Asianet Suvarna News Asianet Suvarna News

'ನಾನು ಬರ್ತೀನಿ ನನ್ನಪತ್ನಿ ಮಕ್ಕಳ ಬಿಟ್ಟುಬಿಡಿ': ಹೆಂಡತಿ 2 ಮಕ್ಕಳನ್ನು ಅಪಹರಿಸಿರುವ ಹಮಾಸ್ ಉಗ್ರರು ಬಳಿ ತಂದೆ ಗೋಳಾಟ!

ಏಕಾಏಕಿ ಇಸ್ರೇಲ್‌ ಮೇಲೆ ಕ್ರೂರ ದಾಳಿ ಮಾಡಿದ ಪ್ಯಾಲೆಸ್ತೀನ್‌ ಉಗ್ರರು ಅಲ್ಲಿನ ಅನೇಕ ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಹೀಗೆ ಉಗ್ರರ ಸೆರೆಯಲ್ಲಿರುವ ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಂದೆಯೋರ್ವ ತನ್ನ ಅಳಲು ತೋಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

hamas attacked israel Israeli man begs Hamas for familys safe return after rav
Author
First Published Oct 9, 2023, 11:36 PM IST

ಜೆರುಸಲೇಂ (ಅ.9): ಏಕಾಏಕಿ ಇಸ್ರೇಲ್‌ ಮೇಲೆ ಕ್ರೂರ ದಾಳಿ ಮಾಡಿದ ಪ್ಯಾಲೆಸ್ತೀನ್‌ ಉಗ್ರರು ಅಲ್ಲಿನ ಅನೇಕ ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿಕೊಂಡು ಹೋಗಿ, ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಹೀಗೆ ಉಗ್ರರ ಸೆರೆಯಲ್ಲಿರುವ ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ರಕ್ಷಣೆಗಾಗಿ ತಂದೆಯೋರ್ವ ತನ್ನ ಅಳಲು ತೋಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಡೊರೋನ್‌ ಆಶರ್‌ ಎಂಬ ಮಹಿಳೆಯು ತನ್ನ 5 ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗಾಜಾ ಗಡಿ ಸಮೀಪವಿರುವ ನಿರ್‌ ಒಜ್‌ ಗ್ರಾಮಕ್ಕೆ ತನ್ನ ಅಜ್ಜಿಯನ್ನು ನೋಡಲು ಹೋಗಿದ್ದಳು. ಇದೇ ವೇಳೆ ಅಲ್ಲಿ ದಾಳಿ ನಡೆಸಿದ ಹಮಾಸ್‌ ಉಗ್ರರು ಮನೆಯಲ್ಲಿದ್ದ ಎಲ್ಲರನ್ನೂ ಅಪಹರಿಸಿಕೊಂಡು ಹೋಗಿದ್ದಾರೆ.

ಯಹೂದಿಗಳ ಹಬ್ಬದ ದಿನವೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಲು ಇದೆ ಕಾರಣ!

ಉಗ್ರರು ಮನೆಗೆ ನುಗ್ಗಿದಾಗ ತನ್ನ ಪತಿ ಆಶರ್‌ಗೆ ಕರೆ ಮಾಡಿದ್ದ ಡೊರೋನ್‌ ‘ಮನೆಯಲ್ಲಿ ಉಗ್ರರು ನುಗ್ಗಿದ್ದಾರೆ’ ಎಂದು ಭಯಭೀತಳಾಗಿ ತಿಳಿಸಿದ್ದಾಳೆ. ಅದಾದ ಬಳಿಕ ಫೋನ್ ಸಂಪರ್ಕ ಕಡಿತಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಅನೇಕ ಒತ್ತೆಯಾಳುಗಳ ವಿಡಿಯೋದಲ್ಲಿ ಆಶರ್‌ ತನ್ನ ಪತ್ನಿ ಮತ್ತು ಮಕ್ಕಳನ್ನು ನೋಡಿ ಕಂಗಾಲಾಗಿದ್ದಾರೆ.

ಬಳಿಕ ‘ನನ್ನ ಮಕ್ಕಳು ತುಂಬಾ ಚಿಕ್ಕವರು. ದಯವಿಟ್ಟು ನನ್ನ ಮಕ್ಕಳು ಮತ್ತು ಪತ್ನಿಯ ನೋಯಿಸಬೇಡಿ ಅವರನ್ನೇನೂ ಮಾಡಬೇಡಿ. ಬೇಕಾದರೆ ನಾನು ನಿಮ್ಮ ಬಳಿ ಬರುತ್ತೇನೆ’ ಎಂದು ಬೇಡಿಕೊಂಡಿದ್ದಾರೆ. ಅಲ್ಲದೇ ತಾವು ಕಳೆದ 15 ಗಂಟೆಗಳಿಂದ ಊಟ ನಿದ್ದೆ ಇಲ್ಲದೇ ವಾಸಿಸುತ್ತಿದ್ದೇನೆ. ನನ್ ಹೆಂಡತಿ ಮಕ್ಕಳು ಹೇಗಿದ್ದಾರೆ, ಅವರಿಗೇನಾಯಿತು ಎಂಬುದೂ ನನಗೆ ತಿಳಿದಿಲ್ಲ’ ಎಂದು ಕಂಬನಿ ಮಿಡಿದಿದ್ದಾರೆ.

ಹಮಾಸ್ ಉಗ್ರರು ದಾಳಿ ಮಾಡಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತಾರು ಜನರನ್ನು ಅಪಹರಿಸಿದ್ದರು. ಇಸ್ರೇಲ್ ಗಡಿಯಿಂದ ಪ್ಯಾಲೆಸ್ತೇನ್ ಗಡಿಯತ್ತ ಎಳೆದುಕೊಂಡು ಹೋಗಿದ್ದ ಉಗ್ರರು. ಈ ಭೀಕರ ದಾಳಿಯಲ್ಲಿ ನೂರಾರು ಅಮಾಯಕರನ್ನು ಕೊಂದಿರುವ ಉಗ್ರು.

ಹಮಾಸ್‌ನಿಂದ ಗುರಿಯಾದ ಸ್ಥಳಗಳಲ್ಲಿ ಅಂದು ಶಾಂತಿ ಹಬ್ಬವಿತ್ತು, ಅಲ್ಲಿ ಅವರು ನೂರಾರು ಇಸ್ರೇಲಿಗರು ಭಾಗಿಯಾಗಿದ್ದ ವೇಳೆ ನಡೆದ ದಾಳಿಯಲ್ಲಿ ಡಜನ್‌ಗಟ್ಟಲೇ ಜನರನ್ನು ಕೊಂದರು ಮತ್ತು ಮಹಿಳೆಯರು, ಮಕ್ಕಳನ್ನು ಅಪಹರಿಸಿದರು, ಒಬ್ಬ ಮಹಿಳೆಯ ತಂದೆ ತನ್ನ ಮಗಳು ಕಣ್ಣಮುಂದೆಯೇ ಜೀವಕ್ಕಾಗಿ ಬೇಡಿಕೊಳ್ಳುವುದನ್ನು ನೋಡಿ ಅಳುತ್ತಾ ಉಳಿದುಕೊಂಡರು.

ಹಮಾಸ್ ಉಗ್ರ ದಾಳಿ ಬೆಂಬಲಿಸಿ ಯುಪಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೆರವಣಿಗೆ!

ಹೃದಯವಿದ್ರಾವಕ ತುಣುಕನ್ನು ನೋವಾ ಅರ್ಗಾಮಣಿ 'ನನ್ನನ್ನು ಕೊಲ್ಲಬೇಡಿ! ಇಲ್ಲ, ಇಲ್ಲ, ಇಲ್ಲ' ಎಂದು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಆಕೆಯನ್ನು ಬಲವಂತವಾಗಿ ಮೋಟಾರ್‌ಸೈಕಲ್‌ನ ಹಿಂಭಾಗಕ್ಕೆ ಕೂಡಿಸಿಕೊಂಡ ಉಗ್ರರು ಆಕೆಯ ಗೆಳೆಯನನ್ನು ಬಲವಂತವಾಗಿ ಗನ್‌ಪಾಯಿಂಟ್‌ನಿಂದ ದೂರಕ್ಕೆ ತಳ್ಳಿದ್ದ ಉಗ್ರರು.

Follow Us:
Download App:
  • android
  • ios