ನೆರೆಯ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸುವಲ್ಲಿ ಯಶ ಕಂಡಿದ್ದು, ಅದನ್ನು ತಡೆಯಲು ಗೋವಾದ ಆಡಳಿತಾರೂಢ ಬಿಜೆಪಿ ವಿಫಲವಾಗಿದೆ ಎಂದು ಗೋವಾ ವಿಪಕ್ಷಗಳು ಆರೋಪಿಸಿವೆ. 

ನವದೆಹಲಿ (ಮಾ.22): ನೆರೆಯ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸುವಲ್ಲಿ ಯಶ ಕಂಡಿದ್ದು, ಅದನ್ನು ತಡೆಯಲು ಗೋವಾದ ಆಡಳಿತಾರೂಢ ಬಿಜೆಪಿ ವಿಫಲವಾಗಿದೆ ಎಂದು ಗೋವಾ ವಿಪಕ್ಷಗಳು ಆರೋಪಿಸಿವೆ. ‘ಹೀಗಾಗಿ ಮಹದಾಯಿ ನೀರು ಕರ್ನಾಟಕಕ್ಕೆ ಹೋಗಲ್ಲ ಎಂಬ ಗ್ಯಾರಂಟಿಯನ್ನು ಪ್ರಧಾನಿ ನರೇಂದ್ರ ಮೋದಿ ಈ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಘೋಷಿಸಬೇಕು’ ಎಂದು ಒತ್ತಾಯಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಮಾತನಾಡಿದ ಕ್ರಾಂತಿಕಾರಿ ಗೋವಾಸ್ ಪಕ್ಷದ ಮುಖ್ಯಸ್ಥ ಮನೋಜ್ ಪರಬ್, ‘ಗೋವಾ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಗಳು ಮಹದಾಯಿ ಜಲಮೂಲ ಉಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಮಹದಾಯಿ ನೀರನ್ನು ಕಳಸಾ ಉಪನದಿಯಿಂದ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲು ಕರ್ನಾಟಕ ಕಾಲುವೆಗಳನ್ನು ಅಗೆದಿದೆ’ ಎಂದರು.

‘ಹೀಗಾಗಿ ಮಹಾದಾಯಿ ನೀರನ್ನು ಬೇರೆಡೆಗೆ ಹರಿಸಲ್ಲ ಎಂಬುದು ‘ಮೋದಿ ಕಿ ಗ್ಯಾರಂಟಿ’ ಆಗಲಿ. ಗೋವಾದಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮೋದಿ ಅವರು ‘ಮಹದಾಯಿ ನದಿ ನೀರನ್ನು ನಾವು ತಿರುಗಿಸುವುದಿಲ್ಲ’ ಎಂದು ಕರಾವಳಿ ರಾಜ್ಯದ ಜನರಿಗೆ ಭರವಸೆ ನೀಡಬೇಕು’ ಎಂದು ಆಗ್ರಹಿಸಿದರು. ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ವಿಜಯ್ ಸರ್ದೇಸಾಯಿ ಮಾತನಾಡಿ, ಕರ್ನಾಟಕದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು ಎಂಬ ಉದ್ದೇಶದಿಂದ ಗೋವಾ ಸರ್ಕಾರ ಕರ್ನಾಟಕಕ್ಕೆ ಶರಣಾಗಿದೆ ಎಂದು ಆರೋಪಿಸಿದರು.

ಜೆಡಿಎಸ್‌ ಈಗ ಇದೆಯೇ? ಇದ್ದರೆ ಎಲ್ಲಿದೆ?: ಡಿಸಿಎಂ ಡಿಕೆಶಿ ವ್ಯಂಗ್ಯ

ಬಿಜೆಪಿ ತಿರುಗೇಟು: ಬಿಜೆಪಿ ಗೋವಾ ಅಧ್ಯಕ್ಷ ಸದಾನಂದ ಶೇಟ್ ತನವಡೆ ಈ ಆರೋಪಗಳನ್ನು ರಾಜಕೀಯ ಸ್ಟಂಟ್ ಎಂದು ಬಣ್ಣಿಸಿದ್ದಾರೆ. ‘ವಿಷಯ ನ್ಯಾಯಾಲಯದಲ್ಲಿದೆ. ಮಹದಾಯಿ ಉಳಿಸಲು ಬಿಜೆಪಿ ಬದ್ಧವಾಗಿದೆ’ ಎಂದಿದ್ದಾರೆ.