Asianet Suvarna News Asianet Suvarna News

ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳಿಂದ 14 ಹಿಂದೂ ದೇಗುಲಗಳ ಧ್ವಂಸ

ನೆರೆಯ ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು 14 ಹಿಂದೂ ದೇಗುಲಗಳನ್ನು ಧ್ವಂಸಗೊಳಿಸಿದ್ದು, ಇದು ಸ್ಥಳೀಯ ಹಿಂದೂ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  

Hindus in danger at Bangladesh 14 hindu temples vandalised at northwestern Bangladesh akb
Author
First Published Feb 6, 2023, 3:20 PM IST

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು 14 ಹಿಂದೂ ದೇಗುಲಗಳನ್ನು ಧ್ವಂಸಗೊಳಿಸಿದ್ದು, ಇದು ಸ್ಥಳೀಯ ಹಿಂದೂ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  ವಾಯುವ್ಯ ಬಾಂಗ್ಲಾದೇಶದಲ್ಲಿ ಭಾನುವಾರ ರಾತ್ರಿಯಿಡೀ ನಡೆದ ಸರಣಿ ದಾಳಿಯಲ್ಲಿ ಕನಿಷ್ಠ 14 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.  ಧಂತಲಾ ಯೂನಿಯನ್‌ನ ಸಿಂದೂರ್‌ಪಿಂಡಿ ಪ್ರದೇಶದಲ್ಲಿ 9, ಪರಿಯಾ ಯೂನಿಯನ್‌ನ ಕಾಲೇಜ್‌ಪಾರಾ ಪ್ರದೇಶದಲ್ಲಿ 4 ಮತ್ತು ಚಾರೋಲ್ ಯೂನಿಯನ್‌ನ ಸಹಬಾಜ್‌ಪುರ ನಾಥಪಾರಾ ಪ್ರದೇಶದ ದೇವಸ್ಥಾನದಲ್ಲಿ 14 ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯ ನಂತರ ಠಾಕೂರ್‌ಗಾಂವ್ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಜಹಾಂಗೀರ್ ಹೊಸೈನ್ (Mohammad Jahangir Hossain) ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.  ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ. ಬಲಿಯಡಂಗಿಯಲ್ಲಿರುವ ಹಿಂದೂ ಸಮುದಾಯದ ಮುಖಂಡ ಬಿದ್ಯನಾಥ್ ಬರ್ಮನ್ (Bidyanath Barman) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಗುಲದ ಕೆಲವು ವಿಗ್ರಹಗಳು ಧ್ವಂಸಗೊಂಡರೆ ಕೆಲವು ವಿಗ್ರಹಗಳು ದೇವಾಲಯದ ಸುತ್ತಲೂ ಇರುವ ಕೆರೆಗಳಲ್ಲಿ ಕಂಡು ಬಂದಿವೆ.  ಹಿಂದೂ ಸಮುದಾಯದ ಜನರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದು, ದುಷ್ಕರ್ಮಿಗಳ ಗುರುತು ಇನ್ನೂ ಬಹಿರಂಗವಾಗಿಲ್ಲ ಎಂದು ಅವರು ಹೇಳಿದ್ದಾರೆ. 

Britainನಲ್ಲಿ ಹಿಂದೂ ದೇವಾಲಯ ಧ್ವಂಸ; ಕೇಸರಿ ಧ್ವಜವನ್ನು ತೆಗೆದ ಪಾಕ್‌ ಮೂಲದವರು..!

ಘಟನೆ ನಡೆದ ಪ್ರದೇಶವೂ ಯಾವಾಗಲೂ ಅತ್ಯುತ್ತಮ ಸರ್ವಧರ್ಮ ಸಾಮರಸ್ಯದ ಪ್ರದೇಶವೆಂದು ಹೆಸರುವಾಸಿಯಾಗಿದೆ. ಈ ಹಿಂದೆ ಎಂದೂ ಕೂಡ ಇಂತಹ ಹೇಯ ಘಟನೆ ಇಲ್ಲಿ ನಡೆದಿಲ್ಲ ಎಂದು ಹಿಂದೂ ಸಮುದಾಯದ ಮುಖಂಡ ಮತ್ತು ಒಕ್ಕೂಟ ಪರಿಷತ್ ಅಧ್ಯಕ್ಷ ಸಮರ್ ಚಟರ್ಜಿ (Samar Chattarjee) ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.  ಇಲ್ಲಿ ಬಹುಸಂಖ್ಯಾತ  ಮುಸ್ಲಿಂ ಸಮುದಾಯವು ನಮ್ಮೊಂದಿಗೆ (ಹಿಂದೂಗಳು) ಯಾವುದೇ ವಿವಾದವನ್ನು ಹೊಂದಿಲ್ಲ, ಈ ಅಪರಾಧಿಗಳು ಯಾರು ಎಂದು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಠಾಕೂರ್‌ಗಾಂವ್‌ನ ಪೊಲೀಸ್ ಮುಖ್ಯಸ್ಥ ಜಹಾಂಗೀರ್ ಹೊಸೈನ್ (Jahangir Hossain) ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆಯು ದೇಶದ ಶಾಂತಿಗೆ ಭಂಗ ತರುವ ಉದ್ದೇಶದಿಂದ ನಡೆಸಿದ ದಾಳಿ ಎಂಬುದು ಕಂಡು ಬರುತ್ತಿದೆ.  ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತಕ್ಷಣ ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.  ಈ ದಾಳಿ  ಶಾಂತಿ ಮತ್ತು ಕೋಮು ಸೌಹಾರ್ದ ಕದಡಲು ರೂಪಿಸಿರುವ ಸಂಚಾಗಿದ್ದು, ಇದೊಂದು ಗಂಭೀರ ಅಪರಾಧವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಠಾಕೂರ್‌ಗಾಂವ್‌ನ (Thakurgaon) ಡೆಪ್ಯುಟಿ ಕಮಿಷನರ್ ಮಹಬೂಬುರ್ ರೆಹಮಾನ್ (Mahbubur Rahman)ಹೇಳಿದ್ದಾರೆ.

ಗ್ಯಾನವಾಪಿ ಹಿಂದೂ ದೇಗುಲ, ಮಸೀದಿಯಲ್ಲ: ಪ್ರಮೋದ್‌ ಮುತಾಲಿಕ್‌

ದುಷ್ಕರ್ಮಿಗಳು ವಿಗ್ರಹಗಳ ಕೈ, ಕಾಲು, ತಲೆ ಮುರಿದಿದ್ದಾರೆ ಕೆಲವು ವಿಗ್ರಹಗಳನ್ನು ಒಡೆದು ಕೆರೆಗೆ ಎಸೆದಿದ್ದಾರೆ.  ಜಿಲ್ಲಾ ಪೂಜಾ ಮಹೋತ್ಸವ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತಪನ್ ಕುಮಾರ್ ಘೋಷ್ (Tapan Kumar Ghosh) ಅವರು ಸಿಂದೂರಪಿಂಡಿ ಪ್ರದೇಶದ ಹರಿಬಸರ್ ದೇವಸ್ಥಾನಕ್ಕೆ (Haribasar temple) ಭೇಟಿ ನೀಡಿದಾಗ ಆ ದೇವಾಲಯದಲ್ಲಿರುವ ಎಲ್ಲಾ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿತ್ತು. ಇದು ತುಂಬಾ ದುಃಖಕರ ಮತ್ತು ಭಯಾನಕವಾಗಿದೆ. ಈ ಘಟನೆಯ ಬಗ್ಗೆ ನ್ಯಾಯಯುತ ತನಿಖೆಯನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.  ಸಿಂದೂರಪಿಂಡಿ ಪ್ರದೇಶದ ನಿವಾಸಿ ಕಾಶಿನಾಥ್ ಸಿಂಗ್ (Kashinath Singh) ಮಾತನಾಡಿ ನಾವು ಭಯಭೀತರಾಗಿದ್ದೇವೆ, ಈ ಘಟನೆಯಲ್ಲಿ ಭಾಗಿಯಾದವರನ್ನು ಶೀಘ್ರ ಬಂಧಿಸಬೇಕು ಎಂದು ಹೇಳಿದ್ದಾರೆ. 

Follow Us:
Download App:
  • android
  • ios