ಹದ್ದುಗಳು ಶತಮಾನಗಳ ಹಿಂದಿನಿಂದಲೂ ಧೈರ್ಯ ಶೌರ್ಯಕ್ಕೆ ಹೆಸರುವಾಸಿಯಾಗಿವೆ. ಯಾವುದೇ ಸ್ಥಿತಿಗೂ ಬೆದರದ ಈ ಹದ್ದು ಬಿರುಸಾಗಿ ಬೀಳುವ ಹಿಮಕ್ಕೆ ಮೈಯೊಡ್ಡಿ ಮಲಗಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆ ಹದ್ದುಗಳ ಹಲವು ವೀಡಿಯೋ ಇಲ್ಲಿದೆ ನೋಡಿ
ಹದ್ದುಗಳು ಶತಮಾನಗಳ ಹಿಂದಿನಿಂದಲೂ ಧೈರ್ಯ ಶೌರ್ಯಕ್ಕೆ ಹೆಸರುವಾಸಿಯಾಗಿವೆ. ಇವುಗಳನ್ನು ಸೌಂದರ್ಯ ಧೈರ್ಯ ಹೆಮ್ಮೆ ನಿರ್ಣಯ ಆಶೀರ್ವಾದ ಸಂಕೇತವಾಗಿಯೂ ಜನ ಗುರುತಿಸುತ್ತಾರೆ. ಇಂತಹ ಹದ್ದುಗಳು ನಾಯಕತ್ವದ ಗುಣವನ್ನು ಹೊಂದಿರುತ್ತವೆ. ತುಂಬ ಸ್ಪಷ್ಟವಾದ ದೂರದೃಷ್ಟಿಯನ್ನು ಈ ಹದ್ದುಗಳು ಹೊಂದಿದ್ದು ಎಂತಹ ಸಂದರ್ಭದಲ್ಲೂ ಇವುಗಳು ಬೆದರುವುದಿಲ್ಲ, ಬಹಳ ಸಧೃಢವಾಗಿದ್ದು ಆಕಾಶದ ಅತ್ತಿ ಎತ್ತರದಲ್ಲಿ ಹಾರಾಡಬಲ್ಲವೂ ತಮ್ಮ ಮರಿಗಳನ್ನು ಬಹಳ ಜೋಪಾನವಾಗಿ ಸಾಕಬಲ್ಲವು. ಸ್ವಾತಂತ್ರದ ಸಂಕೇತವಾಗಿರುವ ಈ ಹದ್ದು ಗಳನ್ನು ಭಾರತೀಯ ವಾಯುಸೇನೆಯ ಲೋಗೋದಲ್ಲಿಯೂ ನಾವು ಕಾಣಬಹುದಾಗಿದೆ. ಯಾವುದೇ ಸ್ಥಿತಿಗೂ ಬೆದರದ ಈ ಹದ್ದು ಬಿರುಸಾಗಿ ಬೀಳುವ ಹಿಮಕ್ಕೆ ಮೈಯೊಡ್ಡಿ ಮಲಗಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟ್ಟರ್‌ನಲ್ಲಿ @TheFigen_ ಎಂಬ ಖಾತೆಯಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 10 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಹಿಮ ಬೀಳುವ ಪ್ರದೇಶದಲ್ಲಿ ಈ ಹದ್ದು ಕುಳಿತಿದೆ. ವೀಡಿಯೋದಲ್ಲಿ ಕಾಣಿಸುವಂತೆ ಹಿಮ ಬಿರುಸಾಗಿ ಬೀಳುತ್ತಿದ್ದು, ರೆಕ್ಕೆಗಳ ಮಡಚಿ ಕುಳಿತ ಹಕ್ಕಿಯ ಮೇಲೆ ಈಗಾಗಲೇ 2 ರಿಂದ ಮೂರು ಇಂಚು ಹಿಮ ಬಿದ್ದಿದೆ. ಆದರೂ ಈ ಹದ್ದು ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಒಮ್ಮೆ ಎದ್ದು ತನ್ನ ಮೈಮೇಲೆ ಬಿದ್ದ ಹಿಮವನ್ನೆಲ್ಲಾ ಕೊಡವಿ ಮತ್ತೆ ಮರಳಿ ಅದೇ ಜಾಗದಲ್ಲಿ ಮುದುಡಿ ಕುಳಿತಿದೆ.
ವೀಡಿಯೋ ಪೋಸ್ಟ್ ಮಾಡಿದವರು ಹದ್ದು ಎಂತಹದ್ದೇ ಪರಿಸ್ಥಿತಿಯಲ್ಲೂ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಹಾಗೂ ಬದುಕುತ್ತದೆ ಎಂದು ಬರೆದಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಇದೇ ರೀತಿ ಹದ್ದುಗಳ ಹಲವು ಸುಂದರ ಮನಮೋಹಕ ವೀಡಿಯೋಗಳನ್ನು ಕಾಮೆಂಟ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹದ್ದುಗಳ ಈ ವೀಡಿಯೋ ಒಂದಕ್ಕಿಂತ ಒಂದು ಸುಂದರವಾಗಿದೆ
ನೋಡುಗರೊಬ್ಬರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ ವೀಡಿಯೋವೊಂದರಲ್ಲಿ ಹದ್ದೊಂದು ಜಿಂಕೆಯನ್ನೇ ಹೊತ್ತೊಯ್ಯುವ ದೃಶ್ಯವಿದೆ. ತನ್ನ ಬೇಟೆಯ ಮೇಲೆ ನಿಖರವಾದ ಗುರಿ ಇಡುವ ಹದ್ದುಗಳು ಪಕ್ಷಿಗಳಲ್ಲಿ ಅಸಾಧಾರಣ ಶಕ್ತಿ ಹಾಗೂ ಧೈರ್ಯವನ್ನು ಹೊಂದಿರು ಹಕ್ಕಿಗಳಾಗಿವೆ. ಹಾಗೆಯೇ ಇಲ್ಲಿ ತನಗಿಂತ ಭಾರವಾದ ಜಿಂಕೆಯನ್ನು ಹಾರಿಸಿಕೊಂಡು ಹೋಗಿ ಅರ್ಧದಲ್ಲಿ ಜಿಂಕೆಯನ್ನು ಕೈ ಬಿಟ್ಟ ದೃಶ್ಯವಿದೆ.
ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ಹದ್ದೊಂದು ಆಕಾಶದಿಂದ ಹಾರುತ್ತಾ ಬಂದು ಸಮುದ್ರದಲ್ಲಿದ್ದ ಮೀನನ್ನು ಕ್ಷಣದಲ್ಲಿ ಹೊತ್ತೊಯ್ಯುವ ದೃಶ್ಯವಿದೆ.
ಕೊನೆಯದಾಗಿ ಇರುವ ವೀಡಿಯೋ ಅತ್ಯಂತ ಮನಮೋಹಕ ಹಾಗೂ ಅಪರೂಪವಾಗಿದ್ದು, ಹದ್ದುಗಳೆರಡು ತಮ್ಮ ಕಾಲುಗಳಲ್ಲಿ ಪರಸ್ಪರ ಕಾಲುಗಳನ್ನು ಹಿಡಿದು ಒಂದಾದ ಮೇಲೊಂದು ಪಲ್ಟಿ ಹೊಡೆಯುತ್ತಾ ಆಕಾಶದಲ್ಲಿ ಮೋಜಿನಾಟವಾಡುತ್ತಿರುವ ದೃಶ್ಯ ಇದಾಗಿದೆ ಈ ಎಲ್ಲಾ ವೀಡಿಯೋಗಳು ನಿಮಗಾಗಿ