Asianet Suvarna News Asianet Suvarna News

ಈದ್ ದಿನವೇ ಹಮಾಸ್ ಮುಖ್ಯಸ್ಥನ ಮೂವರು ಪುತ್ರರ ಹತ್ಯೆ, ಇಸ್ಮಾಯಿಲ್ ಹನಿಯೆಹ್ ಪ್ರತಿಕ್ರಿಯೆ ವೈರಲ್!

ಈದ್ ಹಬ್ಬದ ದಿನವೇ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮೂವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿದೆ. ಈ ಮಾಹಿತಿಯನ್ನು ಪಡೆದ ಖುದ್ದು ಇಸ್ಮಾಯಿಲ್ ಹನಿಯೆಹ್ ಪ್ರತಿಕ್ರಿಯೆ ವೈರಲ್ ಆಗಿದೆ.

Hamas Chief Ismail Haniyeh 3 sons grandchildren killed by Israel Army reaction Goes viral ckm
Author
First Published Apr 11, 2024, 7:40 PM IST

ಪ್ಯಾಲೆಸ್ತಿನ್(ಏ.11) ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಮಾಸ್ ಉಗ್ರರು ಒತ್ತೆಯಾಳುಗಳಾಗಿಟ್ಟುಕೊಂಡಿರುವ ಇಸ್ರೇಲ್ ನಾಗರೀಕರ ಬಿಡುಗಡೆ ಸಂಪೂರ್ಣವಾಗಿಲ್ಲ. ಇದು ಇಸ್ರೇಲ್ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಹಮಾಸ್ ಉಗ್ರರನ್ನು ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಇದೀಗ ಉತ್ತರ ಗಾಜಾದ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್, ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮೂವರು ಪುತ್ರರು ಹಾಗೂ ಮೊಮ್ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಈದ್ ಹಬ್ಬದ ದಿನವೇ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ. ಈ ಮಾಹತಿಯನ್ನು ಇಸ್ಮಾಯಿಲ್ ಆಪ್ತರು ಪೋನ್ ಮೂಲಕ ನೀಡಿದ್ದಾರೆ. ಈ ವೇಳೆ ವಿಚಲಿತನಾಗದ ಇಸ್ಮಾಯಿಲ್ ಪ್ರತಿಕ್ರಿಯೆ ವಿಡಿಯೋ ವೈರಲ್ ಆಗಿದೆ.

ಇಸ್ಮಾಯಿಲ್ ಪುತ್ರರಾದ ಹಜೀಮ್, ಅಮೀರ್ ಹಾಗೂ ಮೊಹಮ್ಮದ್ ಹಾಗೂ ಮೊಮ್ಮಕ್ಕಳು ಇಸ್ರೇಲ್ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ಇಸ್ರೇಲ್ ದಾಳಿಯಿಂದ ಗಾಯಗೊಂಡಿರುವ ಪ್ಯಾಲಸ್ತಿನ್ ಆರೋಗ್ಯ ವಿಚಾರಿಸಲು ಇಸ್ಮಾಯಿಲ್ ಹನಿಯೆಹ್ ಆಸ್ಪತ್ರೆ ತೆರಳಿದ್ದರು. ಈ ವೇಳೆ ಇಸ್ಮಾಯಿಲ್ ಆಪ್ತರು ಫೋನ್ ಮೂಲಕ ಬಂದಿರುವ ಇಸ್ರೇಲ್ ದಾಳಿಯ ಮಾಹಿತಿಯನ್ನು ಕೇಳಿಸಿದ್ದಾರೆ. 

ಯಹೂದಿಗಳ ಭೂಮಿ ಧ್ವಂಸ ಮಾಡಲು ಹೊರಟ ಹಮಾಸ್‌, 'ನಿರ್ನಾಮ ಮಾಡ್ತೀವಿ..' ಎಂದು ಪ್ರತಿಜ್ಞೆ ಮಾಡಿದ ಇಸ್ರೇಲ್‌!

ಉತ್ತರ ಗಾಜಾ ದಾಳಿಯಲ್ಲಿ ಇಸ್ಮಾಯಿಲ್ ಮೂವರು ಪುತ್ರರು ಹತ್ಯೆಯಾಗಿದ್ದಾರೆ. ಇದರ ಜೊತೆಗೆ ಮೊಮ್ಮಕ್ಕಳು ಹತ್ಯೆಯಾಗಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಕೇಳಿಸಿಕೊಂಡ ಇಸ್ಮಾಯಿಲ್ ಮುಖದಲ್ಲಿ ಒಂದು ಚೂರು ಬದಲಾವಣೆಯಾಗಿಲ್ಲ. ದೇವರು ಆತ್ಮಗಳಿಗೆ ಸದ್ಗತಿ ನೀಡಲಿ ಎಂದು ಹೇಳಿ ಮುಂದಕ್ಕೆ ತೆರಳಿದ್ದಾರೆ. ತನ್ನ ಪುತ್ರರು, ಮೊಮ್ಮಕ್ಕಳೇ ಮೃತಪಟ್ಟರೂ ಮುಖಭಾವದಲ್ಲಾಗಲಿ, ಯಾವುದೇ ರೀತಿಯಲ್ಲಾಗಲಿ ಬದಲಾವಣೆ, ಆಕ್ರೋಶ, ದುಃಖ ಕಾಣಲಿಲ್ಲ. ಈ ಪ್ರತಿಕ್ರಿಯೆ ವಿಡಿಯೋ ಇದೀಗ ವೈರಲ್ ಆಗಿದೆ. 

 

 

ಖತಾರ್‌ನಲ್ಲಿ ನೆಲೆಸಿರುವ ಇಸ್ಮಾಯಿಲ್ ಹನಿಯೆಹ್ ತನ್ನ ದೇಶದ ಜನರನ್ನು ಯುದ್ಧಕ್ಕೆ ಬಲಿಕೊಟ್ಟಿದ್ದಾರೆ. ಈಗಾಗಲೇ ಅಕ್ಟೋಬರ್ 7ರ ಬಳಿಕ ಇಸ್ರೇಲ್ ಆರಂಭಿಸಿದ ದಾಳಿಯಲ್ಲಿ ಇಸ್ಮಾಯಿಲ್ ಹನಿಯೆಹ್ ಕುಟುಂಬದ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಒತ್ತೆಯಾಳುಗಳ ಬಿಡುಗಡೆ ಕುರಿತು ಯಾವುದೇ ಮಾತುಕತೆಗೆ ಹಮಾಸ್ ಒಪ್ಪಿಲ್ಲ.

ಇಸ್ರೇಲ್‌ ಸರ್ಕಾರದ ಜೊತೆ ನಿಂತ ವಿರೋಧ ಪಕ್ಷ, 'ಟೀಕಿಸುವ ಸಮಯವಲ್ಲ, ಎಮರ್ಜೆನ್ಸಿ ಸರ್ಕಾರ ರಚಿಸಿ' ಎಂದ ಲಾಪಿಡ್‌!

ಈ ಭೀಕರ ಯುದ್ಧದಲ್ಲಿ 10 ಸಾವಿರಕ್ಕೂ ಹೆಚ್ಚು ರಾಕೆಟ್‌ ಬಳಸಿ ಉಭಯ ಬಣಗಳು ದಾಳಿ ನಡೆಸಿದ್ದರೆ, ದಾಳಿ-ಪ್ರತಿದಾಳಿಯಲ್ಲಿ 35 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.ಯುದ್ಧದಲ್ಲಿನ ಸಾವು- ನೋವಿನ ಕುರಿತು ಉಭಯ ಬಣಗಳು ಅತ್ಯಂತ ನಿಖರ ಮಾಹಿತಿ ಬಹಿರಂಗಪಡಿಸಿಲ್ಲವಾದ ಕಾರಣ ಗಾಯಾಳುಗಳ ಸಂಖ್ಯೆ ಹಲವು ಸಾವಿರ ದಾಟಿರಬಹುದು.
 

Follow Us:
Download App:
  • android
  • ios