ಮೂತ್ರಕೋಶದ ಸೋಂಕಿನಿಂದ ಆಸ್ಪತ್ರೆಗೆ ಬಂದಿದ್ದ ಮಹಿಳೆ ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್‌ ಟ್ಯುನಿಷಿಯಾದ 45 ವರ್ಷದ ಮಹಿಳೆಯ ದೇಹದಲ್ಲಿದ್ದ ಗ್ಲಾಸ್

ಮೂತ್ರನಾಳದ ಸೋಂಕು ಉಂಟಾಗಿದೆ ಎಂದು ಆಸ್ಪತ್ರೆಗೆ ಬಂದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ ಶಾಕ್ ಆಗಿತ್ತು. ಏಕೆಂದರೆ ಮಹಿಳೆ ಜನನಾಂಗದಲ್ಲಿ ಗ್ಲಾಸೊಂದು ಪತ್ತೆಯಾಗಿತ್ತು. ಟ್ಯುನಿಷಿಯಾದ 45 ವರ್ಷದ ಮಹಿಳೆಯೊಬ್ಬರು ಮೂತ್ರಕೋಶದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಒಂದು ವರ್ಷದಿಂದಲೂ ಆಕೆಗೆ ಶೀಘ್ರ ಮೂತ್ರ ಹಾಗೂ ಮೂತ್ರವನ್ನು ನಿಯಂತ್ರಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದಳು. ಅಲ್ಲದೇ ಮೂತ್ರ ತಪಾಸಣೆ ವೇಳೆ ಮೂತ್ರದಲ್ಲಿ ಬಿಳಿ ಹಾಗೂ ಕೆಂಪು ರಕ್ತ ಕಣಗಳಿರುವುದು ಪತ್ತೆಯಾಗಿತ್ತು. ಆದರೆ ಮೂತ್ರ ಸೋಂಕಾಗಿದ್ದರೆ ಇದು ಇರುವುದು ವಿಶಿಷ್ಟವಾಗಿದೆ. ಅಲ್ಲದೇ ಮೂತ್ರ ವಿಸರ್ಜನೆ ವೇಳೆ ರಕ್ತ ಬರುವುದೇ ಎಂಬುದರ ಬಗ್ಗೆ ಮಹಿಳೆ ತಿಳಿಸಿಲ್ಲ.

ನಂತರದಲ್ಲಿ ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಲಾಗಿದ್ದು, ಸ್ಕ್ಯಾನಿಂಗ್ ವರದಿ ನೋಡಿದ ವೈದ್ಯರಿಗೆ ಶಾಕ್ ಆಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಯೋನಿಯಲ್ಲಿಯೇ 8 ಸೆಂ.ಮೀ ಗಾತ್ರದ ಮೂತ್ರಕೋಶದಲ್ಲಿ ಗಾಜಿನ ಟಂಬ್ಲರ್ ಸಿಕ್ಕಿಹಾಕಿಕೊಂಡಿರುವುದನ್ನು ಕಂಡು ವೈದ್ಯರು ಆಘಾತಕ್ಕೊಳಗಾಗಿದ್ದರು. ಈ ಗ್ಲಾಸ್‌ ಅವಳ ಯೋನಿಯಲ್ಲಿ ಮೂತ್ರನಾಳದಲ್ಲಿ ಮೂತ್ರಕೋಶದ ಕಲ್ಲುಗಳ ಜೊತೆಗೆ ಇತ್ತು.

ವೆಸ್ಟರ್ನ್‌ ಟಾಯ್ಲೆಟ್‌, ಇಂಡಿಯನ್‌ ಶೈಲಿಯಲ್ಲಿ ಕುಳಿತವನ ಗುದದ್ವಾರಕ್ಕೆ 20 ಹೊಲಿಗೆ!

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಮಹಿಳೆಯು ಲೈಂಗಿಕ ಆನಂದಕ್ಕಾಗಿ ಕುಡಿಯುವ ಲೋಟವನ್ನು ಬಳಸಿದ್ದಳು ಇದು ಅಲ್ಲೇ ಸಿಲುಕಿಕೊಂಡು ಅನಾಹುತಕ್ಕೆ ಕಾರಣವಾಯಿತು ಎಂದು ವೈದ್ಯರು ಹೇಳಿದರು. ಈ ಪ್ರಕರಣವನ್ನು ನಂತರ ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ಪ್ರಕಟಿಸಲಾಯಿತು. ಮೆಡಿಕಲ್ ಜರ್ನಲ್‌ ಇಂತಹ ಪದಾರ್ಥಗಳನ್ನು 'ಇಂಟ್ರಾ-ವೆಸಿಕ್ಯುಲರ್ ವಿದೇಶಿ ಕಾಯಗಳು' ಎಂದು ವಿವರಿಸುತ್ತದೆ.ಲೈಂಗಿಕ ಅಥವಾ ಕಾಮ ಪ್ರಚೋದನೆಗೆ ಮೂತ್ರಕೋಶದಲ್ಲಿ ಅವುಗಳ ಬಳಕೆ ಮಾಡಲಾಗಿದೆ ಎಂದು ವರದಿ ಸೂಚಿಸುತ್ತದೆ.

ಗಾಜಿನ ಟಂಬ್ಲರ್ ತನ್ನೊಳಗೆ ಹೇಗೆ ಸಿಲುಕಿತು ಎಂಬುದನ್ನು ವೈದ್ಯಕೀಯ ತಂಡ ಮತ್ತು ಅವರ ವೈಯಕ್ತಿಕ ವೈದ್ಯಕೀಯ ತಜ್ಞರಿಗೆ ನಂತರ ಟ್ಯುನಿಷಿಯಾದ ಮಹಿಳೆ ಒಂದು ಮಾತುಕತೆಯಲ್ಲಿ ಬಹಿರಂಗಪಡಿಸಿದ್ದು, ಆಕೆ 4 ವರ್ಷಗಳ ಹಿಂದೆ ಗಾಜಿನ ಕಪ್ ಅನ್ನು ಅವರ ಮೂತ್ರನಾಳಕ್ಕೆ ಸೇರಿಸಲು ಸೆಕ್ಸ್ ಟಾಯ್ ಅನ್ನು ಬಳಸಿದ್ದರು ಮತ್ತು ಆ ಸಮಯದಲ್ಲಿ ಅದು ಅಂಟಿಕೊಂಡಿತ್ತು ಎಂದು ಹೇಳಿದ್ದಾಳೆ. ಅದು ಶೀಘ್ರದಲ್ಲೇ ಹೊರಬರುತ್ತದೆ ಎಂದು ಅವಳು ಭಾವಿಸಿದಳು ಆದರೆ ಏನಾಗುತ್ತಿದೆ ಎಂದು ಅವಳಿಗೆ ನಿಖರವಾಗಿ ತಿಳಿದಿರಲಿಲ್ಲ.

ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?

2019 ರಲ್ಲಿ ವ್ಯಕ್ತಿಯೊಬ್ಬರ ಗುದದ್ವಾರದ ಮೂಲಕ ಒಳ ಹೋಗಿದ್ದ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದರು.ನಗ​ರದ ಮಹಬೂಬ್‌ ನಗರ ಬಡಾ​ವಣೆ ನಿವಾಸಿಯೊಬ್ಬರ ಗುದದ್ವಾರದ ಮೂಲಕ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಯಾರೊ ಮೂರು ದಿನಗಳ ಹಿಂದೆ ಹಾಕಿದ್ದರು. ಇದರಿಂದ ಕರುಳಿನ ಭಾಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು. 

ಡಾ.ಎಸ್‌.ವಿ. ​ನಾ​ರಾ​ಯ​ಣ​ಸ್ವಾಮಿ ಅವ​ರು ಇರ್ಫಾನ್‌ ಷರೀಫ್‌ ಅವ​ರನ್ನು ತಪಾ​ಸಣೆಗೆ ಒಳ​ಪ​ಡಿ​ಸಿ​ದಾಗ ಗುದ​ದ್ವಾ​ರದ ಮೂಲಕ ಬಾಟಲ್‌ ಅನ್ನು ಹಾಕಿ​ರ​ಬೇ​ಕೆಂದು ಭಾವಿ​ಸಿ​ದ್ದರು. ಶಸ್ತ್ರ ಚಿಕಿ​ತ್ಸೆಗೂ ಮುನ್ನ ಹಿರಿಯ ವೈದ್ಯ​ರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆ​ದು​ಕೊಂಡಿ​ದ್ದ​ರು. ನಂತರ ಆಸ್ಪ​ತ್ರೆ​ಯಲ್ಲಿ ಭಾನುವಾರ ಒಂದೂ​ವರೆ ಗಂಟೆ​ಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗುದದ್ವಾರದ ಮೂಲಕ ಹೊಟ್ಟೆಯ ಭಾಗ​ಕ್ಕೆ ತಲು​ಪಿದ್ದ 24 ಸೆ.ಮೀ ಉದ್ದದ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.