ಇಸ್ರೇಲ್‌ನ ಭೂದಾಳಿ ಎದುರಿಸಲು ನಾವು ಸಿದ್ಧ: ಹಮಾಸ್ ಘೋಷಣೆ: ಇಂದು ಬೈಡೆನ್ ಇಸ್ರೇಲ್‌ಗೆ
ಕಳೆದ ವಾರ ದಕ್ಷಿಣ ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ ಹಮಾಸ್ ಅಲ್ಲಿನ ನಾಗರಿಕರ ಮೇಲೆ ನಡೆಸಿದ ಕ್ರೂರ ಹತ್ಯಾಕಾಂಡದ ಹಲವು ವಿಡಿಯೋ ಮತ್ತು ಫೋಟೋಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ.
ಜೆರುಸಲೇಂ: ಕಳೆದ ವಾರ ದಕ್ಷಿಣ ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ ಹಮಾಸ್ ಅಲ್ಲಿನ ನಾಗರಿಕರ ಮೇಲೆ ನಡೆಸಿದ ಕ್ರೂರ ಹತ್ಯಾಕಾಂಡದ ಹಲವು ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ತನ್ನ ಪ್ರಜೆಗಳ ಮೇಲೆ ಹಮಾಸ್ ನಡೆಸಿದ ದಾಳಿ ಎಷ್ಟು ಕ್ರೂರತೆಯಿಂದ ಕೂಡಿತ್ತು ಎಂಬುದನ್ನು ಒತ್ತಿ ಹೇಳಿದೆ. ಈ ಪೈಕಿ ಸುಟ್ಟು ಕರಕಲಾದ ಚಿಕ್ಕ ಮಗು, ಕಾರುಗಳಲ್ಲಿನ ಮೃತದೇಹಗಳ ಮೇಲೆ ಹಮಾಸ್ ಉಗ್ರರು ಗುಂಡು ಹಾರಿಸುತ್ತಿರುವುದು, ಗುದ್ದಲಿಗಳಿಂದ ಮೃತದೇಹಗಳ ತಲೆಯನ್ನು ಕತ್ತರಿಸುವುದು ಹಾಗೂ ಸುಟ್ಟು ಹೋದ ಶವಗಳನ್ನು ಕಸದ ಬುಟ್ಟಿಯಲ್ಲಿ ಹಾಕಿರುವುದು ಸೇರಿ ಅನೇಕ ಹೃದಯ ವಿದ್ರಾವಕ ದೃಶ್ಯಗಳಿವೆ.
ಹೀಗಾಗಿ ಇದು ಕೇವಲ ಇಸ್ರೇಲ್ ಮೇಲಿನ ಯುದ್ಧವಲ್ಲ. ಬದಲಾಗಿ ಮಾನವೀಯತೆಯ ವಿರುದ್ಧವಾದ ಯುದ್ಧ ಎಂದು ಹೇಳಿರುವ ಇಸ್ರೇಲ್, ಗಾಜಾ ಮೇಲೆ ತಾನು ನಡೆಸುತ್ತಿರುವ ದಾಳಿಯನ್ನು ಸಮರ್ಥಿಸಿಕೊಂಡಂತೆ, ತನ್ನ ಮೇಲಿನ ದಾಳಿಯನ್ನು ವಿವರಿಸಿದೆ. ದಾಳಿ ನಡೆಸಿದ ಉಗ್ರರು ಧರಿಸಿದ್ದ ಬಾಡಿ ಕ್ಯಾಮೆರಾಗಳಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಅವರು ಹತ್ಯೆಯಾದ ಬಳಿಕ ಆ ವಿಡಿಯೋಗಳು ಇಸ್ರೇಲ್ ಸೇನೆ ಕೈ ಸೇರಿದೆ.
ನಮ್ಮ ನ್ಯೂಕ್ಲಿಯರ್ ಬಾಂಬ್ ಮುಸ್ಲಿಮರ ರಕ್ಷಣೆಗೆ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಪಾಕಿಸ್ತಾನ!
ಹಮಾಸ್ ದಾಳಿ ಸುಳಿವು ಪತ್ತೆ ವೈಫಲ್ಯಕ್ಕೆ ಹೊಣೆ ಹೊತ್ತ ಐಎಸ್‌ಎ ಮುಖ್ಯಸ್ಥ
ಟೆಲ್ ಅವಿವ್: 1300ಕ್ಕೂ ಹೆಚ್ಚು ಇಸ್ರೇಲಿಗಳನ್ನು ಬಲಿಪಡೆದ ಹಮಾಸ್ ಉಗ್ರ ದಾಳಿಯ ಗುಪ್ತಚರ ಮಾಹಿತಿ ಸಂಗ್ರಹಿಸಲು ವಿಫಲವಾದ ಹೊಣೆಯನ್ನು ತಾವು ಹೊರುವುದಾಗಿ ಇಸ್ರೇಲ್ ಆಂತರಿಕ ಭದ್ರತಾ ಆಯೋಗದ ಮುಖ್ಯಸ್ಥ ರೋನೆಲ್ ಬಾರ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು,‘ನಾವು ಅಪಾಯದ ಎಚ್ಚರಿಕೆಯನ್ನು ನೀಡುವಲ್ಲಿ ವಿಫಲರಾದೆವು. ಅದರ ಪರಿಣಾಮವಾಗಿ 1300 ಜನರು ಬಲಿಯಾಗಿ 10 ಸಿಬ್ಬಂದಿಯನ್ನು ನಾವು ಕಳೆದುಕೊಳ್ಳಬೇಕಾಯಿತು. ಜೊತೆಗೆ ಹಲವು ಜನ ಗಾಯಗೊಳ್ಳಬೇಕಾಯಿತು. ಹಾಗಾಗಿ ಇದರ ಹೊಣೆಯನ್ನು ಭದ್ರತಾ ಪಡೆಯ ಮುಖ್ಯಸ್ಥನಾಗಿ ನಾನೇ ವಹಿಸಿಕೊಳ್ಳಲಿದ್ದೇನೆ. ಆದರೆ ಒಬ್ಬ ಹಮಾಸ್ ಉಗ್ರನನ್ನು ಬಿಡುವುದಿಲ್ಲ ಎಂದು ಹೇಳಿದರು.
ಹಮಾಸ್ ಉಗ್ರರಿಂದ ಹತ್ಯೆಯಾದ ಮಗಳು: ಫೋನ್, ಆ್ಯಪಲ್ ವಾಚ್ ಬಳಸಿ ಶವ ಪತ್ತೆಹಚ್ಚಿದ ತಂದೆ
ಭೂದಾಳಿ ಎದುರಿಸಲು ನಾವು ಸಿದ್ಧ: ಹಮಾಸ್ ಘೋಷಣೆ
ಗಾಜಾ಼: ಇಸ್ರೇಲ್ ಭೂದಾಳಿ ನಡೆಸಿ ಗಾಜಾ಼ ಪಟ್ಟಿಯನ್ನು ಆಕ್ರಮಿಸಲು ಬಂದರೆ ನಾವು ಸರ್ವ ರೀತಿಯಲ್ಲೂ ತಿರುಗೇಟು ನೀಡಲು ಸಜ್ಜಾಗಿದ್ದು, ಈ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಹಮಾಸ್ ಉಗ್ರರ ನಾಯಕ ಅಬು ಒಬೀದೇ ಹೇಳಿದ್ದಾನೆ. ದೂರದರ್ಶನದ ಮೂಲಕ ಸಂದೇಶ ನೀಡಿರುವ ಅಬು, ‘ಇಸ್ರೇಲ್ ಭೂದಾಳಿ ನಡೆಸುತ್ತೇವೆಂದು ಹೇಳಿ ಒಂದು ವಾರ ಕಳೆಯುತ್ತಾ ಬಂದರೂ ದಾಳಿ ಮಾಡಿಲ್ಲ. ಯಾವುದೇ ಸಂದರ್ಭದಲ್ಲಿ ದಾಳಿ ಮಾಡಿದರೂ ಅವರನ್ನು ಎದುರಿಸಲು ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ. ಅಲ್ಲದೇ ತಾವು ಇಸ್ರೇಲ್‌ನ 200 ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದೇವೆಂದು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ’ ಎಂದು ತಿಳಿಸಿದ್ದಾನೆ. ಈ ನಡುವೆ ಹಮಾಸ್ ಉಗ್ರರು ಒತ್ತೆಯಾಳಾಗಿ ಇಟ್ಟುಕೊಂಡಿರುವವರಲ್ಲಿ 199 ಮಂದಿಯನ್ನು ಗುರುತಿಸಿದ್ದು, ಅವರ ಕುಟುಂಬಸ್ಥರಿಗೆ ವಾಸ್ತವದ ಅರಿವು ಮಾಡುತ್ತಿದ್ದೇವೆ ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗಾರಿ ತಿಳಿಸಿದ್ದಾರೆ.
ಸುಂದರಿ ಕೈಲಿ ಮಸಾಜ್ ಮಾಡಿಸಿಕೊಳ್ತಾ ಸಭೆಯಲ್ಲಿ ಭಾಗಿಯಾದ ಏರ್ ಏಷಿಯಾ ಸಿಇಒ: ನೆಟ್ಟಿಗರೇನಂದ್ರು ನೋಡಿ
ಇಂದು ಬೈಡೆನ್ ಇಸ್ರೇಲ್‌ಗೆ
ವಾಷಿಂಗ್ಟನ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷ ಬಿಗಡಾಯಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ಇಸ್ರೇಲಿಗೆ ಭೇಟಿ ನೀಡಲಿದ್ದಾರೆ. ‘ಅಧ್ಯಕ್ಷ ಜೋ ಬೈಡೆನ್ ಅವರು ಪ್ಯಾಲೆಸ್ತೀನಿಗಳ ಜತೆಗಿನ ಯುದ್ಧದಲ್ಲಿ ಇಸ್ರೇಲ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಬುಧವಾರ, ಅ.18 ರಂದು ಅಲ್ಲಿಗೆ ತೆರಳಲಿದ್ದಾರೆ. ಈ ವೇಳೆ ಇಸ್ರೇಲ್ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ಬೈಡನ್ ಅವರು ಶೃಂಗಸಭೆಗಾಗಿ ಜೋರ್ಡಾನ್, ಈಜಿಪ್ಟ್ ಮತ್ತು ಪ್ಯಾಲಿಸ್ತೀನಿನ ಅಧ್ಯಕ್ಷರ ಜೊತೆಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.