ನವದೆಹಲಿ[ಮಾ.16]: ಚೀನಾ ರೀತಿ ಏನಾದರೂ ಕೊರೋನಾ ವೈರಸ್‌ ಭಾರತದಲ್ಲೂ ವ್ಯಾಪಿಸಿದ್ದರೆ ದೇಶದಲ್ಲಿ ಈವರೆಗೆ ಕನಿಷ್ಠ 77,583 ಮಂದಿಗೆ ಸೋಂಕು ತಗುಲಬೇಕಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ.

"

ಚೀನಾದಲ್ಲಿ ಪ್ರತಿ 10 ಲಕ್ಷ ಜನರ ಪೈಕಿ ಸರಾಸರಿ 56 ಮಂದಿಯಲ್ಲಿ ಕೊರೋನಾ ಕಂಡುಬಂದಿದೆ. ಆದರೆ ಭಾರತದಲ್ಲಿ ಈ ಪ್ರಮಾಣ ಇನ್ನೂ 1ರ ಗಡಿಗೂ ಬಂದಿಲ್ಲ. ಚೀನಾದಷ್ಟುಜನರನ್ನು ವ್ಯಾಪಿಸಿದ್ದರೆ ಭಾರತದಲ್ಲಿ ಅನಾಹುತವಾಗಿಬಿಡುತ್ತಿತ್ತು ಎಂದು ಹೇಳಲಾಗಿದೆ.

ಕೊರೋನಾ ಅಟ್ಟಹಾಸಕ್ಕೆ ಜಗತ್ತೇ ತಲ್ಲಣ! ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6000 ಗಡಿ ದಾಟಿದ ಸಾವು

ವಿಶ್ವಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 6000ದ ಗಡಿ ದಾಟಿದ್ದು, 6036ಕ್ಕೇರಿಕೆಯಾಗಿದೆ. 1,59,844 ವ್ಯಕ್ತಿಗಳಲ್ಲಿ ಸೋಂಕು ಕಂಡುಬಂದಿದೆ. ಭಾನುವಾರ ಒಂದೇ ದಿನ ಇರಾನ್‌ನಲ್ಲಿ 113 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ ಆ ದೇಶದಲ್ಲಿ ಮೃತರ ಸಂಖ್ಯೆ 724ಕ್ಕೇರಿಕೆಯಾಗಿದೆ.

ಇದೇ ವೇಳೆ, ಸ್ಪೇನ್‌ನಲ್ಲಿ 105 ಮಂದಿ ಸಾವನ್ನಪ್ಪಿದ್ದು, ಬಲಿಯಾದವರ ಸಂಖ್ಯೆ 288ಕ್ಕೆ ತಲುಪಿದೆ. ಚೀನಾದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು, 3199 ಮಂದಿ ನಿಧನರಾಗಿದ್ದಾರೆ. ನಂತರದ ಸ್ಥಾನದಲ್ಲಿ 1907 ಸಾವುಗಳೊಂದಿಗೆ ಇಟಲಿ ಇದೆ.