ಚೀನಾ ಬಳಿಕ ಹಾಂಕಾಂಗ್‌, ಜಪಾನ್‌ಗೂ ವೈರಸ್‌ ಲಗ್ಗೆ: ಹೆಚ್ಚಾದ ಆತಂಕ

ಎಚ್‌ಎಂಪಿವಿ ಅಥವಾ ಪ್ಯೂಮನ್ ಮೆಟಾ ನ್ಯೂಮೋವೈರಸ್, ಉಸಿರಾಟದ ಸಮಸ್ಯೆಗೆ ಕಾರಣವಾಗುವ ವೈರಸ್. ಇದು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು. ಹೆಚ್ಚಾಗಿ ಮಕ್ಕಳು ಹಾಗೂ ವೃದ್ದರು ಹಾಗೂ ರೋಗನಿರೋಧಕ ಶಕ್ತಿಯ ಇರುವವರನ್ನು ಬಾಧಿಸುತ್ತದೆ. 20 ವರ್ಷಗಳ ಹಿಂದೆ ಮೊದಲ ಬಾರಿ ಇದು ಕಾಣಿಸಿತ್ತು. 
 

HMPV virus cases also reported in Hong Kong, Japan grg

ಟೋಕಿಯೋ/ಹಾಂಕಾಂಗ್/ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್ ಮಾದರಿಯ ಎಚ್‌ಎಂಪಿವಿ (ಹೂಮನ್ ಮೆಟಾನ್ಯುಮೋ ವೈರಸ್) ಸೋಂಕು ಹರಡಿ ಭಾರೀ ಆತಂಕ ಹುಟ್ಟುಹಾಕಿರುವಾಗಲೇ, ಅತ್ತ ಜಪಾನ್ ಮತ್ತು ಹಾಂಕಾಂಗ್ ದೇಶಗಳಲ್ಲೂ ಇದೇ ಸೋಂಕಿನ ವೈರಸ್ ಭಾರೀ ಪ್ರಮಾಣದಲ್ಲಿ ವ್ಯಾಪಿಸಿರುವ ಸುದ್ದಿ ಹೊರಬಿದ್ದಿದೆ.  ಜಪಾನ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಮಾಧ್ಯಮ ವರದಿ ಪ್ರಕಾರ, 2.150 ವರೆಗೆ ಒಂದೇ ವಾರದಲ್ಲಿ 94,259 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಪ್ರಸ್ತುತ ಜಪಾನ್ ನಲ್ಲಿರುವ ಸೋಂಕಿಗೆ ತುತ್ತಾದವರ ಸಂಖ್ಯೆ 718,000ಕ್ಕೆ ತಲುಪಿದೆ. 

ಸದ್ಯ ದೇಶದಲ್ಲಿ ಚಳಿಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಆತಂಕವೂ ಎದುರಾಗಿದೆ. ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್‌ನಲ್ಲೂ ಸೋಂಕು ಹೆಮ್ಮಾರಿಯಂತೆ ಹರಡಿ ಸಾವಿರಾರು ಜನರನ್ನು ಬಲಿಪಡೆದಿತ್ತು. 

ಚೀನಾದಲ್ಲಿ HMPV virus ದಾಳಿ; ಏನು ಮಾಡ್ಬೇಕು, ಏನ್‌ ಮಾಡ್ಬಾರದು ಇಲ್ಲಿದೆ ಸಂಪೂರ್ಣ

ಏನಿದು ಸೋಂಕು? 

ಎಚ್‌ಎಂಪಿವಿ ಅಥವಾ ಪ್ಯೂಮನ್ ಮೆಟಾ ನ್ಯೂಮೋವೈರಸ್, ಉಸಿರಾಟದ ಸಮಸ್ಯೆಗೆ ಕಾರಣವಾಗುವ ವೈರಸ್. ಇದು ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳಬಹುದು. ಹೆಚ್ಚಾಗಿ ಮಕ್ಕಳು ಹಾಗೂ ವೃದ್ದರು ಹಾಗೂ ರೋಗನಿರೋಧಕ ಶಕ್ತಿಯ ಇರುವವರನ್ನು ಬಾಧಿಸುತ್ತದೆ. 20 ವರ್ಷಗಳ ಹಿಂದೆ ಮೊದಲ ಬಾರಿ ಇದು ಕಾಣಿಸಿತ್ತು. 

ಸೋಂಕು ಹರಡುವಿಕೆ 

ಕೆಮ್ಮುವಾಗ ಅಥವಾ ಸೀನುವಾಗ ಹೊರ ಬರುವ ಕಣಗಳಿಂದ ಈ ಸೋಂಕು ಹರ ಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವು ದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದು ಕೊಳ್ಳುವುದರಿಂದಲೂ ಎಚ್‌ಎಂ ಪಿವಿ ಸೋಂಕಿಗೆ ತುತ್ತಾಗುವ ಸಾಧ್ಯತೆ. 

ರೋಗ ಲಕ್ಷಣಗಳು 

ಕೆಮ್ಮು, ಶೀತ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟದಲ್ಲಿ ತೊಂದರೆ ಸೇರಿ ದಂತೆ ಕೊರೋನಾದ ಸೌಮ್ಯ ಲಕ್ಷಣಗಳು ಲಕ್ಷಣಗಳು ಎಚ್‌ಎಂಪಿವಿ ಸೋಂಕಿತರಲ್ಲಿ ಕಂಡುಬರುತ್ತವೆ. 

ಮುನ್ನೆಚ್ಚರಿಕೆ ಏನು? 

ಮಾಸ್ಕ್ ಧರಿಸಿ. ಕಮ್ಮು-ನೆಗಡಿ, ಜ್ವರ ಇದರೆ ಪ್ರತ್ಯೇಕವಾಗಿರಿ. ವೈದ್ಯರ ಬಳಿ

ಕಳೆದ ವರ್ಷಕ್ಕಿಂತ ಸೋಂಕು ಕಮ್ಮಿ ಇದೆ: ಚೀನಾ ಸರ್ಕಾರ ಪ್ರಯಾಣಕ್ಕೆ ಚೀನಾ ಸುರಕ್ಷಿತ: 

ಬೀಜಿಂಗ್‌: ದೇಶದಲ್ಲಿ ಕೋವಿಡ್ ಮಾದ ರಿಯ ಎಚ್‌ಎಂಪಿವಿ ಸೋಂಕು ಸ್ಪೋಟ ವಾಗಿರುವ ವರದಿಗಳನ್ನು ಚೀನಾ ತಳ್ಳಿ ಹಾಕಿದ್ದು, ಕಳೆದ ವರ್ಷದ ಚಳಿಗಾಲಕ್ಕೆ ಹೋಲಿಸಿದರೆ ಈ ಬಾರಿ ವರದಿಯಾಗುತಿರುವ ಉಸಿರಾಟ ಸಂಬಂಧಿ ಸಮಸ್ಯೆ ಗಳು ಕಡಿಮೆ ತೀವ್ರತೆಯದ್ದಾಗಿವೆ ಎಂದು ಹೇಳಿದೆ. ಜತೆಗೆ, ಚೀನಾಕ್ಕೆ ಪ್ರಯಾಣ ಮಾಡುವುದು ಸುರಕ್ಷಿತ ಎಂದಿದೆ. ಕ್ಸಿ ಸರ್ಕಾರದ ವಿದೇಶಾಂಗ ವಕ್ತಾರ ಮಾವೋ ನಿಂಗ್, 'ಚೀನಾ ಸರ್ಕಾರವು ತನ್ನ ಪ್ರಜೆಗಳ ಹಾಗೂ ಇಲ್ಲಿರುವ ವಿದೇಶಿಗರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತದೆ ಎಂಬ ಭರವಸೆ ಕೊಡಬಲ್ಲೆ. ಆದ್ದರಿಂದ ಚೀನಾಗೆ ಪ್ರವಾಸ ಬೆಳೆಸುವುದು ಸುರಕ್ಷಿತ' ಎಂದರು.

ಆತಂಕ ಬೇಡ, ಸೋಂಕು ಎದುರಿಸಲು ಸಜ್ಜು: ಭಾರತ

ನವದೆಹಲಿ: ಚೀನಾದಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾದ ಬೆನ್ನಲ್ಲೇ ಭಾರತ ದಲ್ಲೂ ಉಸಿರಾಟ ಸಂಬಂಧಿ (ಇನ್ ಪೂಯೆನ್ನಾ) ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ ಎಂದು ದೇಶದಲ್ಲಿ ಆತಂಕಪಡಬೇಕಾದ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಅಭಯ ನೀಡಿದೆ. ಈ ಕುರಿತು ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾದ ಡಾ. ಆತುಲ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ. 

ಎಚ್‌ಎಂಪಿವಿ ವೈರಸ್‌ ಆತಂಕ ಬೇಡ: ರಾಜ್ಯ ಆರೋಗ್ಯ ಇಲಾಖೆ

ಬೆಂಗಳೂರು: ಚೀನಾದಲ್ಲಿ ಪತ್ತೆಯಾಗಿರುವ ಎಚ್‌ಎಂಪಿವಿ ವೈರಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಸಲಹೆ, ಮಾರ್ಗಸೂಚಿ ನೀಡಿಲ್ಲ. ವೈರಸ್‌ನಿಂದ ಸದ್ಯಕ್ಕೆ ನಮಗೆ ಯಾವುದೇ ಆತಂಕವಿಲ್ಲ. ಹೀಗಾಗಿ ಅನಗತ್ಯ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚೀನಾದಲ್ಲಿ ಮತ್ತೆ ವೈರಸ್ ಸ್ಫೋಟ: ಭಾರಿ ಸಾವು?: ಶವಾಗಾರಗಳು ಫುಲ್, ಸ್ಮಶಾನದಲ್ಲೂ ಜಾಗವಿಲ್ಲ!

ಚೀನಾದಲ್ಲಿ ವೈರಸ್‌ ಹರಡುತ್ತಿರುವುದು ಇದೇ ಮೊದಲಲ್ಲ, ಕೊನೆಯೂ ಅಲ್ಲ. ಕೊರೋನಾ ಬಳಿಕ ಒಮಿಕ್ರಾನ್‌ ಸೇರಿ ನಾಲ್ಕೈದು ಮಾದರಿ ವೈರಸ್‌ಗಳು ಚೀನಾದಲ್ಲಿ ಕಾಣಿಸಿಕೊಂಡಿತು. ಆದರೆ ಅವು ಭಾರತ ಅಥವಾ ರಾಜ್ಯಕ್ಕೆ ಯಾವುದೇ ಆತಂಕ ತಂದೊಡ್ಡಲಿಲ್ಲ. ಇದೀಗ ಹ್ಯೂಮನ್ ಮೆಟಾನ್ಯುಮೋವೈರಸ್‌ (ಎಚ್‌ಎಂಪಿವಿ) ಪತ್ತೆಯಾಗಿದ್ದು, ಇದರ ಜತೆಗೆ ಇನ್ನೂ ಕೆಲ ವೈರಸ್‌ಗಳು ಸಕ್ರಿಯವಾಗಿವೆ. ಇದರ ಬಗ್ಗೆ ಅಧಿಕೃತವಾಗಿ ಮಾಹಿತಿ ಬರುವವರೆಗೂ ಅಂತೆ ಕಂತೆಗಳ ಬಗ್ಗೆ ಆತಂಕಪಡಬಾರದು. ಜತೆಗೆ ಈ ಬಗ್ಗೆ ಹೆಚ್ಚು ಪ್ರಚಾರವನ್ನೂ ನೀಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ.

ಪ್ರಚಾರವೂ ಅಗತ್ಯವಿಲ್ಲ

ಎಚ್ಎಂಪಿವಿ ವೈರಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ತುಂಬಾ ಅವಸರ ಮಾಡಿ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರೂ ಈ ಬಗ್ಗೆ ಭಯಭೀತರಾಗುವುದು ಬೇಡ. ಮಾಧ್ಯಮಗಳಲ್ಲೂ ಸದ್ಯಕ್ಕೆ ಈ ಬಗ್ಗೆ ಪ್ರಚಾರ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್‌ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios