ತನ್ನ ನೆರಳಿನೊಂದಿಗೆ ಆಡುವ ಶ್ವಾನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

(ಡಿ.30): ಶ್ವಾನಗಳ ಮುದ್ದಾದ ವಿಡಿಯೋಗಳನ್ನು ನೀವು ಬೇಕಾದಷ್ಟು ನೋಡಿರುತ್ತಿರಿ. ಇದು ಕೂಡ ಅಂತಹದೇ ಒಂದು ವಿಡಿಯೋ ಇದರಲ್ಲಿ ನಾಯಿಯೊಂದು ತನ್ನ ನೆರಳಿನೊಂದಿಗೆ ಆಟವಾಡುವ ಮುದ್ದಾದ ದೃಶ್ಯವಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತನ್ನ ನೆರಳಿನೊಂದಿಗೆ ನಾಯಿಯ ಆಟ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ಕೊಡಲಾಗಿದೆ. Buitengebieden ಎಂಬ ಟ್ವಿಟ್ಟರ್‌ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದ್ದು, ನೆಟ್ಟಿಗರು ಕ್ಯೂಟ್, ಫನಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಮತ್ತು ನಂಬಲಾಗಿದೆ. ಕೆಲವೊಮ್ಮೆ ನಾಯಿ ಮಾಲೀಕರು ಅವುಗಳನ್ನು ಮುದ್ದಿಸುವ ಸಲುವಾಗಿ ವಿಪರೀತವಾದುದನ್ನು ಮಾಡುತ್ತಾರೆ. ಈ ಹಿಂದೆ ಆಸ್ಟ್ರೇಲಿಯನ್ ದಂಪತಿಗಳು (Australian couple) ಕ್ರಿಸ್ಮಸ್ ಸಮಯದಲ್ಲಿ ನ್ಯೂಜಿಲೆಂಡ್‌ನಿಂದ ತಮ್ಮ ನಾಯಿಯನ್ನು ಮನೆಗೆ ತರಿಸಲು ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆಯಲು ಹತ್ತಾರು ಸಾವಿರ ಡಾಲರ್‌ಗಳನ್ನು ಖರ್ಚು ಮಾಡಿದ್ದರು. ಈ ಇಡೀ ಪ್ರಕ್ರಿಯೆಗೆ ತುಂಬಾ ಹಣ ಖರ್ಚಾಗಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನಾಯಿಗೆ 'ಮಿಲಿಯನ್ ಡಾಲರ್ ಮಂಚ್ಕಿನ್ ಎಂದು ನಾಮಕರಣ ಮಾಡಿದ್ದರು.

Scroll to load tweet…

ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್‌, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ.

ಇತ್ತೀಚೆಗೆ ನವ ಜೋಡಿಯೊಂದು ಮದುವೆಯ ಸಂಭ್ರಮದಲ್ಲಿ ಡಾನ್ಸ್‌ ಮಾಡ್ತಿರಬೇಕಾದರೆ ಅವರ ನಾಯಿಯೊಂದು ಜೋಡಿ ಮಧ್ಯೆ ನುಗ್ಗಿ ಬಂದು ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿತ್ತು. ವಿದೇಶಿ ಜೋಡಿಯೊಂದು ತಮ್ಮ ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದರು. ಈ ವೇಳೆ ಎಲ್ಲಿತ್ತು ಇವರ ಪ್ರೀತಿಯ ಸಾಕು ನಾಯಿ, ಇವರತ್ತ ಓಡಿ ಬಂದು ಡಾನ್ಸ್‌ ಮಾಡುತ್ತಿದ್ದ ನವ ವಧು ವರನ ಮಧ್ಯೆ ನಿಂತು ಅವರ ಡಾನ್ಸ್‌ಗೆ ಅಡ್ಡಿ ಪಡಿಸಿದೆ. ಈ ಮುದ್ದಾದ ವಿಡಿಯೋವನ್ನು 71,000 ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದಾರೆ. 

Woman Bites: ನಾಯಿ ವಿಚಾರವಾಗಿ ಜಗಳ... ಶ್ವಾನದ ಮಾಲಕಿಗೆ ಕಚ್ಚಿದ್ದು ನಾಯಿ ಅಲ್ಲ ಮಹಿಳೆ...!

ಒಟ್ಟಿನಲ್ಲಿ ಅವರ ಖಾಸಗಿ ಕ್ಷಣಗಳಿಗೆ ಈ ನಾಯಿ ಅಡ್ಡಿಪಡಿಸಿತ್ತು. ವೇದಿಕೆಗೆ ನಾಯಿ ಬರುತ್ತಿದ್ದಂತೆ ಮದುವೆಗೆ ಬಂದಿದ್ದವರೆಲ್ಲಾ ಜೋರಾಗಿ ನಗಲು ಶುರು ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಪೋಸಲ್‌ ಹಾಗೂ ಮದುವೆ (Proposals & Weddings) ಎಂಬ ಖಾತೆಯಿಂದ ಶೇರ್‌ ಮಾಡಲಾಗಿದ್ದು, ನೋಡಲು ತುಂಬಾ ಮುದ್ದಾಗಿದೆ. 'ಎಕ್ಸ್‌ಕ್ಯೂಸ್‌ ಮಿ ನಾನು ಕೂಡ ಡಾನ್ಸ್‌' ಮಾಡುತ್ತೇನೆ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ನೀಡಲಾಗಿದೆ.

Animal Brutality : ಸಂಭೋಗ ನಡೆಸ್ತಿದ್ದ ಶ್ವಾನದ ಶಿಶ್ನ ಕತ್ತರಿಸಿ ವಿಕೃತಿ... ಇಂಥವರಿಗೆ ಯಾವ ಶಿಕ್ಷೆ!

ಇತ್ತೀಚೆಗೆ ಜರ್ಮನಿಯಲ್ಲಿ ನಾಯಿ ವಿಚಾರವಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಮಹಿಳೆಯೊಬ್ಬರು ನಾಯಿಯ ಮಾಲಕಿಗೆ ಕಚ್ಚಿದ ವಿಚಿತ್ರ ಘಟನೆ ನಡೆದಿತ್ತು. ಪೂರ್ವ ಜರ್ಮನಿ (eastern Germany) ಯಲ್ಲಿ ಸಾಕು ನಾಯಿಗೆ ಶಿಸ್ತು ಕಲಿಸುವ ಬಗ್ಗೆ ಇಬ್ಬರು ಮಹಿಳೆಯ ಮಧ್ಯೆ ಕಲಹ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಗೆ ಹೊಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ 51 ವರ್ಷದ ಮಹಿಳೆಯೊಬ್ಬಳು ಆಕೆಗೆ ಕಚ್ಚಿದ್ದಾಳೆ. ಮೊಣಕಾಲಿನ ಕೆಳಗೆ ಕಾಲಿನ ಹಿಂಭಾಗ ಮಹಿಳೆ ಕಚ್ಚಿದ್ದು ಪರಿಣಾಮ 27 ವರ್ಷದ ಮಹಿಳೆ ಇದರಿಂದ ತೀವ್ರ ನೋವಿಗೊಳಗಾಗಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.