30 ಕೋಟಿ ರೂಪಾಯಿ ಲಾಟರಿ ಜಾಕ‌್‌ಪಾಟ್ ಗೆದ್ದ ಬಾಯ್‌ಫ್ರೆಂಡ್ ಇದೀಗ ಬಹುಮಾನ ಮೊತ್ತವೂ ಇಲ್ಲ, ತನ್ನ ಜೊತೆಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್ ಕೂಡ ಇಲ್ಲ. ಈತನ ಪರಿಸ್ಥಿತಿ ಯಾರಿಗೂ ಬೇಡ.

ಕೆನಡಾ(ಜೂ.01) ಸತತ ಪ್ರಯತ್ನದ ಬಳಿಕ ಬರೋಬ್ಬರಿ 30 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿದೆ. ಲಾಟರಿ ಬಹುಮಾನ ಗೆಲ್ಲುತ್ತಿದ್ದಂತೆ ಈತ ಹಿರಿ ಹಿರಿ ಹಿಗ್ಗಿದ್ದಾನೆ. ತನ್ನ ಜೊತೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್ ಜೊತೆ ಮುಂದಿನ ದಿನಗಳಲ್ಲಿ ಹಾಯಾಗಿರಲು ನಿರ್ಧರಿಸಿದ್ದಾನೆ. ಇಬ್ಬರ ಜೀವನ, ಹಣ ಹೂಡಿಕೆ, ಲಾಭ ಹೀಗೆ ಎಲ್ಲಾ ಲೆಕ್ಕಾಚಾರ ಮಾಡಿದ್ದಾನೆ. ಇನ್ನೇನು ಲಾಟರಿ ಹಣ ತನ್ನ ಖಾತೆಗೆ ಜಮೆ ಆಗಬೇಕು ಅನ್ನುವಷ್ಟರಲ್ಲಿ ಕೆಲ ಸಮಸ್ಯೆಗಳು ಎದುರಾಗಿದೆ. ಬಳಿಕ ಏನಾಗಿದೆ ಅನ್ನೋವಷ್ಟರಲ್ಲಿ ತನ್ನ ಜೊತೆಗೆ 2 ವರ್ಷಗಳಿಂದ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್ ಇಲ್ಲ, ಇತ್ತ ಗೆದ್ದ 30 ಕೋಟಿ ರೂಪಾಯಿ ಕೂಡ ಇಲ್ಲದಾಗಿದೆ.

ಈ ಘಟನೆ ನಡೆದಿರುವುದು ಕೆನಾಡದಲ್ಲಿ. ಕೆನಾಡದ ಲಾರೆನ್ಸ್ ಕ್ಯಾಂಪ್‌ಬೆಲ್‌ಗೆ ಲಾಟರಿ ಖರೀದಿಸುವ ಅಭ್ಯಾಸವಿತ್ತು. ತಿಂಗಳಿಗೊಮ್ಮೆ, ಅಥವಾ ತಿಂಗಳಿಗೆ 2 ಬಾರಿ ಲಾಟರಿ ಖರೀದಿಸುತ್ತಿದ್ದರು. ಬಹುಮಾನ ಗೆಲ್ಲದಿದ್ದರೂ ಪ್ರಯತ್ನ ಮುಂದುವರಿದಿತ್ತು.ವೆಸ್ಟರ್ನ್ ಕೆನಡಾ ಕಾರ್ಪೋರೇಶನ್ ಹೊರತರುವ ಲಾಟರಿ ಖರೀದಿಸಿದ್ದಾರೆ. ಫಲಿತಾಂಶ ಬಂದಾಗ ಅಚ್ಚರಿಯಾಗಿದೆ. ಕಾರಣ ಮಧ್ಯಮ ವರ್ಗದಲ್ಲಿದ್ದ ಲಾರೆನ್ಸ್ ಹಲವು ವರ್ಷಗಳಿಂದ ಗೆಳತಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಇದರ ನಡುವೆ 2 ವರ್ಷಗಳಿಂದ ಆಕೆಯ ಜೊತೆ ಲಿವೀಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಲಾರೆನ್ಸ್‌ ತನ್ನ ಗೆಳತಿಯನ್ನು ಸಂಪೂರ್ಣ ನಂಬಿದ್ದ. ಲಾಟರಿ ಗೆದ್ದ ಕಾರಣ ಶೀಘ್ರದಲ್ಲೇ ಮದುವೆಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಲು ತಯಾರಿ ನಡೆಸಿದ್ದ.

30 ಕೋಟಿ ರೂಪಾಯಿ ಗೆಳತಿ ಖಾತೆಗೆ ಹೋಗಿದ್ದು ಹೇಗೆ?

30 ಕೋಟಿ ರೂಪಾಯಿ ಲಾಟರಿ ಹಣವನ್ನು ಲಾರೆನ್ಸ್ ತನ್ನ ಖಾತೆಗೆ ಜಮೆ ಮಾಡಿಸಲು ವೆಸ್ಟರ್ನ್ ಕೆನಡಾ ಕಾರ್ಪೋರೇಶನ್ ಲಿಮಿಟೆಡ್ ಕಚೇರಿಗೆ ತೆರಳಿದ್ದಾನೆ. ಆದರೆ ತನ್ನ ಕೆನಡಾ ಐಡಿ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ಬ್ಯಾಂಕ್ ಖಾತೆ ಹಾಗೂ ಐಡಿ ಕಾರ್ಡ್‌ನಲ್ಲಿರುವ ಹೆಸರು ಹಾಗೂ ವಿಳಾಸದಲ್ಲಿ ವ್ಯತ್ಯಾಸವಿತ್ತು. ಹೀಗಾಗಿ ಖಾತೆಗೆ ಜಮೆ ಮಾಡಲು ಸಾಧ್ಯವಾಗಲಿಲ್ಲ. ತಕ್ಷಣವೇ ತನ್ನ ಗರ್ಲ್‌ಪ್ರೆಂಡ್ ಖಾತೆ, ಐಡಿ ಕಾರ್ಡ್ ಎಲ್ಲವನ್ನು ನೀಡಿ ಗೆಳತಿ ಖಾತೆಗೆ 30 ಕೋಟಿ ರೂಪಾಯಿ ಲಾಟರಿ ಮೊತ್ತ ಜಮೆ ಮಾಡಲು ಹೇಳಿದ್ದಾನೆ. ಇದರಂತೆ ಲಾಟರಿ ಸಂಸ್ಥೆ ಹಣ ಜಮೆ ಮಾಡಿದೆ.

ಹಣ ಖಾತೆಗೆ ಜಮೆ ಆಗುತ್ತಿದ್ದಂತೆ ಗೆಳತಿ ನಾಪತ್ತೆ

ಬರೋಬ್ಬರಿ 30 ಕೋಟಿ ರೂಪಾಯಿ ಹಣ ಜಮೆ ಆಗುತ್ತಿದ್ದಂತೆ ಗೆಳತಿ ನಾಪತ್ತೆಯಾಗಿದ್ದಾಳೆ. ಫೋನ್ ಸ್ವಿಚ್ ಆಫ್, ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಗೆಳತಿ ನಾಪತ್ತೆ ಕುರಿತು ದೂರು ನೀಡಿದ್ದಾನೆ. ಇದರ ನಡುವೆ ತನ್ನ ಜೊತೆಗೆ 2 ವರ್ಷಗಳಿಂದ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿ ಬೇರೊಬ್ಬನ ಜೊತೆ ಪರಾರಿಯಾಗಿರುವುದು ಪತ್ತೆಯಾಗಿದೆ. ಇದು ಲಾರೆನ್ಸ್ ಆಕ್ರೋಶ ಮತ್ತಷ್ಟು ಹೆಚ್ಚಿಸಿದೆ. 30 ಕೋಟಿ ರೂಪಾಯಿ ಹಣವೂ ಇಲ್ಲ, ಇತ್ತ ಗೆಳತಿಯೂ ಇಲ್ಲ ಅನ್ನೋ ಪರಿಸ್ಥಿತಿ ಈತನದ್ದು. ಇತ್ತ ತನ್ನ 30 ಕೋಟಿ ರೂಪಾಯಿ ಹಣ ಮರುಪಾವತಿಸಲು ಮಾಜಿ ಗೆಳತಿಗೆ ಸೂಚಿಸಬೇಕು ಎಂದು ಲಾರೆನ್ಸ್ ಕೋರ್ಟ್ ಮೆಟ್ಟಿಲೇರಿದ್ದಾನೆ.

ನಮ್ಮದು ರೋಮ್ಯಾಂಟಿಕ್ ರಿಲೇಶನ್‌ಶಿಪ್ ಆಗಿತ್ತು. ಶೀಘ್ರದಲ್ಲೇ ಅದಿಕೃತವಾಗಿ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಲು ಪ್ಲಾನ್ ಮಾಡಿದ್ದೆವು. ಲಾಟರಿ ಹಣ ಗೆದ್ದಿದ್ದ ಕಾರಣ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿತ್ತು. ಆದರೆ ಗೆಳತಿ ಮೋಸ ಮಾಡಿದ್ದಾಳೆ. ಈಕೆಯಿಂದ ತನ್ನ ಲಾಟರಿ ಹಣ ಹಿಂದಿರುಗಿಸಬೇಕು ಎಂದು ಕೋರ್ಟ್‌ನಲ್ಲಿ ಲಾರೆನ್ಸ್ ಮನವಿ ಮಾಡಿದ್ದಾರೆ. 2024ರಿಂದ ಈ ಪ್ರಕರಣ ಕೋರ್ಟ್‌ನಲ್ಲಿದೆ. ವಿಚಾರಣೆ ಮೇಲೆ ವಿಚಾರಣೆ ನಡೆಯುತ್ತಿದೆ. ಆದರೂ ಇನ್ನು ಸಮಸ್ಯೆ ಇತ್ಯರ್ಥವಾಗಿಲ್ಲ. ಇತ್ತ ಲಾರೆನ್ಸ್‌ಗೆ ಹಣವೂ ಇಲ್ಲ, ಗೆಳತಿಯೂ ಇಲ್ಲ ಜೊತೆಗೆ ಇದ್ದ ಸಮಯ ಕೋರ್ಟ್ ಅಲೆದಾಡುವಂತಾಗಿದೆ.