ಇಸ್ರೇಲ್‌ ಮೇಲೆ ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ರಾಕೆಟ್‌ ದಾಳಿ ಮಾಡಿ ಕೆಣಕಿತ್ತು ಹಮಾಸ್‌. ಇದರ ಬೆನ್ನಲ್ಲಿಯೇ ಹಮಾಸ್‌ ಉಗ್ರರು ಅತಿಯಾಗಿ ನೆಲೆಸಿರುವ ಗಾಜಾ ಪ್ರದೇಶದ ಮೇಲೆ ಮುಗಿಬಿದ್ದಿರುವ ಇಸ್ರೇಲ್‌, ಸಿಕ್ಕ ಸಿಕ್ಕ ಕಡೆಗಳಲ್ಲಿ ಬಾಂಬ್‌ ಹಾಕಿ ಹಮಾಸ್‌ ಹುಳುಗಳನ್ನು ಹೊಸಕಿ ಹಾಕುತ್ತಿದೆ. 

ನವದೆಹಲಿ (ಅ.10): ಇಸ್ರೇಲ್‌ನಿಂದ ಘಾತಕ ಏರ್‌ಸ್ಟ್ರೈಕ್‌ಗಳನ್ನು ಸ್ವೀಕರಿಸಿದ ಬಳಿಕ ಮೆತ್ತಗಾದಂತೆ ಕಾಣುತ್ತಿರುವ ಹಮಾಸ್‌ ಬಂಡುಕೋರ ಸಂಘಟನೆ, ಇಸ್ರೇಲ್‌ ಜೊತೆ ಸಂಧಾನ ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಹಮಾಸ್‌ ಈಗಾಗಲೇ ತನ್ನ ಗುರಿಗಳನ್ನು ಸಾಧಿಸಿದೆ. ಹಾಗಾಗಿ ಇಸ್ರೇಲ್‌ ವಿರುದ್ಧ ಸಂಭವನೀಯ ಕದನವಿರಾಮದ ಬಗ್ಗೆ ಮಾತುಕತೆಗಳನ್ನು ನಡೆಸಲು ನಾವು ಸಿದ್ಧ ಎಂದು ಹಮಾಸ್‌ ನಾಯಕ ಹೇಳಿದ್ದಾಗಿ ರಾಯಿಟರ್ಸ್‌ ವರದಿ ಮಾಡಿದೆ.ಅಲ್ ಜಜೀರಾ ಜೊತೆಗಿನ ಫೋನ್ ಸಂದರ್ಶನದಲ್ಲಿ ಪತ್ರಕರ್ತರೊಬ್ಬರು ಇಸ್ಲಾಮಿಸ್ಟ್ ಗುಂಪು ಸಂಭವನೀಯ ಕದನ ವಿರಾಮವನ್ನು ಚರ್ಚಿಸಲು ಸಿದ್ಧವಾಗಿದೆಯೇ ಎಂದು ಕೇಳಿದಾಗ ಹಮಾಸ್ "ಆ ರೀತಿಯ ಏನಾದರೂ" ಮತ್ತು "ಎಲ್ಲಾ ರಾಜಕೀಯ ಸಂಭಾಷಣೆಗಳಿಗೆ" ಮುಕ್ತವಾಗಿದೆ ಎಂದು ಮೌಸಾ ಅಬು ಮರ್ಜೌಕ್ ತಿಳಿಸಿದ್ದಾರೆ. ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ನಡುವಿನ ಯುದ್ಧದಲ್ಲಿ ಈವರೆಗೂ 1400ಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಮಾಸ್‌ನ ಅತ್ಯಂತ ಭೀಕರ ದಾಳಿಗೆ ಅದಕ್ಕಿಂತಲೂ ಭೀಕರವಾಗಿ ದಾಳಿ ಮಾಡಿರುವ ಇಸ್ರೇಲ್‌, ನೀರು, ವಾಯು ಹಾಗೂ ಭೂಮಾರ್ಗವಾಗಿ ಗಾಜಾವನ್ನು ಸುತ್ತುವರಿದು ದಾಳಿ ಮಾಡಿದೆ.

ಹಮಾಸ್‌ನ ದಾಳಿಯಲ್ಲಿ ಗಾಯಗೊಂಡ ಹಾಗೂ ಮೃತರಾದ ಇಸ್ರೇಲ್‌ ವ್ಯಕ್ತಿಗಳ ಹುಡುಕಾಟ ನಡೆಸಲು ಇಸ್ರೇಲ್‌ನ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಈ ವೇಳೆ ದಕ್ಷಿಣ ಇಸ್ರೇಲ್‌ನನ ನಗರವೊಂದರಲ್ಲಿ ಸಂಗೀತ ಉತ್ಸವದಲ್ಲಿ ಭಾಗಿಯಾಗಿದ್ದ ಪ್ರದೇಶದಲ್ಲಿ ಕನಿಷ್ಢ 260 ಶವಗಳನ್ನು ಇಸ್ರೇಲ್‌ ಸ್ವಯಂಸೇವಕರು ಹುಡುಕಿದ್ದಾರೆ. ಈಗಾಗಲೇ ಬಾಂಬ್‌ ಬಿದ್ದು ಧ್ವಂಸವಾಗಿರುವ ಗಾಜಾ ಪ್ರದೇಶಕ್ಕೆ ಸಂಪೂರ್ಣವಾಗಿ ನುಗ್ಗಲು ಇಸ್ರೇಲ್‌ ಸೇನಾಪಡೆ ಸಜ್ಜಾಗಿದೆ. ಹಮಾಸ್‌ನ ರಕ್ತದೋಕುಳಿಯನ್ನು ಇಸ್ರೇಲ್‌ ತನ್ನ 9/11 ಎಂದು ಹೇಳಿದೆ. ಈಗಾಗಲೇ ಗಾಜಾಪಟ್ಟಿಯ ಮೇಲೆ 600 ಯುದ್ಧವಿಮಾನಗಳು ದಾಳಿ ಮಾಡಿ ಬಾಂಬ್‌ಗಳನ್ನು ಎಸೆದಿದ್ದು, 3 ಲಕ್ಷ ಇಸ್ರೇಲ್‌ ಮೀಸಲು ಪಡೆಗಳು ಗಾಜಾಗೆ ನುಗ್ಗಲು ಸಿದ್ಧವಾಗಿದೆ. ಮುಂದಿನ 48 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಇಸ್ರೇಲ್‌, ಗಾಜಾಪಟ್ಟಿಯ ಒಳನುಗ್ಗಲಿದೆ ಎಂದು ತಿಳಿಸಿದೆ.

ಇನ್ನೊಂದೆಡೆ, ಇಸ್ರೇಲ್‌ ಸೇನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಮಾಸ್‌ ಉಗ್ರರು ತಾವು ಒತ್ತೆಯಾಳಾಗಿ ಕರೆತಂದಿದ್ದ ಇಸ್ರೇಲ್‌ ನಾಗರೀಕರ ತಲೆಗಳನ್ನು ಕತ್ತರಿಸಿ ಅದನ್ನು ಲೈವ್‌ ಟೆಲಿಕಾಸ್ಟ್‌ ಮಾಡಲು ನಿರ್ಧಾರ ಮಾಡಿದೆ. ಆದರೆ, ಇಸ್ರೇಲ್‌ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.

ಇದರ ನಡುವೆ ಹಮಾದ್ ನಾಯಕ ಈಗಾಗಲೇ ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ ಸಂಭವನೀಯ ಕದನ ವಿರಾಮಕ್ಕೆ ಸಜ್ಜಾಗಿದ್ದೇವೆ ಎಂದು ತಿಳಿಸಿದ್ದಾರೆ. ಶನಿವಾರದಂದು ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಇಸ್ರೇಲ್‌ ಗಡಿಗೆ ನುಗ್ಗಿ ಹಠಾತ್ ದಾಳಿಯಲ್ಲಿ ನೂರಾರು ಜನರನ್ನು ಕೊಂದ ನಂತರ ಇಸ್ರೇಲ್ ಮತ್ತು ಗಾಜಾದಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಈ ಯುದ್ಧವನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ: ಇಸ್ರೇಲ್ ಅಧ್ಯಕ್ಷ ಬೆಂಜಮಿನ್‌

ಇಸ್ರೇಲ್‌ ಯಾವುದೇ ಎಚ್ಚರಿಕೆಯನ್ನು ನೀಡದೇ, ಗಾಜಾದ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ. ಮತ್ತೇನಾದರೂ ಇಸ್ರೇಲ್‌ ಇದನ್ನು ಮುಂದುವರಿಸಿದರೆ, ಗಾಜಾದಲ್ಲಿ ಉರುಳುವ ಪ್ರತಿ ಕಟ್ಟಡಕ್ಕೆ ಒಬ್ಬೊಬ್ಬರು ಇಸ್ರೇಲಿಗಳ ತಲೆ ಕತ್ತರಿಸಿ ಅದರ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಹಮಾಸ್‌ ಎಚ್ಚರಿಸಿದೆ. ಇಸ್ರೇಲಿ ಬಂಧಿತರ ಕ್ರೂರ ಶಿರಚ್ಛೇದನವನ್ನು "ಆಡಿಯೋ ಮತ್ತು ವಿಡಿಯೋದೊಂದಿಗೆ ಪ್ರಸಾರ ಮಾಡಲಾಗುವುದು" ಎಂದು ಹಮಾಸ್‌ನ ಸಶಸ್ತ್ರ ವಿಭಾಗವಾದ ಕಸ್ಸಾಮ್ ಬ್ರಿಗೇಡ್‌ಗಳ ವಕ್ತಾರ ಹೇಳಿದ್ದಾನೆ.

ಇಸ್ರೇಲ್ ಉಗ್ರ ಬೇಟೆ: 500 ಹಮಾಸ್ ನೆಲೆ ಧ್ವಂಸ: ಸಾವಿನ ಸಂಖ್ಯೆ 1400ಕ್ಕೆ ಏರಿಕೆ