ʻʻನನ್ನ ಕೊಲೆಯಾಗಿದೆ, ನ್ಯಾಯ ಕೊಡಿಸುʼʼ ಅಮ್ಮನ ಬಳಿ ಆತ್ಮ ಹೇಳ್ತು ಭಯಾನಕ ಸತ್ಯ!
ಸತ್ತ ಮೇಲೆ ಮನುಷ್ಯ ಏನಾಗ್ತಾನೆ ಎಂಬ ಪ್ರಶ್ನೆಗೆ ಯಾರಿಂದ್ಲೂ ಉತ್ತರವಿಲ್ಲ. ಆದ್ರೆ ಆತ್ಮ, ಭೂತಗಳ ಬಗ್ಗೆ ಸಿನಿಮಾ, ಧಾರಾವಾಹಿ ಆಗ್ತಾನೆ ಇರುತ್ವೆ. ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲೂ ಆತ್ಮವಿದೆ ಎಂಬುದನ್ನು ಒಂದು ಘಟನೆ ತೋರಿಸಿಕೊಟ್ಟಿತ್ತು.

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗ್ತಿರುವ ಸೀತಾರಾಮ ಸೀರಿಯಲ್ (Seetharama serial) ನಲ್ಲಿ ಸಿಹಿ ಆತ್ಮ ಸುಬ್ಬಿಗೆ ಕಾಣಿಸಿಕೊಳ್ತಿದೆ. ಸಿಹಿ ತನ್ನ ಸಾವಿನ ರಹಸ್ಯವನ್ನು ಸುಬ್ಬಿ ಮೂಲಕ ಪತ್ತೆ ಹೆಚ್ಚುವ ಕೆಲಸಕ್ಕೆ ಮುಂದಾಗಿದ್ದಾಳೆ. ಬರೀ ಸೀತಾರಾಮ ಸೀರಿಯಲ್ ನಲ್ಲಿ ಮಾತ್ರವಲ್ಲ ಇನ್ನೂ ಅನೇಕ ಸೀರಿಯಲ್, ಸಿನಿಮಾಗಳಲ್ಲಿ ಆತ್ಮಗಳು ಸಾಮಾನ್ಯ ಜನರಿಗೆ ಸಹಾಯ ಮಾಡಿದ ಕಥೆಯನ್ನು ನೋಡಿದ್ದೇವೆ. ಆದ್ರೆ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಇಂಥ ಘಟನೆ ನಡೆದಿದೆ ಅಂದ್ರೆ ನೀವು ನಂಬ್ಲೇಬೇಕು. ತನ್ನ ಸಾವಿನ ರಹಸ್ಯವನ್ನು ತಾಯಿಗೆ ಹೇಳುವ ಮೂಲಕ ಪತಿಯ ಇನ್ನೊಂದು ಮುಖವನ್ನು ಬಹಿರಂಗಪಡಿಸಿದ ಘಟನೆ ಇದು. ಸುಮಾರು 128 ವರ್ಷಗಳ ಹಿಂದೆ ನಡೆದ ಘಟನೆ. ತನ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪತಿಗೆ ಶಿಕ್ಷೆ ಕೊಡಿಸಲು ಆತ್ಮದ ರೂಪದಲ್ಲಿ ತಾಯಿ ಮುಂದೆ ಬಂದ ಮಹಿಳೆ, ಆಘಾತಕಾರಿ ಸಂಗತಿಯನ್ನು ಹೇಳಿದ್ದಳು.
ಕೊಲೆಗಾರ ಪತಿ (Murderous Husband) : 1896ರಲ್ಲಿ ನಡೆದ ಘಟನೆ ಇದು. ಇದನ್ನು ಗ್ರೀನ್ ಬೇರ್ ಕೌಂಟಿ ಗೋಸ್ಟ್ ಎಂದೇ ಕರೆಯಲಾಗುತ್ತದೆ. ವರ್ಜಿನಿಯಾ ನಿವಾಸಿ ಎಲ್ವಾಳನ್ನು ಆಕೆ ಪತಿ ಹತ್ಯೆ ಮಾಡಿದ್ದ. ಆಗ ಎಲ್ವಾಳಿಗೆ 22 ವರ್ಷ ವಯಸ್ಸು. ಆಕೆ ಎರಾಸ್ಮಸ್ ಎಂಬಾತನನ್ನು ಪ್ರೀತಿ ಮಾಡಿದ್ದಳು. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿರಲಿಲ್ಲ. ಹಾಗಾಗಿ ಇಬ್ಬರ ಮದುವೆ ಸುಸೂತ್ರವಾಗಿ ನಡೆದಿತ್ತು. ಕೆಲ ದಿನ ಇಬ್ಬರೂ ಖುಷಿಯಾಗಿದ್ದರು. ಎಲ್ವಾ ಗರ್ಭಿಣಿಯಾದ್ಲು. ಏಳು ತಿಂಗಳ ಗರ್ಭಿಣಿ ಒಂದು ದಿನ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಳು. ಎರಾಸ್ಮಸ್ ತಕ್ಷಣ ವೈದ್ಯರನ್ನು ಕರೆಸಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದ. ಆದ್ರೆ ಅಷ್ಟರಲ್ಲಾಗ್ಲೇ ಪ್ರಾಣ ಹೋಗಿತ್ತು.
ಬ್ರಾಹ್ಮಣ ಬಾಲಕಿಯರ ರೇಟ್ 20 ಲಕ್ಷ, ಮೊಬೈಲ್ ತೋರಿಸಿ ಬಲತ್ಕಾರ ! ತಪ್ಪೊಪ್ಪಿಕೊಂಡ
ವೈದ್ಯರು ವಿಷ್ಯ ತಿಳಿಸ್ತಾ ಇದ್ದಂತೆ ಗೋಳೋ ಅಂತ ಅತ್ತಿದ್ದ ಎರಾಸ್ಮಸ್. ಕೆಲ ತಿಂಗಳ ಹಿಂದಷ್ಟೆ ಮದುವೆಯಾಗಿದೆ, ಅದೂ ಪ್ರೀತಿಸಿ ಮದುವೆ ಆಗಿದ್ದಾನೆ, ಪತ್ನಿ ಕಳೆದುಕೊಂಡ ದುಃಖ ಸಹಜ ಅಂತ ಜನರು ಭಾವಿಸಿದ್ದರು. ನೋವಿನಲ್ಲೇ ಎಲ್ವಾಳನ್ನು ಮಣ್ಣು ಮಾಡಲಾಗಿತ್ತು.
ಆತ್ಮ ಕಾಣಿಸಿಕೊಂಡಿದ್ದು ಹೇಗೆ? : ಘಟನೆ ನಡೆದು ಒಂದು ತಿಂಗಳ ನಂತ್ರ ಒಂದು ದಿನ ಮಲಗಲು ಹೊರಟಿದ್ದ ತಾಯಿಗೆ ವಿಚಿತ್ರ ಅನುಭವವಾಯ್ತು. ಯಾರೋ ಮುಂದೆ ಬಂದ ಹಾಗಾಯ್ತು. ಮೊದಲು ಆಕೆ ಭಯಗೊಂಡಳು. ಆದ್ರೆ ಎಲ್ವಾ ಮಾತು ಶುರು ಮಾಡಿದ್ದಳು. ನಾನು ಎಲ್ವಾ, ನೀವು ಭಯಪಡಬೇಕಾಗಿಲ್ಲ, ನಾನು ನಿಮಗೆ ಏನೂ ಮಾಡೋದಿಲ್ಲ ಎಂದಿದ್ದ ಎಲ್ವಾ, ನನ್ನ ಸಾವಿಗೆ ನ್ಯಾಯ ಬೇಕು ಎಂದಿದ್ದಳು. ತಾಯಿ ಮುಂದೆ ಎಲ್ಲ ಕಥೆ ಹೇಳಿದ್ದಳು. ನನ್ನದು ಸಹಜ ಸಾವಲ್ಲ. ಹತ್ಯೆ ಮಾಡಲಾಗಿದೆ. ನನ್ನ ಪತಿ ಎರಾಸ್ಮಸ್ ಹತ್ಯೆ ಮಾಡಿದ್ದಾನೆ. ಆತನಿಗೆ ಮೊದಲೇ ಎರಡು ಮದುವೆ ಆಗಿದೆ. ಈ ವಿಷ್ಯ ನನಗೆ ಗೊತ್ತಾಗ್ತಿದ್ದಂತೆ ಕುಡಿದ ಮತ್ತಿನಲ್ಲಿ ನನ್ನ ಕತ್ತು ಹಿಸುಕಿದ್ದಾನೆ.
ಎಲಾನ್ ಮಸ್ಕ್ ಪತ್ನಿ, ಗೆಳತಿಯರು ಮತ್ತು 13 ಮಕ್ಕಳ ರಹಸ್ಯ; ಉದ್ಯಮಿಯ ಖಾಸಗಿ ಜೀವನ ಫುಲ್
ನಂತ್ರ ಫುಲ್ ನೆಕ್ ಡ್ರೆಸ್ ಹಾಕಿ ನನ್ನನ್ನು ಮೆಟ್ಟಿನಿಂದ ಕೆಳಗೆ ತಳ್ಳಿದ್ದಾನೆ. ಆ ನಂತ್ರ ನಾಟಕವಾಡಿದ್ದಾನೆ ಎಂದು ಎಲ್ವಾ ತಾಯಿಗೆ ಹೇಳ್ತಾಳೆ. ಇದನ್ನು ಕೇಳಿದ ಎಲ್ವಾ ತಾಯಿ, ಮಗಳಿಗೆ ನ್ಯಾಯ ಕೊಡಿಸಲು ಎಲ್ಲ ರೀತಿಯ ದಾಖಲೆ ಕಲೆ ಹಾಕಿ, ಎರಾಸ್ಮಸ್ ಗೆ ಶಿಕ್ಷೆ ಕೊಡಿಸ್ತಾಳೆ. ಪ್ರಕರಣದ ವಿಚಾರಣೆ ನಡೆಸಿ ಕೋರ್ಟ್, ಎರಾಸ್ಮಸ್ ಗೆ ಜೀವಾವಧಿ ಶಿಕ್ಷೆ ನೀಡುತ್ತದೆ. ಆದ್ರೆ ಜೈಲಿನಲ್ಲಿ ಮೂರು ವರ್ಷ ಕಳೆದ ಎರಾಸ್ಮಸ್, ಖಾಯಿಲೆ ಬಂದು ಸಾವನ್ನಪ್ಪುತ್ತಾನೆ.