ಮನೆಯಲ್ಲಿ ಶ್ವಾನವನ್ನು ಒಂಟಿಯಾಗಿ ಬಿಟ್ಟು ಹೋಗುತ್ತೀರಾ : ಹಾಗಿದ್ರೆ ಈ ಸ್ಟೋರಿ ಓದಿ
ಶ್ವಾನವೊಂದು ಮನೆಯಲ್ಲಿ ಅಳವಡಿಸಿದ್ದ ಗ್ಯಾಸ್ ಆನ್ ಮಾಡಿ ಅದು ಹೊತ್ತಿ ಉರಿಯುವಂತೆ ಮಾಡಿದ ಘಟನೆ ಅಮೆರಿಕಾದ ಮಿಸ್ಸೋರಿಯಲ್ಲಿ ನಡೆದಿದೆ.
ಶ್ವಾನಗಳು ಮನುಷ್ಯರ ನೆಚ್ಚಿನ ಸ್ನೇಹಿತರು. ಹೊಡೆದರು ಬಡೆದರು ತನ್ನಿಂದೇ ಬರುವ ಸ್ವಾಮಿನಿಷ್ಠ ಶ್ವಾನವನ್ನು ಮನುಷ್ಯರು ಕೂಡ ಅಷ್ಟೇ ಪ್ರೀತಿಯಿಂದ ಸಲಹುತ್ತಾರೆ. ಶ್ವಾನದ ಹುಟ್ಟುಹಬ್ಬಕ್ಕಾಗಿ ಗುಜರಾತ್‌ನ ಯುವಕನೋರ್ವ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುದ್ದಿಯಾಗಿದ್ದ ಹೀಗೆ ಶ್ವಾನದ ಮೇಲಿನ ಮೋಹದಿಂದ ಶ್ವಾನ ಪ್ರಿಯರು ಏನೇನೋ ಮಾಡುತ್ತಾರೆ. ಶ್ವಾನ ಮನೆಯಲ್ಲಿದ್ದಾರೆ ಏನಾದರೊಂದು ಕಿತಾಪತಿಯನ್ನು ಮಾಡುತ್ತಿರುತ್ತದೆ. ಪೇಟೆಗಳಲ್ಲಿ ಶ್ವಾನವನ್ನು ಸಾಕುವವರು ತಾವು ಕೆಲಸಕ್ಕೆ ಹೊರಗೆ ಹೋಗುವ ಸಮಯದಲ್ಲಿ ಶ್ವಾನವನ್ನು ಮನೆಯ (House) ಒಳಗೆ ಹಾಕಿ ಬಾಗಿಲು ಹಾಕಿ ಹೋಗುತ್ತಾರೆ. ನಮ್ಮ ನಿಮ್ಮಲೇ ಅನೇಕ ಶ್ವಾನ ಪ್ರಿಯರು (Dog lover) ಈ ರೀತಿ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿ ನಡೆದಿರುವ ಘಟನೆಯೊಂದು ಮಾತ್ರ ಮನೆಯಲ್ಲಿ ಶ್ವಾನವನ್ನು ಬಿಟ್ಟು ಹೋಗುವವರನ್ನು ಬೆಚ್ಚಿ ಬೀಳಿಸಿದೆ.
ಈ ಘಟನೆ ಅಮೆರಿಕಾದ ಮಿಸ್ಸೋರಿಯ (Missouri) ಮನೆಯೊಂದರಲ್ಲಿ ನಡೆದಿದ್ದು, ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ (cctv) ಈ ದೃಶ್ಯ ಸೆರೆಯಾಗಿದೆ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು ಶ್ವಾನ ಗ್ಯಾಸ್ ಸ್ಟವ್ ಅನ್ನು ಆನ್ ಮಾಡುವುದನ್ನು ತೋರಿಸುತ್ತದೆ. ಪರಿಣಾಮ ಬೆಂಕಿ(Fire) ಹೊತ್ತಿಕೊಂಡಿದ್ದು ಅದು ಮನೆಗೆ ಆವರಿಸುತ್ತದೆ. ಇದು ಶ್ವಾನವನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಬಾಗಿಲು ಹಾಕಿ ಬರುವ ಅನೇಕರನ್ನು ಬೆಚ್ಚಿ ಬೀಳಿಸಿದೆ.
Thar catches fire ಚಲಿಸುತ್ತಿರುವ ಮಹೀಂದ್ರ ಥಾರ್‌ಗೆ ಹೊತ್ತಿಕೊಂಡ ಬೆಂಕಿ, ವಾಹನ ಸಂಪೂರ್ಣ ಭಸ್ಮ!
ಮಿಸ್ಸೋರಿಯ ಪಾರ್ಕ್‌ವಿಲ್ಲೆಯ (Parkville) ರಿಸ್ ಲೇಕ್ (Riss Lake) ಸಮೀಪ ಈ ಘಟನೆ ನಡೆದಿದೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಕಾನ್ಸಾಸ್ ಸಿಟಿ ಅಗ್ನಿಶಾಮಕ ಇಲಾಖೆ ಮತ್ತು ಸದರ್ನ್ ಪ್ಲಾಟ್ ಫೈರ್ ಪ್ರೊಟೆಕ್ಷನ್ ಡಿಸ್ಟ್ರಿಕ್ಟ್ ಅವರು ಬೆಂಕಿ ನಂದಿಸಿ ಮನೆಯಿಂದ ಎರಡು ನಾಯಿಗಳನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ ಬೆಂಕಿ ಹೊತ್ತಿಕೊಂಡಾಗ ಒಳಗೆ ಬೇರೆ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಯಾರೂ ಇಲ್ಲದ ಮನೆಯಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿರಬಹುದು ಎಂದು ಮನೆಯೊಳಗಿನ ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತನಿಖಾಧಿಕಾರಿಗಳು ಒಲೆಯ ಮೇಲಿರುವ ಪ್ಯಾನ್ ಅನ್ನು ಪರಿಶೀಲಿಸಿದಾಗ ನಾಯಿಗಳಲ್ಲಿ ಒಂದು ಹಿಂಗಾಲುಗಳ ಮೇಲೆ ನಿಂತು ಗ್ಯಾಸ್ ಆನ್ ಮಾಡಿದೆ ಸ್ವಲ್ಪ ಹೊತ್ತಿನಲ್ಲಿ ಜ್ವಾಲೆ ಹೊತ್ತಿಕೊಂಡಿದ್ದು, ಮನೆಗೆ ವ್ಯಾಪಿಸಿದೆ. ಸ್ಟೌ ಮೇಲೆ ಹಿಂದಿನ ಆಹಾರವಿದ್ದ ಪಾತ್ರೆಯಿದ್ದು ಸುಮಾರು 8 ನಿಮಿಷಗಳ ಕಾಲ ಗ್ಯಾಸ್ ಹೊತ್ತಿದೆ ಎಂದು ಸಿಸಿಟಿವಿ ವಿಡಿಯೋದಿಂದ ತಿಳಿದು ಬಂದಿದೆ. ಆದರೆ ಘಟನೆಯಲ್ಲಿ ನಾಯಿಗಳಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ಮನೆಯ ಕೆಲವು ಭಾಗಗಳಿಗೆ ಬೆಂಕಿಯಿಂದ ತೀವ್ರ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
Davanagere: 777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ
ಕೆಲ ದಿನಗಳ ಹಿಂದೆ ಶ್ವಾನ ಪ್ರೇಮಿಯೊಬ್ಬರು ಶ್ವಾನವನ್ನು ಕೇದರನಾಥಕ್ಕೆ ಕರೆದೊಯ್ದು ಸುದ್ದಿಯಾಗಿದ್ದರು. ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ. ಮಾಲೀಕ ಏನೇ ಮಾಡಿದರು ಮತ್ತೆ ಆತನ ಹಿಂದೆಯೇ ಬರುವ ಶ್ವಾನದ ಸ್ವಾಮಿನಿಷ್ಠೆ ಅನೇಕ ಬಾರಿ ಸಾಬೀತಾಗಿದೆ. ವ್ಲಾಗರ್ ಆಗಿರುವ ನೋಯ್ಡಾದ ನಿವಾಸಿ 33 ವರ್ಷದ ವಿಕಾಶ್ ತ್ಯಾಗಿ ತಮ್ಮ ಶ್ವಾನವನ್ನು ಕೇದರನಾಥಕ್ಕೆ ಕರೆದೊಯ್ದವರು.