Asianet Suvarna News Asianet Suvarna News

ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ವೈರಸ್ ಭೀತಿ, ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ BA.2.75 ಪತ್ತೆ!

  • ಕೋವಿಡ್ ಪ್ರಕರಣ ಹೆಚ್ಚಳ ನಡುವ ಹೊಸ ವೈರಸ್ ಪತ್ತೆ
  • ಯುಕೆ, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ವೈರಸ್
  • 10 ರಾಜ್ಯಗಳಲ್ಲಿ ಪ್ರಕರಣ ವರದಿ, ಕೇಂದ್ರದಿಂದ ಅಲರ್ಟ್
omicron new subvariant BA2 75 reports in India expert alert on highly transmissible spike mutations virus ckm
Author
Bengaluru, First Published Jul 4, 2022, 8:02 PM IST

ನವದೆಹಲಿ(ಜು.04): ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಆತಂಕದ ನಡುವೆ ಇದೀಗ ಹೊಸ ತಲೆನೋವು ಶುರುವಾಗಿದೆ. ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದು ಕ್ಷಿಪ್ರಗತಿಯಲ್ಲಿ ಪರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಲ್ಲಿ ಇದೀಗ ಓಮಿಕ್ರಾನ್ ಉಪತಳಿಯಾಗಿರುವ BA.2.74, BA.2.75 ಹಾಗೂ BA.2.76 ವೈರಸ್ ಪತ್ತೆಯಾಗಿದೆ. ಈ ವೈರಸ್ ಕುರಿತು ನಿಗಾ ಇಡಲು ತಜ್ಞರು ಸೂಚಿಸಿದ್ದಾರೆ. ಕಾರಣ ಈ ಮೊದಲು ಕೊರೋನಾ ವೈರಸ್‌ ಕಾಣಿಸಿಕೊಂಡಿರುವವರಲ್ಲೂ ಈ ವೈರಸ್ ಕಾಣಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಲಸಿಕೆ ಪಡೆದಿರುವವರಲ್ಲೂ ಉಪತಳಿ ವೈರಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

 

9 ವರ್ಷದ ಬಾಲಕಿ ಸೇರಿ 29 ಸಾವು, 17 ಸಾವಿರ ಕೇಸ್, ದೇಶದಲ್ಲಿ ಮತ್ತೆ ಕೊರೋನಾ ಅಲರ್ಟ್!

ದೆಹಲಿಯಲ್ಲಿ ಓಮಿಕ್ರಾನ್ ಉಪತಳಿಯ ಹೊಸ ವೈರಸ್ ಪ್ರಕರಣ ವರದಿಯಾಗಿದೆ. ಇನ್ನು ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಆದರೆ ಆರೋಗ್ಯ ಸಚಿವಾಲಯ ಇದನ್ನು ಖಚಿತಪಡಿಸಿಲ್ಲ.

ಅಮೆರಿಕ, ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್ ಸೇರಿದಂತೆ ಕೆಲ ದೇಶದಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದೀಗ ಭಾರತದಲ್ಲಿ ಈ ವೈರಸ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಯೂರೋಪ್ ಹಾಗೂ ಅಮೆರಿಕದಲ್ಲಿ ಹೊಸ ರೂಪಾಂತರಿ ವೈರಸ್ ಮತ್ತೊಂದು ಅನಾಹುತ ಸೃಷ್ಟಿಸಲಿದೆ ಅನ್ನೋ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. 

ಲಂಡನ್ ಇಂಪೀರಿಯರ್ ಕಾಲೇಜಿನ ವಿಜ್ಞಾನಿ ಥಾಮ್ಸ್ ಪಿಕಾಕ್ ಈ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ.BA.2.75 ವೈರಸ್ ಬಗ್ಗೆ ಅತೀವ ಎಚ್ಚರಿಕೆ ಅಗತ್ಯ. ಸ್ಪೈಕ್ ಮ್ಯೂಟೇಶನ್ ಗೊಳ್ಳುವ ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಇದು ಎರಡನೇ ಪೀಳಿಗೆ ವೈರಸ್. ಕ್ಷಿಪ್ರ ಪ್ರಗತಿ ಹಾಗೂ ವಿಶ್ವಾದ್ಯಂತ ಪಸರಿಸುವ ಸಾಮರ್ಥ್ಯ ಹೊಂದಿದೆ ಎಂದು ಥಾಮ್ಸ್ ಹೇಳಿದ್ದಾರೆ.

ಎರಡನೇ ಬಾರಿ ಕೋವಿಡ್ ಸೋಂಕು ತಗುಲಿದರೆ ಅಪಾಯ ಹೆಚ್ಚು!

746 ಹೊಸ ಕೊರೋನಾ ಪ್ರಕರಣ ಪತ್ತೆ
ಬೆಂಗಳೂರಿನಲ್ಲಿ ಭಾನುವಾರ 746 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.22ಕ್ಕೆ ಏರಿಕೆಯಾಗಿದೆ. 573 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6248 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 21,592 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2466 ಮಂದಿ ಮೊದಲ ಡೋಸ್‌, 5888 ಮಂದಿ ಎರಡನೇ ಡೋಸ್‌ ಮತ್ತು 13238 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ ನಗರದಲ್ಲಿ 18,283 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13,961 ಆರ್‌ಟಿಪಿಸಿಆರ್‌ ಹಾಗೂ 4322 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಭಾನುವಾರ ಪಶ್ಚಿಮ ವಲಯದಲ್ಲಿ ಹೊಸದಾಗಿ 1 ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರದಲ್ಲಿ ಒಟ್ಟು 22, ಪಶ್ಚಿಮ ವಲಯದಲ್ಲಿ ಎರಡು, ಆರ್‌ಆರ್‌ ನಗರ ಒಂದು ಕಂಟೈನ್ಮೆಂಟ್‌ ವಲಯಗಳಿದ್ದು, ನಗರದಲ್ಲಿ ಒಟ್ಟು 25 ಕಂಟೈನ್ಮೆಂಟ್‌ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
 

Follow Us:
Download App:
  • android
  • ios