ಚೀನಾದಲ್ಲಿ ಮತ್ತೆ ವೈರಸ್ ಸ್ಫೋಟ: ಭಾರಿ ಸಾವು?: ಶವಾಗಾರಗಳು ಫುಲ್, ಸ್ಮಶಾನದಲ್ಲೂ ಜಾಗವಿಲ್ಲ!
ವೈರಸ್ ವ್ಯಾಪಕವಾಗಿ ಹಬ್ಬಿರುವ ಕಾರಣ, ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ವೈರಸ್ ಸೋಂಕಿನಿಂದಾಗಿ ಭಾರೀ ಪ್ರಮಾಣದಲ್ಲಿ ಸಾವು ಸಂಭವಿ ಸಿದ್ದು, ಶವಾಗಾರ ಮತ್ತು ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗಿದೆ. ಸೋಂಕು ತಡೆಗೆ ಈಗಾಗಲೇ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂಬ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೀಜಿಂಗ್(ಜ.03): ಇಡೀ ವಿಶ್ವವನ್ನೇ ಸ್ತಬ್ದಗೊಳಿಸಿದ್ದ ಕೊರೋನಾ ವೈರಸ್ ಹಾವಳಿ ಕಾಣಿಸಿಕೊಂಡ ಸರಿಯಾಗಿ 5 ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಪ್ಯೂಯೆನ್ನಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ 19 ವೈರಸ್ ವ್ಯಾಪಕವಾಗಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ.
ವೈರಸ್ ವ್ಯಾಪಕವಾಗಿ ಹಬ್ಬಿರುವ ಕಾರಣ, ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ವೈರಸ್ ಸೋಂಕಿನಿಂದಾಗಿ ಭಾರೀ ಪ್ರಮಾಣದಲ್ಲಿ ಸಾವು ಸಂಭವಿ ಸಿದ್ದು, ಶವಾಗಾರ ಮತ್ತು ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗಿದೆ. ಸೋಂಕು ತಡೆಗೆ ಈಗಾಗಲೇ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂಬ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕೋವಿಡ್ ನಿಖರ ಭವಿಷ್ಯ ನುಡಿದ್ದ ಭವಿಷ್ಯಕಾರ 2025ರ ಕುರಿತು ಹೇಳಿದ ಸ್ಫೋಟಕ ಪ್ರಿಡಿಕ್ಷನ್
ಆದರೆ ಇಂಥ ಸುದ್ದಿಗಳ ಕುರಿತು ಇದುವರೆಗೂ ಚೀನಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಇದನ್ನು ನಿರಾಕರಿಸಿಯೂ ಇಲ್ಲ. ಈ ಹಿಂದೆ ಕೋವಿಡ್ ಕಾಣಿಸಿಕೊಂಡಾಗಲೂ ಚೀನಾ ಇದೇ ರೀತಿಯಲ್ಲಿ ವರ್ತಿಸಿತ್ತು. ಹೀಗಾಗಿ ಚೀನಾದ ವರ್ತನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ನಡುವೆ 'ನ್ಯುಮೋನಿಯಾ ಸೇರಿ ದಂತೆ ಉಸಿರಾಟ ಸಂಬಂಧಿ ಸಮಸ್ಯೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆಯ ಪರಿಸ್ಥಿತಿ ಮತ್ತೆ ನಿರ್ಮಾಣವಾಗುವುದನ್ನು ತಡೆಯುವ ಸಲುವಾಗಿ ಸೂಕ್ತ ಮಾರ್ಗಸೂಚಿ ರಚಿಸಲು ಸಿದ್ದತೆ ನಡೆಯುತ್ತಿದೆ. ಇದರ ಭಾಗವಾಗಿ, ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಯೋಗ, ಈ ರೋಗದ ವರದಿ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಏಜೆನ್ಸಿ ಸ್ಥಾಪಿಸಲು ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ ಎಂದು ' ಎಂದು ರಾಯಿಟರ್ಸ್ ಸುದ್ದಿ. ಸಂಸ್ಥೆ ವರದಿ ಮಾಡಿದೆ.
ಎಚ್‌ಎಂಪಿವಿ ಲಕ್ಷಣಗಳೇನು?:
ಈ ಸೋಂಕು ತಗುಲಿದ ವ್ಯಕ್ತಿಯಲ್ಲಿ ಜ್ವರ ಹಾಗೂ ಕೊರೋನಾದ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.