ನೀಡುವವು. ಹಾಗೆಯೇ ಇಲ್ಲಿಯೂ ಶ್ವಾನವೊಂದು ಕ್ರಿಸ್‌ಮಸ್‌ ಪಾರ್ಟಿಗೆ ಸೇರಿದ್ದ ಜನರಿಗೆ ಬಿಟ್ಟಿ ಮನೋರಂಜನೆ ನೀಡಿದೆ. ಹರ್ಡಲ್ಸ್‌ ಜಂಪ್‌ ರೀತಿ ಕುಳಿತವರ ತಲೆಯ ಮೇಲಿಂದ ಮತ್ತೊಂದು ಬದಿಗೆ ಹಾರುವ ನಾಯಿಯ ವಿಡಿಯೋವನ್ನು ನೋಡಿದರೆ ನಿಮ್ಮ ಮುಖದಲ್ಲಿ ನಗು ಬಾರದೇ ಇರದು. 

ಕುಟುಂಬ ಹಾಗೂ ನೆಂಟರು ಬಂಧುಗಳೊಂದಿಗೆ ಹಬ್ಬವನ್ನು ಆಚರಣೆ ಮಾಡುವುದರಲ್ಲಿರುವ ಖುಷಿ ಮತ್ಯಾವುದರಲ್ಲೂ ಸಿಗದು. ಆದರೆ ಮನೆಗೆ ಜನರು ಬಂದು ಸೇರಿದಾಗ ನಾಯಿಗಳ ವರ್ತನೆ ಸ್ವಲ್ಪ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವುಗಳು ಕೋಪಗೊಳ್ಳುತ್ತವೆ. ಆದರೆ ಇಲ್ಲೊಂದು ಶ್ವಾನ ಹೀಗೆ ಒಟ್ಟು ಸೇರಿ ಎಂಜಾಯ್‌ ಮಾಡುತ್ತಿದ್ದ ಕುಟುಂಬಕ್ಕೆ ಮತ್ತಷ್ಟು ಮನೋರಂಜನೆ ನೀಡಿ ಕ್ರಿಸ್‌ಮಸ್‌ ಪಾರ್ಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿದೆ. 

View post on Instagram

ಈಗ ವೈರಲ್‌ ಆಗಿರುವ ಟಿಕ್‌ಟಾಕ್‌ (TikTok) ವಿಡಿಯೋವೊಂದರಲ್ಲಿ ಕ್ರಿಸ್‌ಮಸ್‌ ಟ್ರೀ ಸಮೀಪ ಜನ ಸೇರಿದ್ದು, ಅಲ್ಲಿ ತಮ್ಮ ಕಾಲುಗಳನ್ನೇ ಒಬ್ಬರು ಮೇಲೆ ಮತ್ತೊಬ್ಬರು ಕೆಳಗೆ ಇರಿಸಿ ಹರ್ಡಲ್‌ ಸೃಷ್ಟಿ ಮಾಡಿದ್ದಾರೆ. ಈ ವೇಳೆ ಆ ಕುಟುಂಬದ ನಾಯಿ ನಾಲಾ (Nala)ತುಂಬಾ ಉತ್ಸಾಹದಿಂದ ಎತ್ತರಕ್ಕೆ ಜಿಗಿದು ಅವರೆಲ್ಲರ ಕಾಲುಗಳ ಮೇಲೆ ಸ್ವಲ್ಪವೂ ಸ್ಪರ್ಶಿಸದಂತೆ ಅತ್ತಿಂದಿತ್ತ ಜಿಗಿಯುತ್ತದೆ. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಮ್ಮೆ ಜಂಪ್‌ ಶುರು ಮಾಡಿದ ಮೇಲೆ ನಾಯಿ ಮತ್ತೆ ಜಿಗಿಯುವುದನ್ನು ನಿಲ್ಲಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಇದನ್ನು ಅಲ್ಲಿ ಸೇರಿದವರು ಬಿದ್ದು ಬಿದ್ದು ನಗುತ್ತಿದ್ದಾರೆ. ಹರ್ಡಲ್‌ನ ಎತ್ತರದ ಬಗ್ಗೆ ತಲೆ ಕೆಡಿಸಿಕೊಳ್ಳದ ಶ್ವಾನ ನಾಲಾ ಹೀಗೆ ನಗುತ್ತಾ ಅಡ್ಡ ಬಿದ್ದವರ ಮೇಲೆಯೂ ಅತ್ತಿಂದಿತ್ತ ಹಾರಲು ಶುರು ಮಾಡುತ್ತದೆ. 

ನೀ ಅನಾಥನಲ್ಲ ನಿನಗೆ ನಾನು ನನಗೆ ನೀನು.... ನಿರ್ಗತಿಕನಿಗೆ ಜೊತೆಯಾದ ಶ್ವಾನ

ಈ ವಿಡಿಯೋವನ್ನು ಮೆಕ್ಸಿಕೋದ (Mexico) ಕರ್ಲೊಸ್‌ ಅಲನ್ ಬೆಲಟ್ರನ್ ( Carlos Alan Beltran) ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, 6.5 ಮಿಲಿಯನ್‌ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಶೀಘ್ರದಲ್ಲೇ ವೈರಲ್‌ ಆಗಿದೆ. ಶ್ವಾನಗಳ ಮುದ್ದಾದ ವಿಡಿಯೋಗಳನ್ನು ನೀವು ಬೇಕಾದಷ್ಟು ನೋಡಿರುತ್ತಿರಿ. ಇತ್ತೀಚೆಗೆ ನಾಯಿಯೊಂದು ತನ್ನ ನೆರಳಿನೊಂದಿಗೆ ಆಟವಾಡುವ ವಿಡಿಯೋವೊಂದು ವೈರಲ್‌ ಆಗಿತ್ತು. ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದರು.

ತನ್ನ ನೆರಳಿನೊಂದಿಗೆ ಆಡುವ ಶ್ವಾನ... ನೆಟ್ಟಿಗರ ಗಮನ ಸೆಳೆದ ಕ್ಯೂಟ್ ವಿಡಿಯೋ

ಇತ್ತೀಚೆಗೆ ನವ ಜೋಡಿಯೊಂದು ಮದುವೆಯ ಸಂಭ್ರಮದಲ್ಲಿ ಡಾನ್ಸ್‌ ಮಾಡ್ತಿರಬೇಕಾದರೆ ಅವರ ನಾಯಿಯೊಂದು ಜೋಡಿ ಮಧ್ಯೆ ನುಗ್ಗಿ ಬಂದು ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿತ್ತು. ವಿದೇಶಿ ಜೋಡಿಯೊಂದು ತಮ್ಮ ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದರು. ಈ ವೇಳೆ ಎಲ್ಲಿತ್ತು ಇವರ ಪ್ರೀತಿಯ ಸಾಕು ನಾಯಿ, ಇವರತ್ತ ಓಡಿ ಬಂದು ಡಾನ್ಸ್‌ ಮಾಡುತ್ತಿದ್ದ ನವ ವಧು ವರನ ಮಧ್ಯೆ ನಿಂತು ಅವರ ಡಾನ್ಸ್‌ಗೆ ಅಡ್ಡಿ ಪಡಿಸಿದೆ. ಈ ಮುದ್ದಾದ ವಿಡಿಯೋವನ್ನು 71,000 ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದಾರೆ.