ಇಸ್ರೇಲ್ ದಾಳಿಗೆ ಕಂಗಾಲಾದ ಹಮಾಸ್, ಏರ್‌ಸ್ಟ್ರೈಕ್ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಸೂತ್ರ!
ಇಸ್ರೇಲ್ ದಾಳಿಯಿಂದ ನಡುಗಿ ಹೋಗಿರುವ ಹಮಾಸ್ ಉಗ್ರರು ಇದೀಗ ಇರಾನ್ ಬಳಿ ಹೊಸ ಸೂತ್ರ ಮುಂದಿಟ್ಟಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಕುರಿತು ಹಮಾಸ್ ಉಗ್ರರು ಮಾತನಾಡಿದ್ದಾರೆ.
ಇಸ್ರೇಲ್(ಅ16) ಹಮಾಸ್ ಉಗ್ರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಪ್ರತಿದಾಳಿಗೆ ಗಾಜಾ ತತ್ತರಿಸಿದೆ. ತಿರುಗೇಟು ನೀಡುತ್ತಿದ್ದರೂ ಇದೀಗ ಹಮಾಸ್ ಉಗ್ರರ ಬಳಿ ಏನೂ ಉಳಿದಿಲ್ಲ. ಇತ್ತ ಗಾಜ ಜನತೆ ಜೀವ ಉಳಿಸಿಕೊಳ್ಳಲು ಈಜಿಪ್ಟ್ ಸೇರಿದಂತೆ ನೆರೆ ರಾಷ್ಟ್ರಗಳ ಗಡಿಯತ್ತ ತೆರಳುತ್ತಿದ್ದಾರೆ. ಹಮಾಸ್ ಉಗ್ರರ ಮಾತನ್ನು ಪ್ಯಾಲೆಸ್ತಿನ್ ಜನಗಳೇ ಕೇಳುತ್ತಿಲ್ಲ. ಇತ್ತ ಇಸ್ರೇಲ್ ಸತತ ದಾಳಿ ಮುಂದುವರಿಸಿದೆ. ಬೆಂಬಲ ನೀಡಿದ ಲೆಬೆನಾನ್ ಹಾಗೂ ಸಿರಿಯಾ ಮೇಲೂ ಇಸ್ರೇಲ್ ದಾಳಿಗೆ ಸಜ್ಜಾಗುತ್ತಿದೆ. ಹಮಾಸ್ ಉಗ್ರರು ಏಕಾಂಗಿಯಾಗಿದ್ದಾರೆ. ಅರಬ್ ರಾಷ್ಟ್ರಗಳು ನೆರವಿಗೆ ನಿಂತಿಲ್ಲ. ಇದೀಗ ಇಸ್ರೇಲ್‌ಗೆ ನುಗ್ಗಿ 200ಕ್ಕೂ ಹೆಚ್ಚು ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇಸ್ರೇಲ್ ಏರ್‌ಸ್ಟ್ರೈಕ್ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಮಾಡುವುದಾಗಿ ಹೇಳಿದೆ.
ಇರಾನ್ ಜೊತೆ ಮಾತುಕತೆ ನಡೆಸಿರುವ ಪ್ಯಾಲೆಸ್ತಿನ್ ಹಾಗೂ ಹಮಾಸ್ ಉಗ್ರರು ಒತ್ತೆಯಾಳಾಗಳ ಬಿಡುಗಡೆ ಬಗ್ಗೆ ಮಾತನಾಡಿದೆ. ಇಸ್ರೇಲ್ ದಾಳಿ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಇರಾನ್, ಇಸ್ರೇಲ್ ದಾಳಿ ತಕ್ಷಣ ನಿಲ್ಲಿಸಿ ಪ್ಯಾಲೆಸ್ತಿನ್ ಜನತೆಗೆ ಪರಿಹಾರ ಸಾಮಾಗ್ರಿ ತಲುಪಿಸಲು ಅನುವು ಮಾಡಿಕೊಡಬೇಕು ಎಂದಿದೆ. ಇಸ್ರೇಲ್ ಈ ಕುರಿತು ಹೇಳಿಕೆ ನೀಡಿದ್ದರೂ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ.
ಗಾಜಾ ನಾಗರೀಕರ ಸ್ಥಳಾಂತರಕ್ಕೆ ನೀಡಿದ್ದ ಗಡುವು ವಿಸ್ತರಣೆ, ದಾಳಿ ನಿಲ್ಲಲ್ಲ ಎಂದ ಇಸ್ರೇಲ್!
ಇಸ್ರೇಲ್ ಕೂಡ ತನ್ನ ನಾಗರೀಕರನ್ನು ಬಿಡುಗಡೆ ಮಾಡುವವರೆ ದಾಳಿ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟಪಡಿಸಿತ್ತು. ಒತ್ತೆಯಾಳುಗಳ ಬಿಡುಗಡೆಗೆ ಮೊದಲ ಆದ್ಯತೆ ನೀಡಬೇಕು. ಹಮಾಸ್ ಉಗ್ರರಿಗೆ ಮಾನವೀಯತೆ ಆಧಾರದಲ್ಲಿ ಪರಿಹಾರ ಸಾಮಾಗ್ರಿ ವಿತರಿಸುವುದಕ್ಕೆ ಇಸ್ರೇಲ್ ಸಮ್ಮತವಿಲ್ಲ ಎಂದಿದೆ. ಉಗ್ರರರಿಗೆ ಯಾವುದೇ ಕನಿಕರ ಇಸ್ರೇಲ್ ತೋರಿಸುವುದಿಲ್ಲ ಎಂದಿದೆ.
ಅಕ್ಟೋಬರ್ 7ರ ಶನಿವಾರ ಬೆಳ್ಳಂಬೆಳಗ್ಗೆ ಹಮಾಸ್ ಉಗ್ರರು 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿತ್ತು. ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ ಜಲಮಾರ್ಗ, ವಾಯುಮಾರ್ಗ ಹಾಗೂ ಭೂಮಾರ್ಗದ ಮೂಲಕ ಇಸ್ರೇಲ್ ಒಳನುಗ್ಗಿದ ಹಮಾಸ್ ಉಗ್ರರು ಸಿಕ್ಕ ಸಿಕ್ಕ ಇಸ್ರೇಲಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಯಹೂದಿಗಳ ಮನೆಗಳನ್ನು ಹುಡುಕಿ ಹುಡುಕಿ ನರಮೇಧ ನಡೆಸಿದ್ದರು. ಮಕ್ಕಳು, ಪುಟ್ಟ ಕಂದಮ್ಮಗಳು ಸೇರಿದಂತೆ ಕುಟುಂಬ ಸಮೇತವಾಗಿ ಹತ್ಯೆ ಮಾಡಿದ್ದದರು. ಮಕ್ಕಳ ಶಿರಚ್ಛೇಧ, ಜೀವಂತ ದಹನ ಸೇರಿದಂತೆ ಪೈಶಾಚಿಕ ಕೃತ್ಯಕ್ಕೆ ಇಸ್ರೇಲ್ ನಡುಗಿ ಹೋಗಿತ್ತು.
ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!
ಹೀಗೆ ದಾಳಿ ವೇಳೆ 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಗಾಜಾಗೆ ಕರೆದೊಯ್ದಿದ್ದರು. ಈ ಪೈಕಿ ಹಲವರು ತೀವ್ರಗಾಯದಿಂದ ಮೃತಪಟ್ಟಿದ್ದಾರೆ. ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಪುಟಾಣಿ ಕಂದಮ್ಮಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ. ಒತ್ತೆಯಾಳುಗಳ ಬಿಡುಗಡೆ ಕೆಲ ದಿನಗಳ ಕಾಲ ಮುಂದೂಡಿದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.