‘ನಮ್ಮ ಯುದ್ಧವಿಮಾನಗಳಿಗೆ ವಿದೇಶಗಳಿಂದ ಭಾರೀ ಬೇಡಿಕೆ ಬರುತ್ತಿದೆ. ಆದ್ದರಿಂದ ಇನ್ನು 6 ತಿಂಗಳುಗಳ ಬಳಿಕ ನಮಗೆ ಐಎಂಎಫ್‌ ಸಾಲದ ಆವಶ್ಯಕತೆಯೇ ಇರುವುದಿಲ್ಲ’. ಈ ಮಾತನ್ನು ಹೇಳಿರುವುದು, ಭಿಕ್ಷಾಪಾತ್ರೆಯೊಂದಿಗೆ ಸದಾ ಐಎಂಎಫ್‌ ಬಾಗಿಲಿನಲ್ಲಿ ನಿಂತಿರುವ, ದುಡ್ಡಿಗಾಗಿ ಸೈನಿಕರನ್ನೂ ಮಾರುವ ನೆರೆಯ ಪಾಕಿಸ್ತಾನ.

ಇಸ್ಲಾಮಾಬಾದ್‌: ‘ನಮ್ಮ ಯುದ್ಧವಿಮಾನಗಳಿಗೆ ವಿದೇಶಗಳಿಂದ ಭಾರೀ ಬೇಡಿಕೆ ಬರುತ್ತಿದೆ. ಆದ್ದರಿಂದ ಇನ್ನು 6 ತಿಂಗಳುಗಳ ಬಳಿಕ ನಮಗೆ ಐಎಂಎಫ್‌ ಸಾಲದ ಆವಶ್ಯಕತೆಯೇ ಇರುವುದಿಲ್ಲ’. ಈ ಮಾತನ್ನು ಹೇಳಿರುವುದು, ಭಿಕ್ಷಾಪಾತ್ರೆಯೊಂದಿಗೆ ಸದಾ ಐಎಂಎಫ್‌ ಬಾಗಿಲಿನಲ್ಲಿ ನಿಂತಿರುವ, ದುಡ್ಡಿಗಾಗಿ ಸೈನಿಕರನ್ನೂ ಮಾರುವ ನೆರೆಯ ಪಾಕಿಸ್ತಾನ.

ಖ್ವಾಜಾ ಆಸಿಫ್‌ ಈ ಹಗಲು ಗನಸು

ಜಿಯೋ ಟೀವಿಗೆ ನೀಡಿದ ಸಂದರ್ಶನದಲ್ಲಿ ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಈ ಹಗಲು ಗನಸು ಕಂಡಿದ್ದಾರೆ. ‘ಆಪರೇಷನ್‌ ಸಿಂದೂರದ ವೇಳೆ ಹಲವು ದೇಶಗಳು ನಮ್ಮ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ನೋಡಿವೆ. ಆ ಬಳಿಕ ಜೆಎಫ್‌-17 ಯುದ್ಧವಿಮಾನಗಳಿಗೆ ಅಪಾರ ಬೇಡಿಕೆ ಬಂದಿದೆ’ ಎಂದು ಅವರು ಹೇಳಿದ್ದಾರೆ. ಆದರೆ ಪಾಕ್‌ ಭಾರತದ ವಿರುದ್ಧ ಬಳಸಿದ್ದು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು. ಅಂತೆಯೇ, ಜೆಎಫ್‌-17ರ ಅರ್ಧಕ್ಕಿಂತ ಹೆಚ್ಚು ಭಾಗಗಳು ತಯಾರಾಗುವುದು ಚೀನಾದಲ್ಲೇ ಎನ್ನುವುದು ಗಮನಾರ್ಹ.

ಬಿಯಾ ಮತ್ತು ಅಜರ್ಬೈಜಾನ್‌ ದೇಶಗಳು ಪಾಕಿಸ್ತಾನದಿಂದ ಜೆಎಫ್‌-17, ಎಫ್‌-10 ಖರೀದಿಸಿವೆ

ಇಷ್ಟರ ಹೊರತಾಗಿಯೂ ಲಿಬಿಯಾ ಮತ್ತು ಅಜರ್ಬೈಜಾನ್‌ ದೇಶಗಳು ಪಾಕಿಸ್ತಾನದಿಂದ ಜೆಎಫ್‌-17, ಎಫ್‌-10 ಖರೀದಿಸಿವೆ. ಈ ಸಂಬಂಧ ಬಾಂಗ್ಲಾದೊಂದಿಗೂ ಮಾತುಕತೆ ನಡೆಯುತ್ತಿದೆ. ಜತೆಗೆ, ಸೌದಿ ಅರೇಬಿಯಾದ ಸಾಲಕ್ಕೆ ಬದಲಾಗಿಯೂ ಯುದ್ಧವಿಮಾನ ಮಾರಲು ಪಾಕ್‌ ಯೋಚಿಸುತ್ತಿರುವುದಾಗಿ ವರದಿಯಾಗಿದೆ.

ಇತ್ತೀಚೆಗಷ್ಟೇ ಪಾಕ್‌, ಐಎಂಎಫ್‌ನಿಂದ ಸಾಲ ಪಡೆಯುವ ಸಲುವಾಗಿ ತನ್ನ ವಿಮಾನಯಾನ ಸಂಸ್ಥೆಯನ್ನೇ ಖಾಸಗಿಯವರಿಗೆ ಮಾರಾಟ ಮಾಡಿತ್ತು. ಈಗಾಗಲೇ ಪಾಕ್‌ ಈ ಸಂಸ್ಥೆಯಿಂದ 24 ಬಾರಿ ಸಾಲ ಪಡೆದಾಗಿದೆ.