ಶ್ರೀಲಂಕಾದಲ್ಲಿ ಆನೆಗಳು ಹಿಂಡು ಆಹಾವಿಲ್ಲದೆ ಬಡವಾಗಿ ಆಹಾರಕ್ಕಾಗಿ ಗಾರ್ಬೇಜ್ ಅಲೆದಾಡುತ್ತಿವೆ. ಆನೆಗಳು ಆಹಾರವಿಲ್ಲದೆ ಗಾರ್ಬೇಜ್‌ನಲ್ಲಿ ಆಹಾರಕ್ಕಾಗಿ ಅಲೆದಾಡಿ ಅರಿವಿಲ್ಲದೇ ಪ್ಲಾಸ್ಟಿಕ್‌ಗಳನ್ನೂ, ಪಾಲಿಥೀನ್ ವೇಸ್ಟ್‌ಗಳನ್ನೂ ತಿನ್ನುತ್ತಿರುವ ಹೃದಯ ವಿದ್ರಾವಕ ಘಟನೆಯ ಫೋಟೋಗಳು ವೈರಲ್ ಆಗಿವೆ.

ಜಫ್ನಾದ ಫೋಟೋಗ್ರಾಫರ್ ತರ್ಮಪ್ಲನ್ ಟಿಲೆಕ್ಸನ್ ಈ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಈಶಾನ್ಯ ಅರಣ್ಯ ಭಾಗದಲ್ಲಿ ಓಪನ್ ಗಾರ್ಬೇಜ್ ಮಾಡಲಾಗಿದ್ದು, ಏನೂ ಅರಿಯದ ಮೂಕ ಪ್ರಾಣಿ ಇಲ್ಲಿ ಆಹಾರ ಅರಸುತ್ತಿವೆ.

ಅಂಟಾರ್ಟಿಕ್‌ನಲ್ಲಿ ಪತ್ತೆಯಾಯ್ತು 5000 ವರ್ಷ ಹಳೆಯ ಪೆಂಗ್ವಿನ್ ಅವಶೇಷ

ಶ್ರೀಲಂಕಾದ ಒಲುವಿಲ್ ಎಂಬ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ವೇಸ್ಟ್‌ಗಳನ್ನು ತಂದು ಸುರಿಯಲಾಗುತ್ತಿದೆ. ಅಲ್ಲಿಂದಲೇ ಆಹಾರ ಸೇವಿಸುತ್ತಿವೆ ಆನೆಗಳು. ಹೀಗಾಗಿ ವಿಲೀನವಾಗದ ಪಾಲಿಥೀನ್ ವೇಸ್ಟ್ ಆನೆಗಳ ಹೊಟ್ಟೆ ಸೇರುತ್ತಿದೆ.

ಸುಮಾರು 25ರಿಂದ 30 ಆನೆಗಳು ಈ ಗಾರ್ಬೇಜ್‌ಗೆ ಆಹಾರಕ್ಕಾಗಿ ಭೇಟಿ ಕೊಡುತ್ತಲೇ ಇರುತ್ತವೆ. ಆನೆಗಳ ಆರೋಗ್ಯಕ್ಕೆ ಇದರಿಂದ ಬಹಳಷ್ಟು ಹಾನಿಯಾಗುವುದಿದ್ದರೂ ಇದರ ಅರಿವಿಲ್ಲದೆ, ಆಹಾರದೊಂದಿಗೆ ಪ್ಲಾಸ್ಟಿಕ್ ನುಂಗುತ್ತಿವೆ.

ಆನ್‌ಲೈನ್ ಖರೀದಿಯಲ್ಲಿ ಇರಲಿ ಎಚ್ಚರ: Amazonನ 20 ಸಾವಿರ ಸಿಬ್ಬಂದಿಗೆ ಕೊರೋನಾ

ಸಮ್ಮನ್‌ತುರೈ, ಕಲ್ಮುನೈ, ಕರೈತೀವು, ನಿಂತಾವೂರ್, ಅಡಲಚೆನ್ನೈ, ಅಕ್ಕರೈಪಟ್ಟು, ಅಲಯಾಡಿ ವೆಂಬು ಜಿಲ್ಲೆಯಿಂದ ಈ ಪ್ರದೇಶಕ್ಕೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ಈ ಭಾಗದ ಆನೆಗಳ ಪ್ರದೇಶವೂ ಮಲಿನವಾಗಿದ್ದು, ಆರೋಗ್ಯವೂ ಕೆಡುತ್ತಿದೆ.

ಅರಣ್ಯ ಗಡಿಗೆ ಸಮೀಪದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಆಂಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಗಡಿಯಲ್ಲಿ ಕಸ ಎಸೆಯಲಾಗುತ್ತಿದೆ. ಇದು ಸ್ವಲ್ಪ ಸ್ವಲ್ಪವೇ ಶೇಖರಣೆಯಾಗಿ ಈಗ ಅರಣ್ಯವನ್ನು ತಲುಪಿದೆ. ಇಲ್ಲಿಗೆ ಆನೆಗಳೂ ಬರುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ.

ಏಲಿಯನ್‌ನಂತೆ ಕಾಣಿಸಿಕೊಳ್ಳಲು ಮೂಗು ಕತ್ತರಿಸಿದ, ನಾಲಗೆ ಸೀಳಿದ, ಕಣ್ಣಿನೊಳಗೂ ಟ್ಯಾಟೂ!

ತ್ಯಾಜ್ಯ ಹಾಕುವ ಸ್ಥಳಕ್ಕೆ ಬೇಲಿ ಹಾಕಿದ್ದರೂ, ಅದು ಮುರುಕಲಾಗಿ ಹೋಗಿದ್ದು, ಆನೆಗಳು ಸುಲಭವಾಗಿ ಬರುತ್ತಿವೆ. ಈಗ ಪೂರಾ ಆರಣ್ಯದ ಸುತ್ತ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದೆ. ಅನೆಗಳ ಅನಾರೋಗ್ಯಕ್ಕೆ ತುತ್ತಾಗಿ ಮೃತಪಡುತ್ತಿವೆ. ಆನೆಗಳ ದೇಹದ ಪೋಸ್ಟ್ ಮಾರ್ಟಂನಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿದೆ.