Asianet Suvarna News Asianet Suvarna News

ತನ್ನ ರೆಕ್ಕೆಗಳಡಿ ನಾಯಿಮರಿಗೂ ಆಶ್ರಯ ನೀಡಿದ ಕೋಳಿ.. ದಂಗಾದ ಹುಂಜ..

ತಾಯಿ ಕೋಳಿ ಹಾಗೂ ಮರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Hen gave place to puppy in her couch watch viral video akb
Author
First Published Dec 16, 2022, 10:34 PM IST

ಪ್ರಾಣಿ ಪಕ್ಷಿಗಳು ಮನುಷ್ಯರಿಗೆ ಮಿಗಿಲಾದ ಸ್ನೇಹ ಒಡನಾಟವನ್ನು ಪರಸ್ಪರ ಹೊಂದಿರುತ್ತವೆ. ಪ್ರಾಣಿಗಳು ಕೂಡ ತನ್ನ ಮರಿಗಳ ಕಾಳಜಿ ಮಾಡುವಂತೆ ಬೇರೆ ಪ್ರಾಣಿಗಳ ಮರಿಗಳನ್ನು ಕಾಳಜಿ ಮಾಡುತ್ತವೆ. ಈ ಮೂಲಕ ತಾಯಿ ಎಂದಿಗೂ ತಾಯಿಯೇ ಎಂಬುದನ್ನು ಹಲವು ಬಾರಿ ಸಾಬೀತುಪಡಿಸಿವೆ. ಪರಸ್ಪರ ಪ್ರೀತಿ ತೋರುವ ಪ್ರಾಣಿ ಪಕ್ಷಿಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ತಾಯಿ ಕೋಳಿ ಹಾಗೂ ಮರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕೋಳಿಯೊಂದು ತನ್ನ ರೆಕ್ಕೆಗಳಡಿ ಮರಿಗಳಿಗೆ ರಕ್ಷಣೆ ನೀಡುತ್ತಾ ಬುಟ್ಟಿಯೊಂದರಲ್ಲಿ ಕುಳಿತಿರುತ್ತದೆ. ಇದೇ ಬುಟ್ಟಿಯಲ್ಲಿ ಎರಡು ಪುಟಾಣಿ ನಾಯಿಮರಿಗಳಿದ್ದು, ಅವುಗಳು ಕೂಡ ಆಶ್ರಯಕ್ಕಾಗಿ ಕೋಳಿಯ ರೆಕ್ಕೆಗಳಡಿ ನುಗ್ಗಲು ನೋಡುತ್ತವೆ. ಅಲ್ಲದೇ ಅಲ್ಲೇ ಆಶ್ರಯ ಪಡೆಯುತ್ತವೆ. ಆದರೆ ತನ್ನದಲ್ಲದ ಈ ನಾಯಿಮರಿಗಳನ್ನು ನೋಡಿ ಕೋಳಿ ಅವುಗಳನ್ನು ದೂರ ಸರಿಸುವುದಿಲ್ಲ. ಪ್ರತಿಯಾಗಿ ಅವುಗಳಿಗೆ ತನ್ನ ಮರಿಗಳಂತೆ ತನ್ನ ರೆಕ್ಕೆಗಳಡಿ ಆಶ್ರಯ ನೀಡುತ್ತದೆ. ಆದರೆ ಹತ್ತಿರ ನಿಂತಿದ್ದ ಹುಂಜ ಮಾತ್ರ ಇದನ್ನು ನೋಡಿ ದಂಗಾಗಿದ್ದು, ಹೇಂಟೆ ಕೋಳಿಯನ್ನೇ ನೋಡುತ್ತಾ ಗೊಂದಲದಿಂದ ನಿಂತಿದೆ. ಇತ್ತ ನಾಯಿಮರಿಗಳು ಕೋಳಿಯಲ್ಲೇ ತಮ್ಮ ತಾಯನ್ನು ಕಂಡಿದ್ದು, ತಾಯಿ ಕೋಳಿಯ ರೆಕ್ಕೆಗಳಡಿ ನೆಮ್ಮದಿಯಿಂದ ಮಲಗಿವೆ.

ಮೊದಲ ಬಾರಿ ಹಿಮದ ರಾಶಿ ನೋಡಿ ಕುಣಿದಾಡಿದ ಒಂಟೆ... ವೈರಲ್ ವಿಡಿಯೋ

@Yoda4ever ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು ಲಕ್ಷಾಂತರ ಜನ ಈ 10 ಸೆಕೆಂಡ್‌ಗಳ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಂಜದ ವರ್ತನೆ ನೋಡಿ ನೋಡುಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ನಾಯಿ ಮರಿ ನೋಡಿ ಇದು ನನ್ನ ಮರಿ ಅಲ್ಲ ಎಂದು ಹುಂಜ ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೌದು ಡ್ಯಾಡಿ ನಿಜವಾಗಿಯೂ ಗೊಂದಲಕ್ಕೆ ಒಳಗಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅಮ್ಮಂದಿರು ಅಮ್ಮನ ಕರ್ತವ್ಯ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ತಾಯಿ ನನ್ನ ಮಗು ಅನ್ನುತ್ತಿದೆ. ಆದರೆ ಏನು ಸರಿ ಇಲ್ಲ ಎಂದು ಹುಂಜ ಹೇಳುತ್ತಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದು ನನ್ನ ಮಗುವಲ್ಲ ನನಗೆ ಡಿವೋರ್ಸ್ ನೀಡು ಎಂದು ಹುಂಜ ಕೇಳುತ್ತಿದೆ ಎಂಬಂತೆ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಕೋಳಿ ತಾಯಿ ಎಲ್ಲ ಮರಿಗಳನ್ನು ತನ್ನದೇ ಎಂಬಂತೆ ಕಾಳಜಿಯಿಂದ ನೋಡುತ್ತಿರುವುದು ಕಾಣಿಸುತ್ತಿದೆ.

ತಾಯಿ ಪ್ರೀತಿಗೆ ಮಿತಿ ಎಂಬುದೇ ಇರುವುದಿಲ್ಲ. ದಿನಗಳ ಹಿಂದೆಯಷ್ಟೇ ಕೋತಿಯೊಂದು ತನ್ನ ಮರಿಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕೊಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ದೋಣಿಯೊಂದರಲ್ಲಿ (Boat) ತಾಯಿ ಕೋತಿ ತನ್ನ ಮರಿಕೋತಿಯೊಂದಿಗೆ ಕುಳಿತಿದ್ದು, ಇದೇ ದೋಣಿಯಲ್ಲಿ ನಾಯಿಗಳಿದ್ದು, ಕೋತಿಯ ಮೇಲೆ ದಾಳಿಗೆ ಯತ್ನಿಸುತ್ತಿವೆ. ತಾಯಿ(Mother) ಕೋತಿಗೆ ಪಾರಾಗುವುದಕ್ಕೆ ಅಲ್ಲಿ ಯಾವುದೇ ಮಾರ್ಗವೇ ಇಲ್ಲ ಏಕೆಂದರೆ ದೋಣಿಯಿಂದ ಕೆಳಗೆ ಹಾರಿದರೆ ನೀರಲ್ಲಿ ಮುಳುಗುವ ಸ್ಥಿತಿ. ಅತ್ತಲೂ ಇತ್ತಲೂ ಹುರಿದು ಮುಕ್ಕಲು ಸಿದ್ಧಗೊಂಡಿರುವ ನಾಯಿಗಳು. ದೋಣಿಯಲ್ಲೇ ಇದ್ದರೆ ನಾಯಿಗಳ ಪಾಲಿಗೆ ಆಹಾರವಾಗುವ (Food) ಸಂಕಷ್ಟದ ಸ್ಥಿತಿ. ಆದರೂ ಧೈರ್ಯಗೆಡದ ತಾಯಿ ತನ್ನ ಮರಿಯನ್ನು ಒಡಲಿನಲ್ಲಿ ತಬ್ಬಿಕೊಂಡು ನಾಯಿಗಳ ಪಾಲಿಗೆ ಸಿಗದಂತೆ ಮಾಡುತ್ತದೆ. 

ಅಜ್ಜಿಯ ಕಷ್ಟ ಸುಖ ವಿಚಾರಿಸುವ ಪೆಂಗ್ವಿನ್... ವೈರಲ್ ವಿಡಿಯೋ

ಇತ್ತ ನಾಯಿ ತನ್ನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿ ಎಳೆಯಲು ಯತ್ನಿಸಿದರು ಒಮ್ಮೆ ನೀರಿಗೆ (Water) ಹಾರಿ ಮತ್ತೆ ಮೇಲೇರಿ ಸೋಲೊಪ್ಪದೇ ಬದುಕುವ ಸಾಹಸ ಮಾಡುತ್ತದೆ. ಇತ್ತ ಕೋತಿ ನೀರಿಗೆ ಹಾರಿದಾಗ ಶ್ವಾನವೂ (Dog) ಅದರೊಂದಿಗೆ ನೀರಿಗೆ ಹಾರಿದ್ದು, ಅಲ್ಲೂ ಕಚ್ಚಿ ಎಳೆದಾಡಲು ನೋಡುತ್ತದೆ. ನೀರಿನಲ್ಲಿ ಮುಳುಗಿ ನಾಯಿಯಿಂದ ರಕ್ಷಿಸಿಕೊಳ್ಳುವ ಕೋತಿ ನಂತರ ಮೇಲೆದ ಬಂದು ಮತ್ತೆ ದೋಣಿಗೇರುತ್ತದೆ. ಅಲ್ಲದೇ ತನ್ನ ಮರಿ ಈ ದುಷ್ಟರ ಕೈಗೆ ಸಿಗದಂತೆ ರಕ್ಷಣೆಗೆ ಮುಂದಾಗುತ್ತದೆ. ಒಮ್ಮೆ ದೋಣಿಯ ಆ ತುದಿಗೆ ಮತ್ತೊಮ್ಮೆ ಈ ತುದಿಗೆ ಓಡುತ್ತದೆ. ಮತ್ತೊಮ್ಮೆ ನೀರಿಗೆ ಹಾರುತ್ತದೆ. ಇಷ್ಟೊತ್ತಿಗೆ ದೋಣಿಯೊಂದು ನದಿ ನಡುವೆ ಇರುವ ಕಂಬದ ಬಳಿ ತಲುಪಿದ್ದು, ಕೂಡಲೇ ಕೋತಿ ತಾಯಿ ಆ ಕಂಬವನ್ನು ಏರಿ ಪಾರಾಗುತ್ತಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು.

 

Follow Us:
Download App:
  • android
  • ios