Asianet Suvarna News Asianet Suvarna News

ಆಟವಾಡುತ್ತಿದ್ದ ಬಾಲಕಿ ಹೊತ್ತೊಯ್ಯಲು ಮುಂದಾದ ಗಿಡುಗ, ಜುಮ್ಮೆನಿಸುವ ಘಟನೆ ಸೆರೆ!

ಆಟವಾಡುತ್ತಿದ್ದ 8 ವರ್ಷದ ಬಾಲಕಿ ಮೇಲೆ ಒಂದೇ ಸಮನೆ ದೈತ್ಯ ಗಾತ್ರದ ಗಿಡುಗ ಒಂದು ಎರಗಿದೆ. ಕಾಲುಗಳಿಂದ ಬಾಲಕಿ ಹಿಡಿದ ಗಿಡುಗ ಹಾರಲು ಮುಂದಾಗಿದೆ. ಮೈ ಜುಮ್ಮೆನಿಸುವ ಘಟನೆ ದೃಶ್ಯಗಳು ಸೆರೆಯಾಗಿದೆ.
 

Golden eagle try to fly offs with 8 year old girl Dangerous moment captured ckm
Author
First Published Aug 20, 2024, 8:11 PM IST | Last Updated Aug 20, 2024, 8:11 PM IST

ದೈತ್ಯ ಗಾತ್ರದ ಗಿಡುಗ ಅಥವಾ ಗೋಲ್ಡನ್ ಈಗಲ್ ಎಂದೇ ಜನಪ್ರಿಯಗೊಂಡಿರುವ ಪಕ್ಷಿ ಅಳಿವಿನಂಚಿನಲ್ಲರುವ ಪ್ರಭೇಧ. ಆದರೆ ಈ ಗಿಡುಗ ಜಿಂಕೆ, ತೋಳ ಸೇರಿದಂತೆ ದೊಡ್ಡ ಗಾತ್ರದ ಪ್ರಾಣಿಗಳನ್ನೇ ಹೊತ್ತೊಯ್ದು ತನ್ನ ಆಹಾರವಾಗಿಸುತ್ತದೆ. ಇನ್ನು ಈ ಗೋಲ್ಡನ್ ಗಿಡುಗಳಿರುವ ಪ್ರದೇಶದಲ್ಲಿ ಮಕ್ಕಳು ಮಾತ್ರವಲ್ಲ ವಯಸ್ಕರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದೇ ಗೋಲ್ಡನ್ ಗಿಡುಗ ದಾಳಿಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಆದರೆ ಮೈಜುಮ್ಮೆನಿಸುವ ವಿಡಿಯೋ ಆತಂಕ ಹೆಚ್ಚಿಸಿರುವುದು ಸುಳ್ಳಲ್ಲ.

ಬೆಟ್ಟ ಗುಡ್ಡಗಳ ತಪ್ಪಲಿನ ಬಯಲು ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಹಲವರಿದ್ದಾರೆ. ಮಕ್ಕಳು ಆಟವಾಡುತ್ತಿದ್ದರೆ, ಮತ್ತೆ ಕೆಲವರು ಕುದುರೆ ಸವಾರಿ ಮಾಡುತ್ತಿದ್ದಾರೆ. 8 ವರ್ಷದ ಬಾಲಕಿಯೂ ಇದೇ ಸ್ಥಳದಲ್ಲಿ ಆಟವಾಡುತ್ತಿದ್ದಳು. ಇದೇ ವೇಳೆ ಆಗಸದಿದಂ ವೇಗವಾಗಿ ಗೋಲ್ಡನ್ ಈಗಲ್ ಹಾರಿ ಬಂದಿದೆ. ಬಾಲಕಿ ಆಟವಾಡುತ್ತಿದ್ದಲ್ಲಿಗೆ ಬರುತ್ತಿದ್ದಂತೆ ಓಡಲು ಆರಂಭಿಸಿದ್ದಳೆ. ಆದರೆ ಬಾಲಕಿಯ ಕುತ್ತಿಗೆಯನ್ನೇ ಗಿಡುಗ ಹಿಡಿದುಕೊಂಡಿದೆ.

ಶೌರ್ಯ ಧೈರ್ಯಕ್ಕೆ ಹೆಸರಾದ ಹದ್ದುಗಳ ರೋಚಕ ವೀಡಿಯೋ ಸಖತ್ ವೈರಲ್

ಬಲಿಷ್ಠ ಉಗುರಿನ ಗಿಡುಗನ ದಾಳಿಯಿಂದ ಬಾಲಕಿ ನೆಲಕ್ಕುರುಳಿದ್ದಾಳೆ. ಆದರೆ ಹಿಡಿದ ಪಟ್ಟನ್ನು ಗಿಡುಗ ಸಡಿಲಿಸಿಲ್ಲ. ಬಿದ್ದ ಬಾಲಕಿಯನ್ನು ಎತ್ತಿಕೊಂಡು ಹಾರಲು ಮುಂದಾಗುತ್ತಿದ್ದಂತೆ ಕುದುರೆ ಸವಾರಿ ಮಾಡುತ್ತಿದ ವ್ಯಕ್ತಿಯೊಬ್ಬ ಓಡೋಡಿ ಬಂದು ಗಿಡುಗದ ಕಾಲು ಹಿಡಿದು ಬಿಡಿಸಲು ಯತ್ನಿಸಿದ್ದಾನೆ.

 

 

ಹಲವು ಪ್ರಯತ್ನದ ಬಳಿಕ ಗಿಡುಗವನ್ನು ಸೆರೆ ಹಿಡಿದು ಬಾಲಕಿಯನ್ನು ಬಿಡಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಗಿಡುಗವನ್ನು ಸೆರೆ ಹಿಡಿದ್ದಾರೆ. ಬಾಲಕಿ ಬೀಳದೇ ಇದ್ದರೆ ಗಿಡುಗ ಎತ್ತಿಕೊಂಡು ಹಾರಿ ಹೋಗುತ್ತಿತ್ತು. ಆದರೆ ಬಾಲಕಿ ಸಮಯ ಪ್ರಜ್ಞೆ ಹಾಗೂ ಪಕ್ಕದಲ್ಲಿದ್ದವರ ನೆರವಿನಿಂಂದ ಬಾಲಕಿ ಬದು ಉಳಿದಿದ್ದಾಳೆ. 

ಗೋಲ್ಡನ್ ಈಗಲ್ ಹೆಚ್ಚಾಗಿ ಭೂಮಿ ಮಧ್ಯಭಾಗ ಈಕ್ವೇಟರ್‌ನ ಉತ್ತರ ಹೆಮ್ಸಿಪೇರ್ ಬಳಿ ಕಾಣಸಿಗುತ್ತದೆ. ಇನ್ನು ಏಷ್ಯಾದಲ್ಲೂ ಗೋಲ್ಡನ್ ಈಗಲ್ ವಾಸವಿದೆ. ಪ್ರಮುಖವಾಗಿ ಭಾರತದ ಹಿಮಾಲಯ, ಕಾಶ್ಮೀರ, ಭೂತಾನ್, ಬಲೂಚಿಸ್ತಾನ್‌ಗಳಲ್ಲೂ ಈ ಹಕ್ಕಿ ಕಾಣಸಿಗುತ್ತದೆ. ಜನವಸತಿ ಪ್ರದೇಶಗಳಿಂದ ಈ ಗೋಲ್ಡನ್ ಈಗಲ್ ದೂರವಿರುತ್ತದೆ. ಪರ್ವತ ಪ್ರದೇಶಗಳ ಕಡೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಮುಖವಾಗಿ ದೊಡ್ಡ ಪ್ರಾಣಿಗಳನ್ನೇ ಈ ಗೋಲ್ಡನ್ ಗಿಡುಗ ಹೊತ್ತೊಯ್ಯುತ್ತದೆ.

ಅಬ್ಬಾ! ದೊಡ್ಡ ನರಿಯನ್ನೇ ಬೇಟೆಯಾಡಿ ಎತ್ತಿಕೊಂಡು ಹಾರಿಹೋದ ಹದ್ದು: ವಿಡಿಯೋ ವೈರಲ್

Latest Videos
Follow Us:
Download App:
  • android
  • ios