ಭಾರತೀಯರಿಗಿನ್ನು ಅಮೆರಿಕದ ಸರ್ಕಾರಿ ಕೆಲಸ ಇಲ್ಲ!
ಭಾರತೀಯರಿಗಿನ್ನು ಅಮೆರಿಕದ ಸರ್ಕಾರಿ ಕೆಲಸ ಇಲ್ಲ| ಎಚ್1ಬಿ ವೀಸಾದಾರರಿಗೆ ಸರ್ಕಾರಿ ಕೆಲಸ ನಿಷಿದ್ಧ: ಟ್ರಂಪ್ ಆದೇಶ
ನವದೆಹಲಿ(ಆ.05): ಈ ವರ್ಷದ ಅಂತ್ಯದವರೆಗೆ ಹೊಸತಾಗಿ ಎಚ್1ಬಿ ವೀಸಾ ನೀಡುವುದನ್ನು ತಿಂಗಳ ಹಿಂದಷ್ಟೇ ನಿಷೇಧಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಸರ್ಕಾರಿ ಕೆಲಸವನ್ನು ಎಚ್1ಬಿ ವೀಸಾದಾರರಿಗೆ ನೀಡುವಂತಿಲ್ಲ ಎಂಬ ಇನ್ನೊಂದು ಹೊಸ ಆದೇಶ ಹೊರಡಿಸಿದ್ದಾರೆ. ಅಮೆರಿಕಕ್ಕೆ ಎಚ್1ಬಿ ವೀಸಾದಡಿ ವಲಸೆ ಹೋಗುವವರು ಹೆಚ್ಚಾಗಿ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮತ್ತು ಇತರ ತಂತ್ರಜ್ಞರೇ ಆಗಿರುವುದರಿಂದ ಈ ನಿರ್ಧಾರದಿಂದ ಭಾರತೀಯರಿಗೆ ಹೆಚ್ಚು ನಷ್ಟವಾಗಲಿದೆ.
ಕೊರೋನಾ ವಿರುದ್ಧ ಅಮೆರಿಕ ದಿಟ್ಟ ಹೋರಾಟ, ಭಾರತದ ಪರಿಸ್ಥಿತಿ ಕೈಮೀರುತ್ತಿದೆ; ಟ್ರಂಪ್!
ಅಮೆರಿಕದ ಕೇಂದ್ರ ಸರ್ಕಾರಿ ಕೆಲಸಗಳಿಗೆ, ಅದರ ಹೊರಗುತ್ತಿಗೆ ಮತ್ತು ಉಪ ಗುತ್ತಿಗೆಗಳಿಗೆ ಈ ಆದೇಶ ಅನ್ವಯಿಸುತ್ತದೆ. ಅಮೆರಿಕದ ರಾಜ್ಯ ಸರ್ಕಾರಗಳು ಈ ಹಿಂದಿನಂತೆಯೇ ಎಚ್1ಬಿ ವೀಸಾದಾರರನ್ನೂ ತಮ್ಮ ಸರ್ಕಾರಿ ಉದ್ಯೋಗಗಳಿಗೆ ನೇಮಿಸಿಕೊಳ್ಳಬಹುದು. ಆದರೆ, ಟ್ರಂಪ್ ಈಗ ಹೊರಡಿಸಿರುವ ಆದೇಶದಿಂದಾಗಿ ಹೊಸತಾಗಿ ಎಚ್1ಬಿ ವೀಸಾದಾರರಿಗೆ ಅಮೆರಿಕದ ಕೇಂದ್ರ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂಬುದರ ಜೊತೆಗೆ, ಈಗಾಗಲೇ ಕೆಲಸದಲ್ಲಿರುವವರ ನೌಕರಿಯೂ ಹೋಗಲಿದೆ. 120 ದಿನದೊಳಗೆ ಅಮೆರಿಕದ ಎಲ್ಲ ಸರ್ಕಾರಿ ಇಲಾಖೆಗಳು ಆಂತರಿಕ ಆಡಿಟ್ ನಡೆಸಿ ತಾವು ಅಮೆರಿಕದ ನಾಗರಿಕರಿಗೆ ಮಾತ್ರ ಕೆಲಸ ನೀಡಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಅಂದರೆ, ವಿದೇಶೀಯರನ್ನು ನೇಮಿಸಿಕೊಂಡಿದ್ದರೆ ಅವರನ್ನು ಕಿತ್ತುಹಾಕಬೇಕಿದೆ.
ಟ್ರಂಪ್ ಸರ್ಕಾರದ ಈ ಆದೇಶವನ್ನು ಭಾರತದ ಉದ್ದಿಮೆಗಳ ಒಕ್ಕೂಟ ನ್ಯಾಸ್ಕಾಂ ಖಂಡಿಸಿದ್ದು, ತಪ್ಪು ಮಾಹಿತಿ ಹಾಗೂ ತಪ್ಪು ಕಲ್ಪನೆಯಿಂದ ಟ್ರಂಪ್ ಈ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಈಗಾಗಲೇ ಆರ್ಥಿಕ ಸಂಕಷ್ಟಅನುಭವಿಸುತ್ತಿರುವ ಹಾಗೂ ಉದ್ಯೋಗ, ಸೃಜನಶೀಲ ಆವಿಷ್ಕಾರಗಳು, ಸಂಶೋಧನೆ ಹಾಗೂ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವ ಅಮೆರಿಕಕ್ಕೆ ಇನ್ನಷ್ಟುನಷ್ಟವಾಗಲಿದೆ ಎಂದು ಹೇಳಿದೆ.
ಜೋ ಬೈಡನ್ ಗೆದ್ರೆ ಕಮಲಾ ಅಮೆರಿಕ ಉಪಾಧ್ಯಕ್ಷೆ..?
ಅಮೆರಿಕಕ್ಕೆ ಪ್ರತಿ ವರ್ಷ ಎಚ್1ಬಿ ವೀಸಾದಡಿ ತೆರಳುವ ಒಟ್ಟು ವಿದೇಶಿಗರಲ್ಲಿ ಸುಮಾರು ಶೇ.70ರಷ್ಟುಮಂದಿ ಭಾರತೀಯರಾಗಿರುತ್ತಾರೆ.
ಅಮೆರಿಕದ ಉದ್ಯೋಗಗಳು ಅಮೆರಿಕನ್ನರಿಗೇ ಸಿಗಬೇಕು. ಇಂದು ನಾನು ಅಮೆರಿಕದ ಕೇಂದ್ರ ಸರ್ಕಾರದ ಎಲ್ಲಾ ನೌಕರಿಗೆ ಅಮೆರಿಕನ್ನರನ್ನೇ ನೇಮಿಸಿಕೊಳ್ಳಬೇಕು ಎಂಬ ಆದೇಶಕ್ಕೆ ಸಹಿ ಹಾಕಿದ್ದೇನೆ. ಸೋವಿ ದರಕ್ಕೆ ಸಿಗುವ ವಿದೇಶಿ ನೌಕರರಿಗಾಗಿ ಕಷ್ಟಪಟ್ಟು ಕೆಲಸ ಮಾಡುವ ಅಮೆರಿಕನ್ನರನ್ನು ಕೆಲಸದಿಂದ ಕಿತ್ತುಹಾಕುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ.
- ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ