ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ಹೊರಡುವ ಮತ್ತು ಈ ದೇಶಗಳ ಮೂಲಕ ಬರುವ ವಿಮಾನಗಳಿಗೆ ನಿಷೇಧ| ಏ.20ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ 

ಹಾಂಗ್‌ಕಾಂಗ್*(ಏ.20): ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ಹೊರಡುವ ಮತ್ತು ಈ ದೇಶಗಳ ಮೂಲಕ ಬರುವ ವಿಮಾನಗಳಿಗೆ ಏ.20ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ ವಿಧಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಮೊದಲ ಬಾರಿ ಹಾಂಗ್‌ಕಾಂಗ್‌ನಲ್ಲಿ ಎನ್‌501ವೈ ರೂಪಾಂತರಿ ಕೊರೋನಾ ವೈರಸ್‌ ಪತ್ತೆಯಾಗಿರುವುದರಿಂದ ಈ ನಿರ್ಧಾರ ಕೈಗೊಂಡಿದೆ. ಭಾರತ, ಪಾಕ್‌ ಹಾಗೂ ಫಿಲಿಪ್ಪೀನ್ಸ್‌ ‘ಅತ್ಯಂತ ಅಪಾಯಕಾರಿ ದೇಶಗಳು’ ಎಂದು ಹಾಂಗ್‌ಕಾಂಗ್‌ ಪರಿಗಣಿಸಿದೆ.
ಕಳೆದ 14 ದಿನಗಳಲ್ಲಿ ಈ ದೇಶದಿಂದ ಬಂದವರಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಹಾಂಗ್‌ಕಾಂಗ್‌ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಹಾಂಗ್‌ಕಾಂಗ್‌ನಲ್ಲಿ ಭಾನುವಾರ 30 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಆ ಪೈಕಿ 29 ಜನರು ಹೊರಗಿನಿಂದ ಬಂದವರು.

75 ಲಕ್ಷ ಜನಸಂಖ್ಯೆಯ ಹಾಂಗ್‌ಕಾಂಗ್‌ನಲ್ಲಿ ಈವರೆಗೆ 11,600 ಕೇಸು ಪತ್ತೆಯಾಗಿದ್ದು, 209 ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ.