ಇದೊಂದು ಸುದ್ದಿಯನ್ನು ನಂಬಲೇಬೇಕಾಗಿದೆ. ಚಮಚ ನುಂಗಿದವರನ್ನು, ನಾಣ್ಯ ನುಂಗಿದವರ ಸುದ್ದಿ ಕೇಳಿದ್ದೇವೆ. ಹೊಟ್ಟೆಯಿಂದ ಕೆಜಿಗಟ್ಟಲೆ ದುರ್ಮಾಂಸ ಹೊರಕ್ಕೆ ತೆಗೆದಿದ್ದು ಇದೆ. ಆದರೆ ಈ ಸುದ್ದಿ ಅದೆಲ್ಲಕ್ಕಿಂತ ಭಿನ್ನ.

ಫರೀದಾಬಾದ್[ಅ.03] ಹರಿಯಾಣದ ಫರೀದಾಬಾದ್ ನಲ್ಲಿ ವ್ಯಕ್ತಿಯೊಬ್ಬ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಾಗ ತೆಗೆದ ಎಕ್ಸರೆಯಲ್ಲಿ ಸ್ಟೀಲ್ ಲೋಟವೊಂದು ಕಾಣಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫರೀದಾಬಾದ್ ನ ಬಿ.ಕೆ. ಆಸ್ಪತ್ರೆಗೆ 30 ವರ್ಷದ ವ್ಯಕ್ತಿ ಬಂದು ಹೊಟ್ಟೆ ನೋವು ಜೋರಾಗಿದೆ ಎಂದಿದ್ದಾನೆ. ಎಕ್ಸರೆ ಮಾಡಿದಾಗ ಹೊಟ್ಟೆಯಲ್ಲಿ ಸ್ಟೀಲ್ ಲೋಟ ಕಾಣಿಸಿದೆ. ಇದು ಹೊಟ್ಟೆ ಒಳಗೆ ಹೇಗೆ ಸೇರಿತು ಎಂದು ವೈದ್ಯರು ಪ್ರಶ್ನೆ ಮಾಡಿದ್ದಾರೆ.

ಗುದದ್ವಾರದ ಮೂಲಕವೇ ಲೋಟ ತೆಗೆಯಲು ವೈದ್ಯರು ಮುಂದಾಗಿದ್ದಾರೆ. ಆದ್ರೆ ಗುದದ್ವಾರ ಗಾಯಗೊಂಡಿದ್ದರಿಂದ ಚಿಕಿತ್ಸೆ ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ.