ನವದೆಹಲಿ (ಫೆ.20): ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್‌ಕಿಟ್‌ ಸೃಷ್ಟಿಪ್ರಕರಣದಲ್ಲಿ ಬಂಧಿತಳಾಗಿರುವ ಬೆಂಗಳೂರಿನ ಪರಿಸರವಾದಿ ದಿಶಾ ರವಿಗೆ ಸ್ವೀಡನ್‌ ಪರಿಸರವಾದಿ ಗ್ರೆಟಾ ಥನ್‌ಬರ್ಗ್‌ ಬೆಂಬಲ ವ್ಯಕ್ತಪಡಿಸಿದ್ದಾಳೆ.

ಶುಕ್ರವಾರ ಟ್ವೀಟ್‌ ಮಾಡಿರುವ ಗ್ರೆಟಾ, ‘ವಾಕ್‌ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆ ಹಕ್ಕುಗಳು ರಾಜಿ ಮಾಡಿಕೊಳ್ಳಲಾಗದ ಮಾನವ ಹಕ್ಕುಗಳು. ಯಾವುದೇ ಪ್ರಜಾಸತ್ತೆಯ ಮೂಲಭೂತ ಅಂಗಗಳು ಇವು. 

ಟೂಲ್‌ಕಿಟ್ ಪ್ರಕರಣ: ದಿಶಾ ರವಿಗೆ ಬೇಲ್ ಇಲ್ಲ, ಮತ್ತೆ ಮೂರು ದಿನ ನ್ಯಾಯಾಂಗ ಬಂಧನ! .

ದಿಶಾ ರವಿ ಜತೆ ನಿಲ್ಲುವೆ’ ಎಂದು ಹೇಳಿದ್ದಾಳೆ. ಈ ಟೂಲ್‌ಕಿಟ್‌ನಲ್ಲಿ ಭಾರತ ವಿರೋಧಿ ಅಂಶಗಳಿದ್ದು, ಇದರ ಗ್ರೆಟಾ ಜತೆಗೂಡಿ ದಿಶಾ ಇದನ್ನು ಸಿದ್ಧಪಡಿಸಿದ್ದಳು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಗ್ರೆಟಾಳ ಈ ಬಹಿರಂಗ ಬೆಂಬಲಕ್ಕೆ ಮಹತ್ವ ಬಂದಿದೆ.