ನಮ್ಮ ಆಹಾರ ತಿನ್ನುವ ಸಾಮರ್ಥ್ಯ ಎಷ್ಟಿರುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಆದರೂ ಅನೇಕರು ಮಿತಿಗಿಂತ ಹೆಚ್ಚು ಆಹಾರವನ್ನು ತಟ್ಟೆಗೆ ಹಾಕಿಸಿಕೊಂಡು ಬಳಿಕ ತಿನ್ನಲಾಗದೇ ಚೆಲ್ಲಿ ಬಿಡುತ್ತಾರೆ. ಆದರೆ ಇಲ್ಲೊಂದು ಕಡೆ ಪುಟ್ಟ ಮಕ್ಕಳು ತುತ್ತು ಅನ್ನಕ್ಕಾಗಿ ಎಷ್ಟೊಂದು ಕಷ್ಟಪಡ್ತಿದ್ದಾರೆ ನೋಡಿ.

ತುತ್ತು ಅನ್ನಕಾಗಿ ಮಕ್ಕಳ ಪರದಾಟ

ಒಂದೆಡೆ ಅತೀವೃಷ್ಟಿಯಾದರ ಇನ್ನೊಂದು ಕಡೆ ಅನಾವೃಷ್ಟಿ, ಒಬ್ಬರು ತಿಂದ ಅನ್ನವನ್ನು ಅರಗಿಸುವುದಕ್ಕೆ ಜಿಮ್‌ನಲ್ಲಿ ಬೆವರು ಸುರಿಸೋರು ಕೆಲವರಾದರೆ ತುತ್ತು ಅನ್ನಕ್ಕಾಗಿ ಪರದಾಡುವವರು ಇನ್ನು ಕೆಲವರು. ಹೌದು ನಮ್ಮಲ್ಲೇ ಅನೇಕರು ತಿನ್ನುವುದಕ್ಕಿಂತ ವೇಸ್ಟ್ ಮಾಡೋದೆ ಹೆಚ್ಚು ಮದುವೆ ಮಂಟಪಗಳು ಛತ್ರಗಳು ಅಥವಾ ಇನ್ನಾವುದೇ ಸಮಾರಂಭದಲ್ಲಿ ಜನರು ವೇಸ್ಟ್ ಮಾಡಿದ ಆಹಾರವೇ ರಾಶಿಗಟ್ಟಲೇ ತುಂಬಿರುತ್ತದೆ. ನಮ್ಮ ತಿನ್ನುವ ಸಾಮರ್ಥ್ಯ ಎಷ್ಟಿರುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಆದರೂ ಅನೇಕರು ಮಿತಿಗಿಂತ ಹೆಚ್ಚು ಆಹಾರವನ್ನು ತಟ್ಟೆಗೆ ಹಾಕಿಸಿಕೊಂಡು ಬಳಿಕ ತಿನ್ನಲಾಗದೇ ಚೆಲ್ಲಿ ಬಿಡುತ್ತಾರೆ. ಆದರೆ ಇಲ್ಲೊಂದು ಕಡೆ ಪುಟ್ಟ ಮಕ್ಕಳು ತುತ್ತು ಅನ್ನಕ್ಕಾಗಿ ಎಷ್ಟೊಂದು ಕಷ್ಟಪಡ್ತಿದ್ದಾರೆ ನೋಡಿ. ದಕ್ಷಿಣ ಆಫ್ರಿಕಾದ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅನೇಕರ ಕಣ್ಣಂಚುಗಳನ್ನು ತೇವಗಳೊಳಿಸುತ್ತಿದೆ. ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, ಇಷ್ಟು ಎಳೆಯ ವಯಸ್ಸಿನಲ್ಲಿ ತುತ್ತು ಅನ್ನಕ್ಕೆ ಪರದಾಡುತ್ತಿರುವ ಈ ಮಕ್ಕಳ ಸ್ಥಿತಿ ನೋಡಿ ಅನೇಕರು ಭಾವುಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೀನ್ಯಾ ಮಕ್ಕಳ ಶೋಚನೀಯ ಸ್ಥಿತಿ:

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಮಳೆ ಜೋರಾಗಿ ಸುರಿಯುತ್ತಿದ್ದರೆ, ಪುಟ್ಟ ಮಕ್ಕಳು ಕಾಲ ಕೆಳಗೆ ಹರಿಯುತ್ತಿರುವ ಕೆಸರು ನೀರನ್ನು ಲೆಕ್ಕಿಸದೇ, ಮಳೆಯಲ್ಲೇ ಒದ್ದೆಯಾಗುತ್ತಾ, ಚಳಿಯಿಂದ ನಡುಗುತ್ತಲೇ, ಉರಿಯುತ್ತಿರುವ ಮಳೆಗೆ ತಲೆಯ ಮೇಲೆ ಊಟದ ಪ್ಲಾಸ್ಟಿಕ್ ತಟ್ಟೆಯನ್ನು ಅಡ್ಡಲಾಗಿ ಹಿಡಿದು ತಮ್ಮ ಸರತಿಗಾಗಿ ಸಾಲಿನಲ್ಲಿ ಕಾಯುತ್ತಿರುವುದನ್ನು ನೋಡಬಹುದಾಗಿದೆ. ಇವರೆಲ್ಲರೂ ಪುಟ್ಟ ಪುಟ್ಟ ಮಕ್ಕಳಾಗಿದ್ದು, ಸುರಿಯುವ ಮಳೆಯಲ್ಲೇ ಅವರು ಒಂದು ಹೊತ್ತಿನ ಊಟಕ್ಕಾಗಿ ಆಸೆಯಿಂದ ಕಾಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸುತ್ತಿದ್ದು, ಇದು ಎಂಥಹಾ ಕಲ್ಲು ಹೃದಯದವರ ಕಣ್ಣಂಚು ತೇವಗೊಳ್ಳುವಂತೆ ಮಾಡುತ್ತಿದೆ. ಕೆಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಯ ಪ್ರಕಾರ ಇದು ದಕ್ಷಿಣ ಆಫ್ರಿಕಾ ದೇಶವಾದ ಕೀನ್ಯಾದಲ್ಲಿನ ಮಕ್ಕಳ ವೀಡಿಯೋ ಆಗಿದೆ.

ತುತ್ತು ಅನ್ನಕ್ಕಾಗಿ ಮಳೆಯ ನಡುವೆಯೂ ಸಾಲುಗಟ್ಟಿ ನಿಂತ ಮಕ್ಕಳು

ಇಲ್ಲಿ ಮಧ್ಯಾಹ್ನ ಸರ್ಕಾರದ ವತಿಯಿಂದ ನೀಡುವ ಊಟಕ್ಕಾಗಿ ಚಳಿ ಮಳೆಯನ್ನು ಲೆಕ್ಕಿಸದೇ ಮಕ್ಕಳು ಹೊಟ್ಟೆ ತುಂಬಿಸಲು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ. ನಾನು ಇನ್ನೆಂದು ನನ್ನ ಜೀವನದ ಬಗ್ಗೆ ದೂರುವುದಿಲ್ಲ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ದೈನಂದಿನ ಸುಸ್ತು, ಬಳಲಿಕೆ ಬಗ್ಗೆ ದೂರು ನೀಡುತ್ತೇವೆ. ಆದರೆ ಈ ಮಕ್ಕಳನ್ನು ನೋಡಿ ಕೇವಲ ಒಂದು ಹೊತ್ತಿನ ಊಟಕ್ಕಾಗಿ ಈ ಮಕ್ಕಳು ದಿನಗಟ್ಟಲೇ ಕಾಯುತ್ತಿದ್ದಾರೆ. ಹೀಗಿರುವಾಗ ನಾವು ಭಗವಂತ ನಮಗೆ ನೀಡಿರುವ ಅವಕಾಶಗಳ ಬಗ್ಗೆ ಕೃತಜ್ಞರಾಗಿರಬೇಕು. ನಿಜವಾಗಿಯೂ ಸಣ್ಣ ಸಣ್ಣ ವಿಚಾರಗಳ ಮೌಲ್ಯದ ಬಗ್ಗೆ ನಮಗೆ ತಿಳಿದೇ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಯುಗಾದಿಗೆ ತಂದ ಮಟನ್ ತಲೆಮಾಂಸ ಬೆಂದಿಲ್ಲ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ

ನಮ್ಮಲ್ಲನೇಕ ಮಕ್ಕಳು ಪೋಷಕರು ಅದು ಕೊಡಿಸಿಲ್ಲ ಇದು ಕೊಡಿಸಿಲ್ಲ ಎಂದು ಪೋಷಕರನ್ನು ದೂರುವುದಿದೆ. ಆದರೆ ನಮ್ಮ ಪೋಷಕರು ತುತ್ತು ಅನ್ನಕ್ಕೆ ಎಂದಿಗೂ ಕಡಿಮೆ ಮಾಡಿಲ್ಲ ಎಂಬುದನ್ನು ಮಕ್ಕಳು ಸೇರಿದಂತೆ ದೊಡ್ಡವರು ಕೂಡ ನೆನಪಿಟ್ಟುಕೊಳ್ಳಬೇಕಿದೆ. ಜೊತೆಗೆ ಎಷ್ಟು ಬೇಕೋ ಅಷ್ಟೇ ಊಟವನ್ನು ತಟ್ಟೆಗೆ ಹಾಕಿಕೊಳ್ಳಿ, ಆಹಾತ ವೇಸ್ಟ್ ಮಾಡುವ ಮೊದಲು ಈ ವೀಡಿಯೋವನ್ನೊಮ್ಮೆ ನೆನಪು ಮಾಡಿಕೊಳ್ಳಿ..

ಇದನ್ನೂ ಓದಿ: ಟ್ರಂಪ್ ಆಡಳಿತದಲ್ಲಿ ದಿವಾಳಿ ಆಯ್ತಾ ಅಮೆರಿಕಾ: ಸರ್ಕಾರಿ ಅಧಿಕಾರಿಗಳಿಗಿನ್ನೂ ಆಗಿಲ್ಲ ವೇತನ: ಎಲಾನ್ ಮಸ್ಕ್ ಹೇಳಿದ್ದೇನು?

View post on Instagram