ಜಾನಿ ಡೆಪ್ ಜೊತೆ ವಿಚ್ಛೇದನದ ನಂತರ 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಅಂಬೆರ್ ಹರ್ಡ್
ಜಾನಿ ಡೆಪ್ ವಿರುದ್ಧದ ಕಾನೂನು ಹೋರಾಟದಲ್ಲಿ ಸೋತ ನಂತರ, ನಟಿ ಅಂಬರ್ ಹರ್ಡ್ ಮತ್ತೆ ಗರ್ಭಿಣಿಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮೂರು ವರ್ಷದ ಮಗಳಿರುವ ಅಂಬರ್, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಪತಿ, ನಟ ಜಾನಿ ಡೆಪ್ ವಿರುದ್ಧದ ಕಾನೂನು ಹೋರಾಟದಲ್ಲಿ ಸೋತು ಸುದ್ದಿಯಾಗಿದ್ದ ನಟಿ ಅಂಬೆರ್ ಹೆರ್ಡ್ ಮತ್ತೆ ಪ್ರಗ್ನೆಂಟ್
ಮಾಜಿ ಪತಿ ಹಾಲಿವುಡ್ ನಟ ಜಾನಿ ಡೆಪ್ ವಿರುದ್ಧ ಕೌಟುಂಬಿಕ ಹಿಂಸೆಯ ಆರೋಪ ಮಾಡಿ ಕೊಟ್ಯಾಂತರ ರೂಪಾಯಿ ಪರಿಹಾ ಕೋರಿ ಆ ಪ್ರಕರಣದಲ್ಲಿ ಹೀನಾಯ ಸೋಲು ಅನುಭವಿಸಿದ ಹಾಲಿವುಡ್ ನಟಿ ಅಂಬರ್ ಹರ್ಡ್ ಈಗ ಮತ್ತೆ ಗುಡ್‌ನ್ಯೂಸ್ ನೀಡಿದ್ದಾರೆ. ಪತಿಯೊಂದಿಗಿನ ವಿಚ್ಛೇದನದ ನಂತರ ಅಂಬರ್ ಹರ್ಡ್ ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ನಟಿ ಅಂಬರ್ ಹರ್ಡ್‌ಗೆ ಬಾಡಿಗೆ ತಾಯ್ತನದ ಮೂಲಕ ಈಗಾಗಲೇ
ಮೂರು ವರ್ಷದ ಊನಾಗ್ ಪೈಗೆ ಎಂಬ ಹೆಣ್ಣು ಮಗುವೊಂದಿದೆ. ಈಗ ಆಕೆ 2ನೇ ಮಗುವಿಗಾಗಿ ಗರ್ಭಿಣಿಯಾಗಿದ್ದಾರೆ ಎಂದು ವರದಿಯಾಗಿದೆ. ಮಾಜಿ ಜಾನಿ ಡೆಪ್ ಜೊತೆಗಿನ ಸಾರ್ವಜನಿಕ ಕಾನೂನು ಸಮರದಲ್ಲಿ ಸೋಲನುಭವಿಸಿದ ನಂತರ ಅಂಬರ್ ಹರ್ಡ್ ತಮ್ಮ ವಾಸವನ್ನು ಸ್ಪೇನ್‌ಗೆ ಸ್ಥಳಾಂತರಿಸಿದ್ದರು.
ಈಗ 38 ವರ್ಷದ ಅಂಬರ್ ಹರ್ಡ್ ಅವರು 2ನೇ ಮಗುವಿಗಾಗಿ ಗರ್ಭಿಣಿಯಾಗಿದ್ದು, ತಮ್ಮ ಕುಟುಂಬ ಬೆಳೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಮಗುವಿನ ಆಗಮನಕ್ಕೆ ತಮ್ಮ ಮೊದಲ ಮಗು ಊನಾಗ್ ಪೈಗೆ ಕೂಡ ಖುಷಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ. ಅಂಬರ್ ಹರ್ಡ್ ಅವರ ವಕ್ತಾರರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ವಿಚಾರದಿಂದ ಆಕೆ ಹಾಗೂ ಆಕೆಯ ಮೂರು ವರ್ಷದ ಮಗಳು ಊನಾಗ್ ಪೈಗೆ ಕೂಡ ಥ್ರಿಲ್ ಆಗಿರುವುದಾಗಿ ಅವರು ಹೇಳಿದ್ದಾರೆ. ಇದು ಗರ್ಭಧಾರಣೆಯ ಆರಂಭದ ಹಂತವಾಗಿರುವುದರಿಂದ ಇದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಆದರೆ ಅಂಬರ್ ಈ ವಿಚಾರದಿಂದ ಖುಷಿಯಾಗಿದ್ದಾರೆ ಎಂದು ಆಕೆಯ ವಕ್ತಾರರು ಹೇಳಿದ್ದಾಗಿ ಪೀಪಲ್ ವೆಬ್‌ಸೈಟ್ ವರದಿ ಮಾಡಿದೆ.
ಅಂಬರ್ ಹರ್ಡ್ ಅವರು ತಮ್ಮ ಮೊದಲ ಮಗಳು ಊನಾಗ್ ಪೈಗೆ ಅವರನ್ನು 2021ರ ಏಪ್ರಿಲ್ 8 ರಂದು ಬರಮಾಡಿಕೊಂಡಿದ್ದರು. ಈ ವಿಚಾರದ ಬಗ್ಗೆ ಅದೇ ವರ್ಷವೇ ಮಾಹಿತಿ ನೀಡಿದ ಅವರು 4 ವರ್ಷಗಳ ಹಿಂದೆ ನಾನು ಮಗು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ. ನಾನು ನನ್ನ ಸ್ವಂತ ನಿಯಮಗಳ ಮೇಲೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಅಂಬರ್ ಹರ್ಡ್ ಅವರು ಹೇಳಿಕೊಂಡಿದ್ದರು.
ಇದಕ್ಕೂ ಮೊದಲು ಅಂಬರ್ ಹರ್ಡ್ ಅವರು ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಅವರನ್ನು ಮದುವೆಯಾಗಿದ್ದು. ಮದುವೆಯಾದ 15 ತಿಂಗಳ ನಂತರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಅವರಿಬ್ಬರು ದೂರಾಗಿದ್ದರು. ಪತಿ ಜಾನಿ ಡೆಪ್ ವಿರುದ್ಧ ಅಂಬರ್‌ಹರ್ಡ್ ಕೌಟುಂಬಿಕ ಹಿಂಸೆಯ ಆರೋಪ ಮಾಡಿದ್ದರು. ಆದರೆ ಕೋರ್ಟ್‌ನಲ್ಲಿ ಅದನ್ನು ಸಾಬೀತು ಮಾಡಲು ಸಾಧ್ಯವಾಗದೇ ಅವರು ಸೋಲನುಭವಿಸಿದರು.
ಇನ್ನು ಈ ಕೇಸ್‌ನಲ್ಲಿ ಗೆದ್ದು ಬಂದ ಈಕೆಯ ಮಾಜಿ ಪತಿ ಪೈರೇಟ್ಸ್ ಆಫ್ ದ ಕೆರೆಬಿಯನ್ ಸಿನಿಮಾ ಖ್ಯಾತಿಯ ನಟ ಜಾನಿ ಡೆಪ್ ಈ ಗೆಲುವನ್ನು ಸಂಭ್ರಮಿಸಲು ಇಂಗ್ಲೆಂಡ್‌ನ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಬರೋಬರಿ 48 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಆಗ ವರದಿ ಆಗಿತ್ತು.
ಇದನ್ನೂ ಓದಿ: ಪತ್ನಿ ವಿರುದ್ಧದ ಗೆಲುವನ್ನು ಸಂಭ್ರಮಿಸಲು 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್
ಇದನ್ನೂ ಓದಿ: ಜಾನಿ ಡೆಪ್ ವಿರುದ್ಧ ಮಾಜಿ ಪತ್ನಿ ಲೈಂಗಿಕ ಕಿರುಕುಳದ ಆರೋಪ!