NSA Level Meeting ಆಫ್ಘನ್‌ನ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿ : ತಾಲಿಬಾನ್‌!

*ಭಾರತ ಸೇರಿ ಎಂಟು ರಾಷ್ಟ್ರಗಳ NSA level meeting
*ಈ ಸಭೆ  ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿ ಎಂದ ತಾಲಿಬಾನ್‌
*ಎನ್‌ಎಸ್‌ಎ ಹೇಳಿದ್ದನ್ನು ನಾವು ಒಪ್ಪುತ್ತೇವೆ :  ಸುಹೇಲ್ ಶಾಹೀನ್

Hope NSA level meet will contributes to peace stability of Afghanistan said Taliban spokesperson  Suhail Shaheen mnj

ನವದೆಹಲಿ(ನ.11):  ಅಫ್ಘಾನಿಸ್ತಾನದಲ್ಲಿ (Afghanistan) ಎದ್ದಿರುವ ಬಿಕ್ಕಟ್ಟು, ಭದ್ರತಾ ಸವಾಲು ಪರಿಹರಿಸಲು ಭಾರತ ಬುಧವಾರ ಮಹತ್ವದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ(NSA level meeting ) ಆಯೋಜಿಸಿತ್ತು. ಜಾಗತಿಕ ಭಯೋತ್ಪಾದನೆಗೆ (Terrorism) ಅಫ್ಘಾನಿಸ್ತಾನವು ನೆಲೆ ಆಗ ಕೂಡದು ಎಂದು ಭಾರತ ಸೇರಿ ಎಂಟು ರಾಷ್ಟ್ರಗಳು ಒಮ್ಮತದ ನಿರ್ಣಯ ತೆಗೆದುಕೊಂಡಿವೆ. ಅಫ್ಘಾನಿಸ್ತಾನ ಬಿಕ್ಕಟ್ಟು ಕುರಿತು ದೆಹಲಿಯಲ್ಲಿ (Delhi) ಭಾರತದ ನೇತೃತ್ವದಲ್ಲಿ ರಷ್ಯಾ, ಇರಾನ್‌ ಸೇರಿ ಎಂಟು ರಾಷ್ಟ್ರಗಳು ಒಗ್ಗೂಡಿ ನಡೆಸಿದ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಒಕ್ಕೊರಲ ದ್ವನಿ ಕೇಳಿ ಬಂದಿದೆ.

ಪಾಕ್‌ ಬತ್ತಳಿಕೆಗೆ ಚೀನಾದ ದೈತ್ಯ ಯುದ್ಧ ನೌಕೆ!

ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತು ನವದೆಹಲಿಯಲ್ಲಿ ನಡೆದ ಎನ್ಎಸ್ಎ ಮಟ್ಟದ ಈ ಸಭೆಗೆ ತಾಲಿಬಾನ್ (Taliban) ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು. ಈ ಸಂವಾದವು ಈ ಪ್ರದೇಶದಲ್ಲಿ  (Peace and Stability) ಕೊಡುಗೆ ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಹೇಳಿದೆ. ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ (Suhel Shaheen) "ಈ ಭೇಟಿಯನ್ನು ಸಕಾರಾತ್ಮಕ ಬೆಳವಣಿಗೆಯಾಗಿ ನೋಡಿದ್ದೇನೆ ಮತ್ತು ಇದು ಅಫ್ಘಾನಿಸ್ತಾನದ "ಶಾಂತಿ ಮತ್ತು ಸ್ಥಿರತೆಗೆ" ಕೊಡುಗೆ ನೀಡುತ್ತದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಶಾಂತಿ ಮತು ಸ್ಥಿರತೆ ಕಾಪಾಡುವುದೇ  ನಮ್ಮ ಉದ್ದೇಶ!

"ದೇಶದ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ, ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮತ್ತು ದೇಶದಲ್ಲಿ ಬಡತನವನ್ನು (Poverty) ತೊಡೆದುಹಾಕಲು ಸಹಾಯ ಮಾಡುವ ಯಾವುದೇ ಕ್ರಮವನ್ನು ತಾಲಿಬಾನ್ ಬೆಂಬಲಿಸುತ್ತದೆ . NSA ಅಫ್ಘಾನಿಸ್ತಾನದ ಜನರಿಗಾಗಿ ದೇಶದ ಪುನರ್ನಿರ್ಮಾಣ, ಶಾಂತಿ ಮತ್ತು ಸ್ಥಿರತೆಗಾಗಿ ಕೆಲಸ ಮಾಡುವುದಾಗಿ ಹೇಳಿದ್ದರೆ, ಅದುವೇ ನಮ್ಮ ಉದ್ದೇಶವಾಗಿದೆ. 

ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಕವಿ ಮೊಹಮ್ಮದ್ ಇಕ್ಬಾಲ್!

ಅಫ್ಘಾನಿಸ್ತಾನದ ಜನರು ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತಾರೆ. ಏಕೆಂದರೆ ಅವರು ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ಅನುಭವಿಸಿದ್ದಾರೆ. ಇದೀಗ, ದೇಶದಲ್ಲಿ ಆರ್ಥಿಕ ಯೋಜನೆಗಳು (Economic Projects) ಪೂರ್ಣಗೊಳ್ಳಬೇಕು ಮತ್ತು ಹೊಸ ಯೋಜನೆಗಳು ಪ್ರಾರಂಭವಾಗಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಜನರಿಗೆ ಉದ್ಯೋಗಾವಕಾಶಗಳೂ ಬೇಕು. ಹಾಗಾಗಿ (ಎನ್‌ಎಸ್‌ಎ ಮಟ್ಟದ ಸಭೆಯಲ್ಲಿ) ಹೇಳಿದ್ದನ್ನು ನಾವು ಒಪ್ಪುತ್ತೇವೆ ಎಂದು ಸುಹೇಲ್ ಶಾಹೀನ್ ಹೇಳಿದ್ದಾರೆ.

ಪಾಕಿಸ್ತಾನದ ಬಗ್ಗೆ ಅವರನ್ನೇ ಕೇಳಬಹುದು!

ಸಭೆಗೆ ಪಾಕಿಸ್ತಾನದ (Pakistan) ಗೈರುಹಾಜರಾದ ಕುರಿತು ಮಾತನಾಡಿದ ಸುಹೇಲ್ ಶಾಹೀನ್, " ಪ್ರತಿ ದೇಶವು ತನ್ನ ನಿಲುವನ್ನು ನಿರ್ಧರಿಸುತ್ತದೆ. ನೀವು ಅವರನ್ನು ಅದರ ಬಗ್ಗೆ ಕೇಳಬಹುದು. ಅಫ್ಘಾನಿಸ್ತಾನದ ಜನರು ಮತ್ತು ಸರ್ಕಾರಕ್ಕೆ ಸಂಬಂಧಿಸಿದಂತೆ, ನಾವು ಆರ್ಥಿಕ ಚಟುವಟಿಕೆಗಳ ಸ್ಥಿರತೆ ಮತ್ತು ಪುನರಾರಂಭ ಹಾಗೂ ಶಾಂತಿಯನ್ನು ಬಯಸುತ್ತೇವೆ ಎಂದು ಶಾಹೀನ್‌ ಹೇಳಿದ್ದಾರೆ

ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ (Ajit Doval) ಬುಧವಾರ ಆಯೋಜಿಸಿದ್ದ ಈ ಸಂವಾದದಲ್ಲಿ ಇರಾನ್ (Iran), ರಷ್ಯಾ(Russia) , ಕಜಕಿಸ್ತಾನ್ (Kazakhstan), ಕಿರ್ಗಿಸ್ತಾನ್ (Kyrgyzstan), ತಜಕಿಸ್ತಾನ್(Tajikistan) , ತುರ್ಕಮೆನಿಸ್ತಾನ್ (Turkmenistan) ಮತ್ತು ಉಜ್ಬೇಕಿಸ್ತಾನ್ (Uzbekistan) ಭಾಗವಹಿಸಿದ್ದವು. ಮಾತುಕತೆಗೆ ಸೇರಲು ಚೀನಾ ಮತ್ತು ಪಾಕಿಸ್ತಾನಗಳಿಗೂ  ಆಹ್ವಾನ ನೀಡಲಾಗಿತ್ತು. ಆದರೆ ಉಭಯ ದೇಶಗಳು ಆಹ್ವಾನವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದವು. NSA ಮಟ್ಟದ ಭದ್ರತಾ ಸಭೆ ಇದೇ ಮೊದಲಲ್ಲ. 2018 ಹಾಗೂ 2019ರಲ್ಲಿ ಭಾರತ  NSA ಮಟ್ಟದ ಸಭೆಗೆ ಆಯೋಜಿಸಿತ್ತು. ಆದರೆ 2020ರಲ್ಲಿ ಕೊರೋನಾ ಕಾರಣದಿಂದ ಯಾವುದೇ ಸಭೆ ನಡೆಸಿಲ್ಲ. ಹೀಗಾಗಿ ಕಳೆದ ವರ್ಷ  ನಡೆಯಬೇಕಿದ್ದ 3ನೇ ಸಭೆ ಇದೀಗ ನಡೆಯುತ್ತಿದೆ. 

Latest Videos
Follow Us:
Download App:
  • android
  • ios